ಕುಂಜಾಡಿಯಲ್ಲಿ ನೇಮೋತ್ಸವ, ಅನ್ನಸಂತರ್ಪಣೆ

0


ಪುತ್ತೂರು: ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರ ಪಾಲ್ತಾಡಿ ಗ್ರಾಮದ ಕುಂಜಾಡಿ ಮನೆಯಲ್ಲಿ ಎ. 10 ರಂದು ನೇಮೋತ್ಸವ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಎ. 10 ರಂದು ಸಂಜೆ 4 ಕ್ಕೆ ಶ್ರೀ ದೈವಗಳ ಭಂಡಾರ ತೆಗೆದ ಬಳಿಕ, 6 ರಿಂದ ಶ್ರೀ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ಸಂಜೆ. 6.30 ರಿಂದ ಶ್ರೀ ದೈವಗಳಿಗೆ ಎಣ್ಣೆ ವೀಳ್ಯ ನೀಡಲಾಯಿತು. ರಾತ್ರಿ 8 ರ ಬಳಿಕ ಅನ್ನಸಂತರ್ಪಣೆ ನಡೆದ ಬಳಿಕ, ರಾತ್ರಿ 10 ರಿಂದ ಶ್ರೀ ರಕ್ತೇಶ್ವರಿ, ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ಎ. 11ರ ಬೆಳಿಗ್ಗೆ 6 ರತನಕ ನಡೆಯಿತು.



ಅನ್ನಸಂತರ್ಪಣೆ
ನೇಮೋತ್ಸವ ಪ್ರಯುಕ್ತ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನ್‌ದಾಸ ಸ್ವಾಮೀಜಿ, ರಾಜ್ಯ ಬಿಜೆಪಿ ಸಂಘಟನಾ ಕಾರ‍್ಯದರ್ಶಿ ಅರುಣ್‌ಜಿ, ಶಾಸPರುಗಳಾದ ಸಂಜೀವ ಮಠಂದೂರು, ಭರತ್ ಶೆಟ್ಟಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಕೇಂದ್ರ ರೈಲ್ವೇ ಇಲಾಖೆಯ ಸಲಹಾ ಸಮಿತಿ ಸದಸ್ಯ ಕೆ.ಪಿ.ಜಗದೀಶ್ ಅಧಿಕಾರಿ ಮೂಡಬಿದ್ರೆ, ದ,ಕ.ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಸಂತೋಷ್ ಕುಮಾರ್ ಬೊಳಿಯಾರ್, ಕೆ.ಟಿ.ಸುವರ್ಣ, ನಿತಿನ್ ಕುಮಾರ್, ಚಿತ್ರ ನಿರ್ಮಾಪಕ ಅರುಣ್ ರೈ, ಪ್ರಕಾಶ್ ಕುಮಾರ್ ಅರಿಗ ಬಂಬಿಲಗುತ್ತು ಸಹಿತ ರಾಜ್ಯದ ವಿವಿಧ ಧಾರ್ಮಿಕ, ಸಾಮಾಜಿಕ ಮುಂದಾಳುಗಳು, ಉದ್ಯಮಿಗಳು, ಸಂಘ ಸಂಸ್ಥೆಗಳ ಮುಖಂಡರುಗಳು ಸಹಿತ ಊರ,ಪರವೂರ ಹಿತೈಷಿಗಳು ಭಾಗವಹಿಸಿದ್ದರು. ಕುಂಜಾಡಿ ಕುಟುಂಬದ ಮಂಜುನಾಥ ರೈ, ಸುಶೀಲಾವತಿ ಎನ್ ಶೆಟ್ಟಿ ಕುಂಜಾಡಿ, ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರು ಅತಿಥಿಗಳನ್ನು ಗೌರವಿಸಿದರು.

ಮಾಣಿಲ ಶ್ರೀ ರವರಿಗೆ ಸನ್ಮಾನ
ನೇಮೋತ್ಸವ ಮುಕ್ತಾಯಗೊಂಡ ಬಳಿಕ, ಎ. 11 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನ್‌ದಾಸ ಸ್ವಾಮೀಜಿರವರನ್ನು ಕುಂಜಾಡಿ ಕುಟುಂಬದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

LEAVE A REPLY

Please enter your comment!
Please enter your name here