ಎಪ್ರಿಲ್ 7-10: ಪುಣ್ಚಪ್ಪಾಡಿ ಶಾಲೆಯಲ್ಲಿ ಮಕ್ಕಳ ಕಲಿಕಾ ಶಿಬಿರ “ಕನಸಿನ ಕಲಿಕೆ”

0

ಪುತ್ತೂರು:  ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿಯಲ್ಲಿ   ಎ.7ರಂದು  ಆರಂಭಗೊಂಡು ಎ. 10ರ ತನಕ ನಾಲ್ಕು ದಿನಗಳ ಮಕ್ಕಳ ಕಲಿಕಾ ಶಿಬಿರ- ಕನಸಿನ ಕಲಿಕೆ ನಡೆಯಲಿದೆ.

ಕಲಾ ಸಾಹಿತ್ಯ ಪೋಷಕರಾದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಲೋಕೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಎಪ್ರಿಲ್ 10 ರಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಉಜಿರೆ ಇವರ ಅಧ್ಯಕ್ಷತೆಯಲ್ಲಿ , ನ್ಯಾಯವಾದಿ, ಸಾಹಿತಿ ಭಾಸ್ಕರ ಕೋಡಿಂಬಾಳ ಶಿಬಿರವನ್ನು ಸಮಾಪನೆಗೊಳಿಸಲಿದ್ದಾರೆ.

ಶಿಬಿರದಲ್ಲಿ ನಾಟಕ, ಹಾಡು, ಅಭಿನಯ, ನೃತ್ಯ, ಸಂಗೀತ ಕ್ರಿಯಾತ್ಮಕ ಚಿತ್ರಕಲೆ, ಫೋಮ್ ಡಿಸೈನ್, ಗ್ಲಾಸ್ ಪೇಯಿಂಟ್, ಸೃಜನಾತ್ಮಕ ಬರೆಹ, ಯೋಗ ಇತ್ಯಾದಿ ಕಲಿಕೆ ನಡೆಯಲಿದ್ದು ಜಿಲ್ಲೆಯ ಹೆಸರಾಂತ ಕಲಾವಿದರಾದ  ಮೌನೇಶ್ ವಿಶ್ವಕರ್ಮ,  ಭಾಸ್ಕರ್ ನೆಲ್ಯಾಡಿ,  ಧನಂಜಯ ಮರ್ಕಂಜ, ಪ್ರಜಿತ್ ರೈ ಸೂಡಿಮುಳ್ಳು,  ಯತೀಶ್ ಕುಮಾರ್, ನಿರಂಜನ ನಾಯ್ಕ್, ರಂಜಿತ್ ಪುಣ್ಚಪ್ಪಾಡಿ, ಶ್ರೀಮುಖ ರೈ ಚೆಂಬುತ್ತೋಡಿ, ಕುಮಾರಿ ಅಖಿಲ ನೆಕ್ರಾಜೆ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ದಾನಿಗಳಾದ ಅಭಿನವ್ ತಂತ್ರಧ್ಯಾನ್ (ಪ್ರೈ)ಲಿ. ಇವರು ಶಾಲೆಗೆ ನೀಡಿದ ಸ್ಮಾರ್ಟ್ ಟಿ.ವಿ., ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ದಿ.ಕುಮಾರ್ ಕೆ ಇವರ ಸ್ಮರಣಾರ್ಥ ಇವರ ಮಕ್ಕಳು ನೀಡಿದ ಕವಾಟುಗಳು, ಗ್ರಾಮ ಪಂಚಾಯತ್ ಸವಣೂರು ವತಿಯಿಂದ ನೀಡಲಾದ ವಿಶೇಷ ಶೌಚಾಲಯ, ಸೈಕಲ್ ಸ್ಟ್ಯಾಂಡ್ ಗಳ ಶಾಲಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಸವಣೂರು ಇದರ ಅಧ್ಯಕ್ಷರಾದ ರಾಜೀವಿ ಶೆಟ್ಟಿ, ಉಪಾಧ್ಯಕ್ಷರಾದ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಗಿರಿಶಂಕರ ಸುಲಾಯ, ಯಶೋಧ ನೂಜಾಜೆ, ಜಯಶ್ರೀ ಕುಚ್ಚೆಜಾಲು, ಊರಿನ ಗಣ್ಯರು, ಶಾಲಾ ದಾನಿಗಳು, ಮುಂತಾದವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಕೊನೆಯ ದಿನ ಮಕ್ಕಳ ಪ್ರತಿಭೆಗಳ ಪ್ರದರ್ಶನ ನಡೆಯಲಿದ್ದು ಶಿಬಿರವು ಶಾಲಾ ಎಸ್.ಡಿ.ಎಂಸಿ, ಪೋಷಕರು ಹಾಗೂ ಊರ ದಾನಿಗಳ ಸಹಕಾರದಿಂದ ನಡೆಯುವ ಉಚಿತ ಶಿಬಿರವಾಗಿದೆ ಎಂದು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗಾಯತ್ರಿ ಓಂತಿಮನೆ ಹಾಗೂ ಶಾಲಾ ಮುಖ್ಯಗುರು ರಶ್ಮಿತಾ ನರಿಮೊಗರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here