ಫಿಲೋಮಿನಾ ಕಾಲೇಜಿನ ಎಂ.ಎಸ್.ಡಬ್ಲ್ಯೂನಿಂದ ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ ನರೇಗ ಯೋಜನೆ ಮಾಹಿತಿ ಕಾರ್ಯಗಾರ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಂಗಳೂರು ಹಾಗೂ ಗ್ರಾಮ ಪಂಚಾಯತ್ ಆರ್ಯಪು ಇದರ ಜಂಟಿ ಆಶ್ರಯದಲ್ಲಿ ವಿಶೇಷ ಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ನರೇಗ ಯೋಜನೆ ಮಾಹಿತಿ ಕಾರ್ಯಗಾರ ಸಭೆಯು ಮಾ. 31ರಂದು ಆರ್ಯಾಪು ಎಂಬಲ್ಲಿ ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ.ಕೆ  ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಆರ್ಯಾಪು ಗ್ರಾ.ಪಂ ಉಪಾಧ್ಯಕ್ಷೆ ಪೂರ್ಣಿಮಾರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆರ್ಯಾಪು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ನಾಗೇಶ್.ಎಂ ರವರು  ವಿಶೇಷ ಮಕ್ಕಳಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ತಂದಿದೆ ಅದರ ಉಪಯೋಗ ಮುಖ್ಯ, ಹಾಗೆಯೇ ಸಮಾಜದಲ್ಲಿ ಅವರಿಗೆ ತಾರತಮ್ಯ ಸರಿಯಲ್ಲ ಎಂದರು. ನಂತರ ನರೇಗಾ ಯೋಜನೆ ಮಾತು ಅದರ ಉಪಯೋಗ ಕುರಿತು ಮಾಹಿತಿ ನೀಡಿದರು.

 

ಚೈಲ್ಡ್ ರೈಟ್ಸ್ ಟ್ರಸ್ಟ್ (ಎನ್. ಜಿ. ಒ) ಇದರ ವನಿತಾ ಪದ್ಮುಂಜರವರು ಸಂದರ್ಭೋಚಿತವಾಗಿ  ಮಾತನಾಡುತ್ತಾ, ವಿಶೇಷಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಅತ್ಯಂತ ಮುಖ್ಯ ಸ್ಥಾನವಿದೆ ಅವರಿಗೂ ಜೀವನ ನಡೆಸುವ ಹಕ್ಕು ಶಿಕ್ಷಣ ಪಡೆಯುವ ಹಕ್ಕು ಇದೆ , ಅವರಿಗೆ ಕೀಳರಿಮೆ ಮಾಡದೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದರು. 

ವಿಶೇಷ ಚೇತನಾರ ಸೇವಾ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷೆ ನಯನಾ ರೈ ಇವರು, ವಿಶೇಷ ಮಕ್ಕಳಿಗೆ ವಸ್ತ್ರವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ನಯನ ಪ್ರದೀಪ್, ಎನ್. ಅರ್. ಎಲ್. ಎಂ ಸಂಜೀವಿನಿ ಸರೋವರ ಒಕ್ಕೂಟ ಮುಖ್ಯ ಪುಸ್ತಕ ಬರಹಗಾರರು ಆರ್ಯಾಪು, ನೇಮಕ್ಷಾ ಸುವರ್ಣ ಸದಸ್ಯರು, ಗ್ರಾಮ ಪಂಚಾಯತ್ ಆರ್ಯಪು, ಶೀತಲ್ ಕುಮಾರ್, ಉಪನ್ಯಾಸಕರು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ,  ಸಂತ ಫಿಲೋಮಿನಾ ಕಾಲೇಜ್ ಪುತ್ತೂರು, ಕುಮಾರಿ ಅಕ್ಷತಾ, ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಕಡಬ,  ಅಂಬಿಕಾ ರಮೇಶ್, ಅಧ್ಯಕ್ಷರು, ಸರೋವರ ಸಂಜೀವಿನಿ ಒಕ್ಕೂಟ ಆರ್ಯಾಪು, ಶ್ರೀ ಲಕ್ಷ್ಮಿಕಾಂತ್ ಹೆಗಡೆ ವಿಶೇಷಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಆರ್ಯಾಪು ಹಾಗೂ  ಶೇಷಪ್ಪ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ನೆಕ್ಕಿಲಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಸಭಾ ಕಾರ್ಯಕ್ರಮವನ್ನು ಪ್ರಥಮ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಆಶಿತ ರೈ ನಿರೂಪಿಸಿದರು, ಶಿಲ್ಪಕ್ ಸ್ವಾಗತಿಸಿದರು, ಜಿಲ್ಷ ಪ್ರಾರ್ಥಿಸಿಧರು ಹಾಗೂ ಎಡ್ವರ್ಡ್ ಡಿ ಸೋಜ ವಂದಿಸಿದರು.

LEAVE A REPLY

Please enter your comment!
Please enter your name here