ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಟೆಕ್ನಿಕಲ್ ವಿಡಿಯೋ ಮೇಕಿಂಗ್ ಸ್ಪರ್ಧೆ, ವಿಡಿಯೋ ಕಳುಹಿಸಲು ಎ.30 ಕಡೇ ದಿನ

0

ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಉಜಿರೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗವು ವೀಕ್ಷಣ್ -2022 ಎಂಬ ಟೆಕ್ನಿಕಲ್ ವಿಡಿಯೋ ಮೇಕಿಂಗ್ ಸ್ಪರ್ಧೆಯನ್ನು ದ್ವಿತೀಯ ಪಿ ಯು ಸಿ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದು ವಿಡಿಯೋಗಳನ್ನು ಕಳುಹಿಸಲು ಕೊನೆಯ ದಿನಾಂಕ ಎ.30 ಆಗಿರುತ್ತದೆ. ವಿಡಿಯೋಗಳು ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟದ್ದಾಗಿರಬೇಕು ಮತ್ತು ಒಂದು ವಿಡಿಯೋದಲ್ಲಿ ಇಬ್ಬರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ ವಿಡಿಯೋ ಗಳನ್ನು ಹುಡುಗರು ವಾಟ್ಸಾಪ್ ಸಂಖ್ಯೆ 7338229327 ಮತ್ತು ಹುಡುಗಿಯರು ವಾಟ್ಸಪ್ ಸಂಖ್ಯೆ 7899141240 ಗೆ ಕಳುಹಿಸಿಕೊಡಬೇಕು, ಮಾದರಿ ವಿಡಿಯೋ ಗಳನ್ನು ಪಡೆಯಲು ಮತ್ತು ಹೆಚ್ಚಿನ ವಿವರಗಳಿಗಾಗಿ ಸಿವಿಲ್ ಇಂಜಿನಿಯರಿಂಗ್ ವಿಭಾಗ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ಉಜಿರೆ ಮೊ: 9611960718, 9535109756 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here