ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಯುನಿಫಾರ್ಮ್ ವ್ಯವಸ್ಥೆ: ಪ್ರಯಾಣಿಕರ ಬಸ್ ತಂಗುದಾಣ, ಹೈಮಾಸ್ಟ್ ಲೈಟ್ ಉದ್ಘಾಟನೆಯಲ್ಲಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ರಾಜ್ಯದಲ್ಲಿ ಸ್ವಚ್ಛತೆಯಲಿ ತನ್ನನ್ನು ತಾನು ಗುರುತಿಸಿಕೊಳ್ಳುವ ಕೆಲಸ ಮಾಡುತ್ತಿರುವ ನಗರಸಭೆ ಸುಂದರಿಕರಣಕ್ಕಾಗಿ ಯುನಿಫಾರ್ಮ್ (ಒಂದೇ ರೀತಿಯ) ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಇಲ್ಲಿನ ಪ್ರಧಾನ ಅಂಚೆಕಚೇರಿಯ ಬಳಿಯ ನೂತನವಾಗಿ ನಿರ್ಮಾಣಗೊಂಡ ಪ್ರಯಾಣಿಕರ ಬಸ್ ತಂಗುದಾಣ ಮತ್ತು ಬೊಳುವಾರು ಜಂಕ್ಷನ್‌ಲ್ಲಿ ರೂ. 5ಲಕ್ಷ ವೆಚ್ಚದಲ್ಲಿ ರಸ್ತೆ ಅಗಲೀಕರಣ ಮತ್ತು ಹೈಮಾಸ್ಟ್ ಲೈಟ್ ಅನ್ನು ಎ.10ರಂದು ಅವರು ಲೋಕಾರ್ಪಣೆಗೊಳಿಸಿ ಮಾತನಾಡಿದರು. ರಸ್ತೆ, ಬಸ್ ತಂಗುದಾಣ, ಬೀದಿ ದೀಪಗಳು ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಒಂದೇ ರೀತಿಯ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡು ನಗರ ಸುಂದರಿಕರಣ ಮಾಡಲಾಗುತ್ತಿದೆ. ಮುಂದೆ 25 ವರ್ಷಕ್ಕೆ ಪುತ್ತೂರು ಹೇಗೆ ಇರಬೇಕೆಂಬ ಚಿಂತನೆಯಲ್ಲಿ ಕೆಲಸ ಕಾರ್ಯಗಳು ನಗರಸಭೆ ಆಡಳಿತದಿಂದ ನಡೆಯುತ್ತಿದೆ ಎಂದ ಅವರು ನಗರಸಭೆ ಪೇಟೆಯಲ್ಲಿ ಎಲ್ಲೆಲ್ಲಿ ವಾಹನ ನಿಲುಗಡೆ, ರಸ್ತೆ ಅಗಲೀಕರಣ ಕುರಿತು ನಗರತ್ಥೋನ, ಶಾಸಕರ ಪ್ರದೇಶ ಅಭಿವೃದ್ಧಿ ಸೇರಿದಂತೆ ಬೇರೆ ಬೇರೆ ಯೋಜನೆಯಲ್ಲಿ ಮುಂದಿನ ದಿನ ಕಾರ್ಯಗತಗೊಳಿಸಲಿದ್ದೇವೆ ಎಂದರು.

ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭಾ ಸದಸ್ಯರಾದ ಸಂತೋಷ್ ಬೊಳುವಾರು, ದೀಕ್ಷಾ ಪೈ, ಗೌರಿ ಬನ್ನೂರು, ಪ್ರೇಮ ನಂದಿಲ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಹಲಂಗ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ಎಸ್ ಶೆಟ್ಟಿ, ಹರಿಪ್ರಸಾದ್, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಬಿಜೆಪಿ ನಗರ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ, ರಾಘವೇಂದ್ರ ಪ್ರಭು, ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್, ಎಸ್.ಐ ರಾಜೇಶ್ ಕೆ.ವಿ, ಸಂಚಾರ ಪೊಲೀಸ್ ಠಾಣೆ ಎಸ್.ಐ ರಾಮನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here