ಪಿ.ಡಿ.ಗಂಗಾಧರ ರೈ- ಸುವಾಸಿನಿ ಜಿ.ರೈಯವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ

0

* ಸರ್ವ ಕ್ಷೇತ್ರದಲ್ಲೂ ಸೈ ಎನಿಸಿದ ಗಂಗಣ್ಣ- ರಾಕೇಶ್ ರೈ
* ಶಿಕ್ಷಣಕ್ಕೆ ಆದ್ಯತೆ- ಗಿರಿಶಂಕರ್ ಸುಲಾಯ ದೇವಸ್ಯ
* ಗೌರವಯುತವಾದ ಬದುಕು- ಕೃಷ್ಣ ರೈ

ಪುತ್ತೂರು: ಸವಣೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಸವಣೂರು ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಪುಣ್ಚಪ್ಪಾಡಿ ದೇವಸ್ಯ ಪಿ.ಡಿ.ಗಂಗಾಧರ್ ರೈ ಮತ್ತು ಸುವಾಸಿನಿ ಜಿ.ರೈ ಕಳ್ಳೀಗೆ ಬೀಡು ರವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಸಮಾರಂಭವು ಅದ್ದೂರಿಯಾಗಿ ಮೇ.22ರಂದು ಪುತ್ತೂರು ದರ್ಬೆ ಪ್ರಶಾಂತ್ ಮಹಲ್‌ನ ಸಭಾಭವನದಲ್ಲಿ ಜರಗಿತು. ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆಯ ಯಜಮಾನ ವಿಶ್ವನಾಥ ರೈ- ರತಿ ರೈ ದಂಪತಿ ದೀಪ ಬೆಳಗಿಸಿ, ಕಾರ‍್ಯಕ್ರಮಕ್ಕೆ ಚಾಲನೆಗೈದರು.


ಗಂಗಾಧರ ರೈ ಮತ್ತು ಸುವಾಸಿನಿ ಜಿ.ರೈಯವರುಗಳು ಪರಸ್ಪರ ಹಾರಾರ್ಪಣೆಗೈದರು, ಬಳಿಕ ಕೇಕ್ ಕತ್ತರಿಸಿದರು.


ಸರ್ವ ಕ್ಷೇತ್ರದಲ್ಲೂ ಸೈ ಎನಿಸಿದ ಗಂಗಣ್ಣ- ರಾಕೇಶ್ ರೈ
ಕಾರ‍್ಯಕ್ರಮದ ನಿರೂಪಕರಾದ, ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿರವರು ಮಾತನಾಡಿ ಪಿ.ಡಿ.ಗಂಗಾಧರ ರೈ ಮತ್ತು ಸುವಾಸಿನಿ ಜಿ.ರೈಯವರ ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಆಚರಣೆಯನ್ನು ನೋಡುವ ಸೌಭಾಗ್ಯ ನಮಗೆ ದೊರೆತಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ಪಿ.ಡಿ.ಗಂಗಾಧರ ರೈಯವರು ಕುಟುಂಬವನ್ನು ಪ್ರೀತಿಯಿಂದ ನೋಡಿಕೊಂಡು, ಕೃಷಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಮತ್ತು ಸಹಕಾರ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿ, ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮವಾದ ಸೇವೆಯನ್ನು ನೀಡಿದ್ದಾರೆ. ಪ್ರತಿಯೊಬ್ಬರಿಗೂ ಅಚ್ಚು ಮೆಚ್ಚಿನ ಗಂಗಣ್ಣನಾಗಿರುವ ಗಂಗಾಧರ ರೈಯವರು ಸರ್ವ ಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ. ಗಂಗಾಧರ ರೈಯವರ ಪತ್ನಿ ಸುವಾಸಿನಿ ರೈಯವರು ಉತ್ತಮ ಗೃಹಿಣಿಯಾಗಿ ಪತಿಯ ಎಲ್ಲಾ ಕೆಲಸಗಳಿಗೆ ಬೆಂಬಲವನ್ನು ನೀಡಿದ್ದಾರೆ ಇವರ ಆದರ್ಶ ದಾಂಪತ್ಯ ಜೀವನ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.


ಶಿಕ್ಷಣಕ್ಕೆ ಆದ್ಯತೆ- ಗಿರಿಶಂಕರ್ ಸುಲಾಯ ದೇವಸ್ಯ
ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯರವರು ಮಾತನಾಡಿ ನಮ್ಮ ಮಾವನವರಾದ ಗಂಗಾಧರ ರೈಯವರು ನಮಗೆ ಉತ್ತಮ ಶಿಕ್ಷಣವನ್ನು ಪಡೆಯಲು ತುಂಬಾ ಪ್ರೋತ್ಸಾಹವನ್ನು ನೀಡಿದ್ದಾರೆ. ಗಂಗಾಧರ ರೈಯವರು ಉತ್ತಮ ಕ್ರೀಡಾಪಟುವಾಗಿದ್ದರು, ಶಿಸ್ತುಬದ್ಧವಾದ ಜೀವನ ಕ್ರಮವನ್ನು ಅವರು ರೂಢಿಸಿಕೊಂಡಿದ್ದರು. ಸಮಾಜದಲ್ಲಿ ನ್ಯಾಯ ಪಂಚಾತಿಗೆಯನ್ನು ಮಾಡುವ ಮೂಲಕ ಉತ್ತಮ ಹೆಸರನ್ನು ಪಡೆದಿದ್ದಾರೆ ಎಂದು ಹೇಳಿದರು.

ಗೌರವಯುತವಾದ ಬದುಕು- ಕೃಷ್ಣ ರೈ
ಸಾಮಾಜಿಕ ಮುಂದಾಳು ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆರವರು ಮಾತನಾಡಿ ಸಮಾಜ ಮತ್ತು ಕುಟುಂಬದಲ್ಲಿ ಗೌರವಯುತವಾದ ಬದುಕು ನಡೆಸಿಕೊಂಡು ಬರುತ್ತಿರುವ ಗಂಗಾಧರ ರೈ-ಸುವಾಸಿನಿ ರೈಯವರ ದಾಂಪತ್ಯ ಜೀವನದ ಸುವರ್ಣಮಹೋತ್ಸವ ಸಂಭ್ರಮವನ್ನು ಕಂಡು ತುಂಬಾ ಸಂತೋಷ ಆಗಿದೆ ಎಂದರು.
ವೇದಿಕೆಯಲ್ಲಿ ಪಿ.ಡಿ.ಕೃಷ್ಣ ಕುಮಾರ್ ರೈ ಪುಣ್ಚಪ್ಪಾಡಿ ದೇವಸ್ಯ, ಬಾಲಕೃಷ್ಣ ರೈ ಅಭ್ಯುದಯ ದೇವಸ್ಯ, ಈಶ್ವರಿ ಟಿ.ಸುಲಾಯ ಪುಣ್ಚಪ್ಪಾಡಿ ದೇವಸ್ಯ, ಪ್ರೇಮಲತಾ ಬಿ.ರೈ, ಸುನಂದಾ ದಯಾನಂದ ಶೆಟ್ಟಿ ಪರಾರಿ, ಸರಿತಾ ದಿನಕರ್ ರೈ, ಗಂಗಾಧರ್ ರೈ ಮತ್ತು ಸುವಾಸಿನಿ ರೈರವರ ಪುತ್ರರಾದ ಶರತ್ ಕುಮಾರ್ ರೈ, ಸನತ್ ಕುಮಾರ್ ರೈ, ಸೊಸೆಯಂದಿರಾದ ವಂದನಾ ಶರತ್, ಶಾಲಿನಿ ಸನತ್, ಮೊಮ್ಮಕ್ಕಳಾದ ಶ್ರದ್ಧನ್ ರೈ, ಧರಣ್ ರೈ, ಸನಿಹ ರೈ ಹಾಗೂ ಸನ್ನಿಽ ರೈರವರುಗಳು ಉಪಸ್ಥಿತರಿದ್ದರು. ಮಾನ್ವಿ ಜಿ.ಎಸ್ ದೇವಸ್ಯರವರು ಪ್ರಾರ್ಥನೆಗೈದರು. ಶರತ್ ಕುಮಾರ್ ರೈ ವಂದಿಸಿದರು. ಸಮಾರಂಭದಲ್ಲಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಹಕಾರ ಕ್ಷೇತ್ರದ ಮುಖಂಡರುಗಳು, ಉದ್ಯಮಿಗಳು, ಬಂಧುಗಳು ಹಾಗೂ ಹಿತೈಷಿಗಳು ಸೇರಿದಂತೆ ಐನ್ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

ಪುಣ್ಚಪ್ಪಾಡಿ ದೇವಸ್ಯ ಪಿ.ಡಿ.ಗಂಗಾಧರ್ ರೈ ಮತ್ತು ಸುವಾಸಿನಿ ಜಿ.ರೈ ಕಳ್ಳೀಗೆ ಬೀಡು ರವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಸಮಾರಂಭವನ್ನು ಅದ್ದೂರಿಯಾಗಿ, ಅರ್ಥಪೂರ್ಣ ರೀತಿಯಲ್ಲಿ ಆಯೋಜಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚಿಗೆ ದಾಂಪತ್ಯ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿರುವ ಸುಬ್ಬಣ್ಣ ರೈ ಖಂಡಿಗ- ಶ್ರೀಮಂತಿ ರೈ, ಎಂ. ಗಂಗಾಧರ ರೈ- ತಾರಾ ರೈ, ಶ್ರೀಧರ ಶೆಟ್ಟಿ -ಕಸ್ತೂರಿ ಶೆಟ್ಟಿ ಮತ್ತು 52ನೇ ವರ್ಷದ ವೈವಾಹಿಕ ಸಂಭ್ರಮದಲ್ಲಿ ಇರುವ ಕೃಷ್ಣ ರೈ-ಪದ್ಮಾಕ್ಷಿ ರೈ ಪುಣ್ಚಪ್ಪಾಡಿ ತಳಮನೆ ಹಾಗೂ 19ನೇ ವರ್ಷದ ವೈವಾಹಿಕ ಸಂಭ್ರಮದಲ್ಲಿರುವ ಇರುವ ಶರತ್ ಕುಮಾರ್ ರೈ-ವಂದನಾ ಶರತ್ ರೈರವರುಗಳನ್ನು ಹೂಗುಚ್ಚ ನೀಡಿ, ಗೌರವಿಸಲಾಯಿತು.

LEAVE A REPLY

Please enter your comment!
Please enter your name here