ಅಂಬಿಕಾ ವಿದ್ಯಾಲಯ ಸಿಬಿಎಸ್ ಇ ಯಲ್ಲಿ ಸ್ಕೌಟ್ಸ್ ಗೈಡ್ಸ್ ಬೇಸಗೆ ಶಿಬಿರ ಉದ್ಘಾಟನೆ

0

  • ಸಂಸ್ಕೃತಿ ಯ ಜೊತೆಗೆ ಬದುಕು : ಸುಬ್ರಮಣ್ಯ ನಟ್ಟೋಜ

ಪುತ್ತೂರು : ನಗರದ ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್ ಇ ಯಲ್ಲಿ ಏಪ್ರಿಲ್ 4 ರಂದು ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಬೇಸಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಶಿಬಿರವನ್ನು ಉದ್ಘಾಟಿಸಿದ ಅಂಬಿಕಾ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಸುಬ್ರಮಣ್ಯ ನಟ್ಟೋಜ ಮಾತನಾಡುತ್ತಾ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅದರದ್ದೇ ಆದ ಗೌರವವಿದೆ. ಭಾರತಕ್ಕೆ ಮತ್ತು ಅಮೇರಿಕಕ್ಕೆ ವ್ಯತ್ಯಾಸ ವಿದೆ. ಭಾರತದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿಗೂ ತಾನೊಬ್ಬ ಭಾರತೀಯನೆಂಬ ಹೆಮ್ಮೆ ಇರಬೇಕು. ವಿದ್ಯಾರ್ಥಿಗಳು ಸಂಸ್ಕೃತಿಯ ಜೊತೆಗೆ ಬದುಕು ಕಲಿಯಬೇಕು. ಸ್ವಚ್ಛತೆ,ದಯೆ,ಆತ್ಮಗೌರವ ಮುಂತಾದ ಒಳ್ಳೆಯ ಗುಣಗಳನ್ನು ಅಳವಡಿಕೊಳ್ಳಬೇಕು ತಾನು ಮಾಡುವ ಕೆಲಸದ ಮೂಲಕ ಆತ್ಮತೃಪ್ತಿ ಯನ್ನು ಹೊಂದಬೇಕು ದೇಶದ ಉತ್ತಮ ನಾಗರಿಕನಾಗಿ ತಾಯಿ ಭಾರತಿಯನ್ನು ಪೂಜಿಸಿ ಬದುಕಿನಲ್ಲಿ ಸಾರ್ಥಕತೆಯನ್ನು ಪಡೆಯಿರಿ ಎಂದು ಶುಭ ಹಾರೈಸಿದರು. ಅಂಬಿಕಾ ವಿದ್ಯಾಲಯ ಭಾರತೀಯ ಪರಿಕಲ್ಪನೆಯ ಆಧಾರದಲ್ಲಿ ಮುನ್ನಡೆಯುತ್ತಿದೆ, ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದೆ. ಸ್ಕೌಟ್ ಮತ್ತು ಗೈಡ್ಸ್ ಘಟಕ ದೇಶಪ್ರೇಮವನ್ನು ಬಡಿದೆಬ್ಬಿಸುವ ಕೆಲಸದ ಜೊತೆಗೆ ವಿದ್ಯಾರ್ಥಿಗಳನ್ನು ಎಚ್ಚರಿಸುತ್ತಿದೆ ಎಂದು ಮುಖ್ಯ ಅತಿಥಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಗೈಡ್ಸ್ ಶಿಕ್ಷಕಿ ಶ್ರೀಮತಿ ಅನುರಾಧ ತಿಳಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರಾರಂಭ ಅದರ ಮೂಲ ಹೆಜ್ಜೆಗಳಾದ, ಸಮವಸ್ತ್ರ, ಸಂಕೇತಗಳು,ಗಂಟುಗಳ ಪರಿಚಯ, ಧ್ಯೇಯ ವಾಕ್ಯ, ವಂದನೆ, ಎಡಗೈ ಹಸ್ತಲಾಘವ ಸ್ಕೌಟ್ ಪ್ರತಿಜ್ಞೆ ಹಾಗೂ ನಿಯಮಗಳು ಹಾಗೂ ಆಟಗಳನ್ನು ಪರಿಚಯಿಸಿದರು.

 


ಸಮಾರಂಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕೋಶಾಧಿಕಾರಿ ಶ್ರೀ ಮತಿ ರಾಜಶ್ರೀ ನಟ್ಟೋಜ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸ್ಕ್ಯಾರ್ಫ್ ವಿತರಣೆ ಮಾಡಿದರು. ವಿದ್ಯಾರ್ಥಿ ಆತ್ರೆಯ ಭಟ್ ಪ್ರಾರ್ಥನೆ ಹಾಡಿದರು.ವಿದ್ಯಾಲಯದ ಸ್ಕೌಟ್ ಮಾಸ್ಟರ್ ಶ್ರೀ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ,ಗೈಡ್ ಶಿಕ್ಷಕಿ ಶ್ರೀ ಚಂದ್ರಕಲಾ ವಂದಿಸಿದರು.

LEAVE A REPLY

Please enter your comment!
Please enter your name here