ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಸಂಭ್ರಮದ ವರ್ಷಾವಧಿ ಉತ್ಸವ

0

ಪುತ್ತೂರು: ರೈಲ್ವೇ ನಿಲ್ದಾಣದ ಬಳಿಯಿರುವ ಶ್ರೀ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವಗಳು ಎ.22ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.

ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಉತ್ಸವಗಳು ಪ್ರಾರಂಭಗೊಂಡಿದೆ. ನಂತರ ಮಹಾಲಕ್ಷ್ಮೀಗೆ ಮಹಾಪೂಜೆಯಾಗಿ ಬಳಿಕ ಪಾಷಾಣಮೂರ್ತಿ, ನಾಗ ಮತ್ತು ಗುಳಿಗ ದೈವಕ್ಕೆ ತಂಬಿಲ ನಡೆಯಿತು. ನಂತರ ಮೂಡಾಯೂರು ಚಂದ್ರಶೇಖರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಮಹಾಪೂಜೆ, ಶ್ರೀದೇವಿ ದರ್ಶನ, ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here