ಎ.22 ರಂದು ಸುಳ್ಯದಲ್ಲಿ ಲಂಚ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಮಾಹಿತಿ ಕಾರ್ಯಾಗಾರ – ಅಧಿಕಾರಿಗಳೊಂದಿಗೆ ಜನರ ಸಂವಹನ

0

  • ಪ್ರತೀ ಗ್ರಾಮದಿಂದ 10 ಮಂದಿ ಭಾಗವಹಿಸಲು ಅವಕಾಶ – ಮೊದಲೇ ಹೆಸರು ನೀಡಲು ಸೂಚನೆ

ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ ಇದರ ವತಿಯಿಂದ ದ.ಕ ಜಿಲ್ಲಾಡಳಿತದ ಸಹಯೋಗದೊಂದಿಗೆ ಸುದ್ದಿ ಜನಾಂದೋಲನ ವೇದಿಕೆ, ಜನಪ್ರತಿನಿಧಿಗಳ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯ ತಾಲೂಕಿನ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಕಾನೂನು ಮಾಹಿತಿ ಹಾಗೂ ಲಂಚ, ಭ್ರಷ್ಟಚಾರ ನಿರ್ಮೂಲನೆ ಬಗ್ಗೆ ಅಧಿಕಾರಿಗಳ ಮತ್ತು ಜನರ ಜವಾಬ್ದಾರಿ ಕುರಿತು ಮಾಹಿತಿ ಕಾರ್ಯಾಗಾರ ಮತ್ತು ಅಧಿಕಾರಿಗಳೊಂದಿಗೆ ಜನರ ಸಂವಹನ ಕಾರ್ಯಕ್ರಮವು ಎ.22ರಂದು ಶುಕ್ರವಾರ ನಡೆಯಲಿದೆ.

 


ಅಂದು ಪೂ.10.00 ಸುಳ್ಯದ ಸುದ್ದಿ ಕಚೇರಿ ಬಳಿಯಿಂದ ವಾಹನ ಜಾಥಾ ಹೊರಡಲಿದೆ. ಸಚಿವ ಎಸ್. ಅಂಗಾರ ಜಾಥಕ್ಕೆ ಚಾಲನೆ ನೀಡಲಿದ್ದಾರೆ. ವರ್ತಕರ ಸಂಘ ಸುಳ್ಯ, ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘಗಳು, ಟೂರಿಸ್ಟ್ ಕಾರು ವ್ಯಾನ್ ಚಾಲಕ ಮಾಲಕ ಸಂಘ, ಗೂಡ್ಸ್ ಚಾಲಕ ಮಾಲಕ ಸಂಘ, ಕಟ್ಟಡ ಕಾರ್ಮಿಕರ ಸಂಘ, ಗ್ಯಾರೇಜು ಮಾಲಕರ ಸಂಘ ಇವರ ನೇತೃತ್ವದಲ್ಲಿ ನಡೆಯಲಿರುವ ಜಾಥಾವು ಸುಳ್ಯ ನಗರದ ಮುಖ್ಯರಸ್ತೆ ಹಾಗೂ ತಾಲೂಕು ಕಚೇರಿ ರಸ್ತೆಯಲ್ಲಿ ಸಂಚರಿಸಲಿದೆ.

ಪೂ.೧೧.೦೦ ಗಂಟೆಗೆ ಸುಳ್ಯದ ಖಾಸಗಿ ಬಸ್ ನಿಲ್ದಾಣ ಬಳಿಯಿರುವ ಶಿವಕೃಪಾ ಕಲಾ ಮಂದಿರದಲ್ಲಿ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಕಾರ್ಯಕ್ರಮವನ್ನು ಉದ್ಘಾಟಿಸಿ ಲಂಚ, ಭ್ರಷ್ಟಾಚಾರ ವಿರುದ್ಧದ ಬ್ಯಾನರ್ ಹಾಗೂ ಫಲಕ ಅನಾವರಣಗೊಳಿಸಲಿದ್ದಾರೆ. ಪೂ. ೧೧.೩೦ಕ್ಕೆ ಕಾರ್ಯಾಗಾರದ ಉದ್ಘಾಟನೆ ನಡೆಯಲಿದ್ದು ಸುಳ್ಯ ತಾಲೂಕು ಕಾನೂನು ಸೇವೆಗಳ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶ ಸೋಮಶೇಖರ ಎ. ಕಾರ್ಯಾಗಾರ ಉದ್ಘಾಟಿಸಿ ಕಾನೂನು ಅರಿವಿನ ಬಗ್ಗೆ ಮಾತನಾಡಲಿದ್ದಾರೆ. ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಹಾಗೂ ಕಿರಿಯ ಸಿವಿಲ್ ನ್ಯಾಯಧೀಶ ಯಶ್ವಂತ್ ಕುಮಾರ್ ಕೆ. ಕಾನೂನು ಮಾಹಿತಿ ನೀಡಲಿದ್ದಾರೆ. ಸುದ್ದಿ ಜನಾಂದೋಲನ ಸಮಿತಿ ಸಂಚಾಲಕರಾದ ಡಾ.ಯು.ಪಿ.ಶಿವಾನಂದರು ಕಾರ್ಯಕ್ರಮ ನಿರ್ವಹಿಸಿ ಕೊಡಲಿದ್ದಾರೆ. ಸುಳ್ಯ ತಾಲೂಕು ಮಟ್ಟದ ಎಲ್ಲಾ ಇಲಾಖಾ ಅಧಿಕಾರಿಗಳು, ನ.ಪಂ ಅಧ್ಯಕ್ಷರು, ಸದಸ್ಯರು, ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರು, ಪ್ರಾ.ಕೃ,ಪ.ಸ.ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು,, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಿಕ್ಷಾ ಚಾಲಕರ ಸಂಘಗಳು, ಕಾರು ವ್ಯಾನ್ ಚಾಲಕರ ಸಂಘ, ಗೂಡ್ಸ್ ಲಾರಿ ಚಾಲಕರ ಸಂಘ, ಗ್ಯಾರೇಜ್ ಮಾಲಕರ ಸಂಘ, ಕಟ್ಟಡ ಕಾರ್ಮಿಕರ ಸಂಘ ಮತ್ತು ವರ್ತಕರ ಸಂಘಗಳ ನೇತೃತ್ವದಲ್ಲಿ ವಾಹನ ಜಾಥಾ

ಎ.೨೨ರಂದು ನಡೆಯುವ ಸುಳ್ಯ ತಾಲೂಕಿನ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಕಾನೂನು ಮಾಹಿತಿ ಹಾಗೂ ಲಂಚ, ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಅಧಿಕಾರಿಗಳ ಮತ್ತು ಜನರ ಜವಾಬ್ದಾರಿ ಕುರಿತ ಮಾಹಿತಿ ಕಾರ್ಯಾಗಾರ ಹಾಗೂ ಅಧಿಕಾರಿಗಳೊಂದಿಗೆ ಜನರ ಸಂವಹನ ಕಾರ್ಯಕ್ರಮಕ್ಕೆ ಮುನ್ನ ಸುಳ್ಯ ನಗರದಲ್ಲಿ ಬೃಹತ್ ವಾಹನ ಜಾಥಾ ಏರ್ಪಡಿಸಲು ನಿರ್ಧರಿಸಲಾಗಿದ್ದು, ಈ ವಾಹನ ಜಾಥಾದ ನೇತೃತ್ವವನ್ನು ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕ ಮಾಲಕರ ಸಂಘ (ಬಿ.ಎಂ.ಎಸ್.), ಸ್ನೇಹ ಸಂಗಮ ರಿಕ್ಷಾ ಚಾಲಕರ ಸಂಘ, ಪಯಸ್ವಿನಿ ಕಾರು ಮತ್ತು ವ್ಯಾನ್ ಚಾಲಕ ಮಾಲಕರ ಸಂಘ, ಅಮರ ಸುಳ್ಯ ಗೂಡ್ಸ್ ಲಾರಿ ಚಾಲಕ ಮಾಲಕರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಗ್ಯಾರೇಜ್ ಮಾಲಕರ ಸಂಘ ಹಾಗೂ ವರ್ತಕರ ಸಂಘಗಳು ವಹಿಸಿಕೊಳ್ಳಲಿವೆ.

ಎ.೧೭ರಂದು ಬೆಳಿಗ್ಗೆ ಸುದ್ದಿ ಕಚೇರಿಯಲ್ಲಿ ಸುದ್ದಿ ಜನಾಂದೋಲನ ವೇದಿಕೆಯ ಸಂಚಾಲಕ ಡಾ.ಯು.ಪಿ.ಶಿವಾನಂದರ ಅಧ್ಯಕ್ಷತೆಯಲ್ಲಿ ನಡೆದ ಸಂಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜನ ಜಾಗೃತಿಗಾಗಿ ನಡೆಸಲಾಗುವ ಈ ವಾಹನ ಜಾಥಾಕ್ಕೆ ಸುಳ್ಯದ ಬಾಳೆಮಕ್ಕಿಯಲ್ಲಿ ಸುದ್ದಿ ಬಿಡುಗಡೆ ಕಚೇರಿ ಇರುವ ಶ್ರೀಹರಿ ಕಾಂಪ್ಲೆಕ್ಸ್‌ನ ಎದುರಲ್ಲಿ ಸಚಿವ ಎಸ್.ಅಂಗಾರ ಚಾಲನೆ ನೀಡುವರು. ಬಳಿಕ ಹೊರಡುವ ವಾಹನ ಜಾಥಾವು ಗಾಂಧಿನಗರದವರೆಗೆ ಹೋಗಿ ರಥಬೀದಿ ಮೂಲಕ ಸಾಗಿ, ತಾಲೂಕು ಕಚೇರಿ, ಮೆಸ್ಕಾಂ, ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿ ಎದುರಿನಿಂದಾಗಿ ನಗರ ಪಂಚಾಯತ್ ಕಚೇರಿ ರಸ್ತೆಯ ಮೂಲಕ ಶ್ರೀರಾಮ ಪೇಟೆ ತಲುಪಿ, ಜ್ಯೋತಿ ಸರ್ಕಲ್‌ಗೆ ಹೋಗಿ ಅಲ್ಲಿಂದ ಮುಖ್ಯ ರಸ್ತೆಯಲ್ಲಿ ಖಾಸಗಿ ಬಸ್ ನಿಲ್ದಾಣದವರೆಗೆ ಬರಲಿದೆ. ಅಲ್ಲಿಂದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶಿವಕೃಪಾ ಕಲಾಮಂದಿರದವರೆಗೆ ಕಾಲ್ನಡಿಗೆಯಲ್ಲಿ ಜಾಥಾ ಸಾಗಲಿದೆ.

ಪೂರ್ವಭಾವಿ ಸಭೆಯಲ್ಲಿ ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಯು.ಪಿ. ಶಿವಾನಂದರು, ಲಂಚ ಭ್ರಷ್ಟಾಚಾರದ ಬಗ್ಗೆ ಜನರು ಭಯ ತ್ಯಜಿಸಿ ಮಾತನಾಡಿ ಅದನ್ನು ಸ್ಥಗಿತಗೊಳಿಸಲು ಜಾಗೃತರಾಗಬೇಕಾದ ಅವಶ್ಯಕತೆಯ ಬಗ್ಗೆ ಹೇಳಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಸೇರಿದವರು ಲಂಚ ಭ್ರಷ್ಟಾಚಾರ ವಿರೋಧಿ ಘೋಷಣೆ ಮತ್ತು ಪ್ರತಿಜ್ಞೆ ಸ್ವೀಕರಿಸಿದರು. ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಸುಳ್ಯ ತಾಲೂಕು ರಿಕ್ಷಾ ಚಾಲಕರ ಸಂಘ (ಬಿ.ಎಂ.ಎಸ್.) ಇದರ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಉಪಾಧ್ಯಕ್ಷ ರವಿ ಜಾಲ್ಸೂರು, ಸ್ನೇಹ ಸಂಗಮ ಅಟೋಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಪರಿವಾರಕಾನ, ಅಮರ ಸುಳ್ಯ ಲಾರಿ ಗೂಡ್ಸ್ ವಾಹನ ಚಾಲಕರ ಸಂಘದ ಕಾರ್ಯದರ್ಶಿ ನಜೀರ್ ಶಾಂತಿನಗರ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ ಮೇಸ್ತ್ರಿ ಜಯನಗರ, ಟೈಲರ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ದಿವಾಕರ ಟೈಲರ್ ತೋಟಪ್ಪಾಡಿ, ನಗರ ಅಧ್ಯಕ್ಷ ಕುಸುಮಾಧರ ರೈ ಬೂಡು, ಜೇಸಿ ಸುಳ್ಯ ಸಿಟಿ ಅಧ್ಯಕ್ಷ ಬಶೀರ್ ಯು.ಪಿ., ಪಯಸ್ವಿನಿ ಜೇಸಿ ನಿಕಟಪೂರ್ವ ಅಧ್ಯಕ್ಷ ಗುರುರಾಜ್ ಅಜ್ಜಾವರ, ಲಯನ್ಸ್ ಕ್ಲಬ್ ಕೋಶಾಧಿಕಾರಿ ರಾಮಚಂದ್ರ ಎಂ., ಪಯಸ್ವಿನಿ ಕಾರು ಮತ್ತು ವ್ಯಾನ್ ಚಾಲಕ ಮಾಲಕರ ಸಂಘದ ಸದಸ್ಯರುಗಳಾದ ಶರತ್ ಕುಮಾರ್ ಭಸ್ಮಡ್ಕ ಮತ್ತು ಲಿಖಿತ್ ಖಂಡಿಗೆಮೂಲೆ, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಖಜಾಂಜಿ ಹಾಗೂ ಜಟ್ಟಿಪ್ಪಳ್ಳ ಮಾನಸ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಸುನಿತ ರಾಮಚಂದ್ರ, ನೇತ್ರಾವತಿ ಮಹಿಳಾ ಮಂಡಲ ಬೆಟ್ಟಂಪಾಡಿ ಇದರ ಅಧ್ಯಕ್ಷೆ ಶ್ರೀಮತಿ ಲಲಿತ ಬೆಟ್ಟಂಪಾಡಿ, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ ಹಾಗೂ ಕಾರ್ಯದರ್ಶಿ ಜನಾರ್ದನ ದೋಳ ರವರು ಜಾಥಾ ಮತ್ತು ಸಭೆಯಲ್ಲಿ ತಾವು ಸಂಘಟನೆಯ ಸದಸ್ಯರೊಂದಿಗೆ ಸಕ್ರಿಯವಾಗಿ ಭಾಗವಹಿಸುವುದಾಗಿ ಘೋಷಿಸಿದರು.

ಸಾರ್ವಜನಿಕರಿಂದ ಪ್ರಶ್ನೆಗಳಿಗೆ ಆಹ್ವಾನ
ಕಾರ್ಯಕ್ರಮದಲ್ಲಿ ಇಲಾಖೆ ಗಳಲ್ಲಿನ ಕೆಲಸಗಳ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಇಲಾಖಾಧಿಕಾರಿಗಳಿಗೆ ಸಾರ್ವಜನಿಕರು ಪ್ರಶ್ನೆ ಕೇಳಿ ಉತ್ತರ ಪಡೆಯಲು ಅವಕಾಶವಿದೆ. ಪ್ರಶ್ನೆಗಳನ್ನು ಎ. ೨೧ರ ಒಳಗಾಗಿ ೮೬೧೮೮೮೨೭೬೨ ವಾಟ್ಸಪ್‌ನಂಗೆ ಕಳಿಸುವಂತೆ ಕೋರಲಾಗಿದೆ. ಪ್ರತಿ ಗ್ರಾ.ಪಂ ಹಾಗೂ ನ.ಪಂ ವ್ಯಾಪ್ತಿಯಿಂದ ನೋಂದಾಯಿಸಲ್ಪಟ್ಟ ಆಸಕ್ತರಿಗಷ್ಟೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದ್ದು, ಆಸಕ್ತರು ಎ.೨೦ರ ಒಳಗಾಗಿ ತಮ್ಮ ಹೆಸರು, ಗ್ರಾಮ ಮತ್ತು ಪೋನ್ ನಂಬರ್‌ಗಳ ವಿವರಗಳೊಂದಿಗೆ ೮೬೧೮೮೮೨೭೬೨ ವಾಟ್ಸಪ್ ನಂಬರ್ ಗೆ ಕಳಿಸುವಂತೆ ಕೋರಲಾಗಿದೆ. ಪ್ರತೀ ಗ್ರಾಮದಿಂದ ೧೦ ಮಂದಿಗೆ ಹಾಗೂ ನಗರದ ಪ್ರತಿ ವಾರ್ಡ್‌ನಿಂದ ತಲಾ ೫ಮಂದಿಗೆ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ. ಕಾರ್ಯಕ್ರಮವು ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ

ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಲು ಕರೆ

ಲಂಚ, ಭ್ರಷ್ಟಾಚಾರ ವಿರೋಧಿ ಗಳಾಗಿರುವ ಸಾರ್ವಜನಿಕರು ವಾಹನ ಜಾಥಾದಲ್ಲಿ ಭಾಗವಹಿಸಬೇಕೆಂದು ಸುದ್ದಿ ಜನಾಂದೋಲನ ವೇದಿಕೆಯ ಸಂಚಾಲಕರಾದ ಡಾ.ಯು.ಪಿ.ಶಿವಾನಂದರು ಕರೆ ನೀಡಿ ದ್ದಾರೆ. ಮಾಹಿತಿ ಕಾರ್ಯಾಗಾರ ಮತ್ತು ಅಧಿಕಾರಿಗಳೊಂದಿಗೆ ಸಂವಹನ ಕಾರ್ಯಕ್ರಮದಲ್ಲಿ ಭಾಗವಹಿಸ ಬಯಸುವವರು ತಮ್ಮ ಹೆಸರನ್ನು ಎರಡು ದಿನ ಮುಂಚಿತವಾಗಿ ತಿಳಿಸಬೇಕು. ಅವರಿಗೆ ಆಸನ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆ ಮಾಡಲಿಕ್ಕಿದೆ. ಪ್ರತೀ ಗ್ರಾಮದಿಂದ ತಲಾ ೧೦ ಮಂದಿ ಹೆಸರು ನೀಡಬೇಕು. ತಾವು ಅಧಿಕಾರಿಗಳೊಂದಿಗೆ ಕೇಳಲು ಬಯಸುವ ಪ್ರಶ್ನೆಗಳನ್ನು ಮುಂಚಿತವಾಗಿ ತಿಳಿಸಬೇಕು. ಆ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಉತ್ತರ ಕೊಡಿಸಲಾಗುವುದು. ಆದರೆ ವಾಹನ ಜಾಥಾದಲ್ಲಿ ಭಾಗವಹಿಸಬಯಸುವವರು ಮೊದಲಾಗಿ ನೋಂದಣಿ ಮಾಡಬೇಕಾಗಿಲ್ಲ” ಎಂದು ಡಾ.ಶಿವಾನಂದರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here