ಪುತ್ತೂರು ಜಾತ್ರೆ ಗದ್ದೆಯಲ್ಲಿ ಕ್ಯಾಂಪ್ಕೋ ಮಾರಾಟ ಮಳಿಗೆ ಉದ್ಘಾಟನೆ ಜಾತ್ರೆ ಬಂದವರು ಕ್ಯಾಂಪ್ಕೋದ ಸವಿಯನ್ನು ಪಡೆಯಿರಿ – ಕೇಶವಪ್ರಸಾದ್ ಮುಳಿಯ

0

ಪುತ್ತೂರು: ದೇಶದ್ಯಾದಂತ ಖ್ಯಾತಿಯ ಕ್ಯಾಂಪ್ಕೋ ಮಳಿಗೆ ಪುತ್ತೂರು ಜಾತ್ರೆಗೆ ಬಂದಿರುವುದು ಸಂತೋಷದ ವಿಷಯ. ಇಂತಹ ಸಂದರ್ಭದಲ್ಲಿ ಪುತ್ತೂರು ಜಾತ್ರೆಗೆ ಬಂದವರು ಕ್ಯಾಂಪ್ಕೋದ ಸವಿಯನ್ನು ಪಡೆಯುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ನುಡಿದರು.

ಕ್ಯಾಂಪ್ಕೋ ಸಂಸ್ಥೆಯಿಂದ ಪುತ್ತೂರು ಜಾತ್ರೆಯ ಕಂಬಳಗದ್ದೆಯಲ್ಲಿ ಅಳವಡಿಸಲಾದ ಮಳಿಗೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕ್ಯಾಂಪ್ಕೋ ಚಾಕಲೇಟ್ ಸಂಸ್ಥೆ ಪುತ್ತೂರು ಜಾತ್ರೆಯ ವ್ಯವಹಾರ ಮೇಳದಲ್ಲೂ ಮಳಿಗೆಯನ್ನು ಹಾಕಿಕೊಂಡಿದೆ. ಈ ನಿಟ್ಟನಲ್ಲಿ ಕ್ಯಾಂಪ್ಕೋ ಸಂಸ್ಥೆ ಪುತ್ತೂರು ಜಾತ್ರೆಗೆ ಇನ್ನಷ್ಟು ಮೆರುಗು ನೀಡುತ್ತಿದೆ. ಮುಳಿಯ ಸಂಸ್ಥೆಯಲ್ಲಿ ಗ್ರಾಹಕರ ಹುಟ್ಟಿದ ಹಬ್ಬದಕ್ಕೆ ಕ್ಯಾಂಪ್ಕೋ ಸಂಸ್ಥೆಯ ಚಾಕಲೇಟ್ ಕೊಡುವ ಮೂಲಕ ಕ್ಯಾಂಪ್ಕೋದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಜನರು ಎಷ್ಟು ಸಾಧ್ಯವೋ ಪುತ್ತೂರಿನ ಉತ್ಪನ್ನವಾದ ಕ್ಯಾಂಪ್ಕೋ ಚಾಕಲೇಟ್ ಖರೀದಿಸಿ ಎಂದರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ, ಆಡಳಿತ ನಿರ್ದೇಶಕ ಹೆಚ್.ಎಮ್.ಕೃಷ್ಣಕುಮಾರ್, ನಿರ್ದೇಶಕರಾದ ರಾಘವೇಂದ್ರ ಭಟ್ ಕೆದಿಲ, ಕೃಷ್ಣಪ್ರಸಾದ್ ಮಡ್ತಿಲ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಕ್ಯಾಂಪ್ಕೋ ಸಂಸ್ಥೆಯ ಮೆನೇಜರ್ ಉದಯ ಕುಮಾರ್ ರೈ, ಲಕ್ಷ್ಮಣ್ ಡೋಂಗ್ರೆ, ಎರಿಯ ಸೇಲ್ಸ್ ಮೆನೇಜರ್ ಚಂದ್ರಹಾಸ ಎಮ್.ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಾತ್ರೆ ಪ್ರಯುಕ್ತ ಕ್ಯಾಂಪ್ಕೋ ಉತ್ಪನ್ನಗಳಿಗೆ ಶೇ.10 ರಿಯಾಯಿತಿ
ಪುತ್ತೂರು ಜಾತ್ರೆಯ ಅಂಗವಾಗಿ ಜಾತ್ರ ಗದ್ಧೆಯಲ್ಲಿರುವ ಮಳಿಗೆಯಲ್ಲಿ ಕ್ಯಾಂಪ್ಕೋ ಚಾಕಲೇಟ್‌ನ ಎಲ್ಲಾ ಉತ್ಪನ್ನಗಳಿಗೆ ಶೇ.10 ರಿಯಾಯಿತಿ ನೀಡಲಾಗಿದೆ. ವಿವಿಧ ಮಾದರಿಯ ಕ್ಯಾಂಪ್ಕೋ ಚಾಕಲೇಟ್‌ಗಳ ಜೊತೆಗೆ ವಿನ್ನರ್, ಡ್ರೈಫ್ರುಡ್ಸ್, ಶುಗರ್ ಫ್ರೀ, ಆರ್ಗಾನೈಕ್ ಉತ್ಪನ್ನಗಳು ಇಲ್ಲಿ ಲಭ್ಯವಿದ್ದು, ಚಾಕಲೇಟ್ ಮಾಡುವ ಉತ್ಪನ್ನಗಳು ಕೂಡಾ ಇಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here