ನಗರಸಭೆಯಿಂದ ಜಾತ್ರಾ ಗದ್ದೆಯಲ್ಲಿ ಹಸಿ, ಒಣ ಕಸ ಸಂಗ್ರಹದ ತೊಟ್ಟಿ ವ್ಯವಸ್ಥೆ

0

  • ಸ್ವಚ್ಛತೆ ಕಾಪಾಡಿ ನಗರವನ್ನು ಸುಂದರಿಕರಣ ಮಾಡುವಲ್ಲಿ ಸಹಕರಿಸಿ- ಕೆ.ಜೀವಂಧರ್ ಜೈನ್

 


ಪುತ್ತೂರು: ಪುತ್ತೂರು ಜಾತ್ರೆ ಗದ್ದೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಗರಸಭೆವತಿಯಿಂದ ಜಾತ್ರ ಗದ್ದೆಯ ಗುರುತಿಸಿದ ಸ್ಥಳಗಳಲ್ಲಿ ಹಸಿ ಮತ್ತು ಒಣ ಕಸ ಸಂಗ್ರಹದ ತೊಟ್ಟಿ ವ್ಯವಸ್ಥೆಯನ್ನು ಮಾಡಲಾಗಿದ್ದು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಅದನ್ನು ನಗರಸಭೆ ಆವರಣದಲ್ಲಿ ಬಿಡುಗಡೆಗೊಳಿಸಿದರು.
ಸ್ವಚ್ಛತೆ ಕಾಪಾಡಿ ನಗರವನ್ನು ಸುಂದರಿಕರಣ ಮಾಡುವಲ್ಲಿ ಸಹಕರಿಸಿ:

ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಕಸದ ತೊಟ್ಟಿಗಳನ್ನು ಬಡುಗಡೆಗೊಳಿಸಿ ಮಾತನಾಡಿ ನಗರಸಭೆಯಲ್ಲಿ ಪೌರ ಕಾರ್ಮಿಕರು ಬಹಳಷ್ಟು ಮುತುವರ್ಜಿ ವಹಿಸಿ ನಗರದ ಸ್ವಚ್ಛತೆ ಕಾಪಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸಾರ್ವಜನಿಕರು ಸಹಕಾರ ಬೇಕು. ಈ ನಿಟ್ಟಿನಲ್ಲಿ ಪುತ್ತೂರು ಜಾತ್ರೆಯ ಗದ್ದೆಯಲ್ಲಿ ಬರುವ ಸಾರ್ವಜನಿಕರು ಕಸವನ್ನು ಆಯಾ ನಿಗದಿ ಪಡಿಸಿದ ಸ್ಥಳದಲ್ಲಿರುವ ಕಸದ ತೊಟ್ಟಿಗೆ ಹಾಕುವಂತೆ ವಿನಂತಿಸಿದರು.

ಒಟ್ಟು 20 ಕಸದ ತೊಟ್ಟಿ ಅಳವಡಿಕೆ:

ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ಈಗಾಗಲೇ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಜಾತ್ರ ಗದ್ದೆಯಲ್ಲಿನ ಅಂಗಡಿಗಳಿಗೆ ಕಸದ ತೊಟ್ಟಿ ವಿತರಣೆ ಮಾಡಲಾಗಿದೆ. ಆದರೆ ಜಾತ್ರೆ ಗದ್ದೆಯ ರಥ ಬೀದಿ ಮತ್ತು ಇತರ ಗದ್ದೆ ಮೈದಾನದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬೀಸಾಡುವಂತಹದು ನಡೆಯಬಾರದು ಎಂದು ನಗರಸಭೆ ವತಿಯಿಂದ ಜಾತ್ರ ಗದ್ದೆಯ ಆಯಾ ಗುರುತಿಸಿದ ಸ್ಥಳಗಳಲ್ಲಿ ಹಸಿ ಮತ್ತು ಒಣ ಕಸ ಒಟ್ಟು 20 ತೊಟ್ಟಿಗಳನ್ನು ಇಡಲಾಗುವುದು ಎಂದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಸದಸ್ಯರಾದ ಸುಂದರ ಪೂಜಾರಿ ಬಡಾವು, ಮೋಹಿನಿ ವಿಶ್ವನಾಥ, ಸಂತೋಷ್ ಬೊಳುವಾರು, ಶೀನಪ್ಪ ನಾಯ್ಕ್, ಯೂಸೂಪ್, ನವೀನ್, ಇಂದಿರಾ ಪುರುಷೋತ್ತಮ ಆಚಾರ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರುಣ್, ಅಭಿಯಂತರ ಶ್ರೀಧರ್ ನಾಯ್ಕ್, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್ ಮತ್ತು ನಗರಸಭೆ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here