ನೆಲ್ಯಾಡಿ: ಗಾಳಿ ಮಳೆಗೆ ಮನೆಗೆ ಹಾನಿ

0


ನೆಲ್ಯಾಡಿ: ಎ.13ದು ರಾತ್ರಿ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ನೆಲ್ಯಾಡಿ ಗ್ರಾಮದ ಕುಡ್ತಾಜೆಯಲ್ಲಿ ಮನೆಯೊಂದು ಹಾನಿಗೊಂಡಿರುವುದಾಗಿ ವರದಿಯಾಗಿದೆ.


ಕುಡ್ತಾಜೆ ನಿವಾಸಿ ಕಮಲಾಕ್ಷ ಎಂಬವರ ಮನೆಗೆ ಹಾಕಲಾಗಿದ್ದ ಸಿಮೆಂಟ್ ಶೀಟ್ ಮಳೆಗೆ ಹಾರಿಹೋಗಿದ್ದು ಗೋಡೆಯೂ ಹಾನಿಗೊಂಡಿದೆ ಎಂದು ವರದಿಯಾಗಿದೆ. ಈ ವೇಳೆ ಕಮಲಾಕ್ಷ ಹಾಗೂ ಅವರ ಪತ್ನಿ, ಮಕ್ಕಳು ಮನೆಯಲ್ಲಿದ್ದು ಅಪಾಯದಿಂದ ಪಾರಾಗಿದ್ದಾರೆ. ಮಾದೇರಿ ಶಬರಿಗಿರಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾಡಿಗೂ ತೆಂಗಿನ ಮರವೊಂದು ಬಿದ್ದು ಹಾನಿಗೊಂಡಿದೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ದೇವಸ್ಥಾನಲ್ಲಿ ಸಭೆ ನಡೆಸುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here