ಉಪ್ಪಿನಂಗಡಿ ದಿವಂಗತ ಶೀನಪ್ಪ ಪೂಜಾರಿಯವರಿಗೆ ಶೃದ್ಧಾಂಜಲಿ, ನುಡಿ ನಮನ

0

ಉಪ್ಪಿನಂಗಡಿ: ಬಿ.ಜೆ.ಪಿ.ಯ ಹಿರಿಯ ಮುಖಂಡ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದಿಯಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಈಚೆಗೆ ನಿಧನ ಹೊಂದಿದ ಡಿ. ಶೀನಪ್ಪ ಪೂಜಾರಿಯವರಿಗೆ ಶೃದ್ದಾಂಜಲಿ, ನುಡಿ ನಮನ ಕಾರ್‍ಯಕ್ರಮ ನಡೆಯಿತು.

ಪುತ್ತೂರು ಬಿಜೆಪಿ ಹಿರಿಯ ಮುಖಂಡ ಅಪ್ಪಯ್ಯ ಮಣಿಯಾಣಿ ಮಾತನಾಡಿ ಶೀನಪ್ಪ ಪೂಜಾರಿಯವರು ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಕೆಲಸ ಕಾರ್‍ಯಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿಕೊಡುತ್ತಾ ಎಲ್ಲರಿಗೂ ಪ್ರೀತಿ ಪಾತ್ರರಾದವರು ಶೀನಪ್ಪ ಪೂಜಾರಿಯವರು. ಜನ ಸಂಘದಿಂದಲೂ ಸಮಾಜದ ಒಳಿಗಾಗಿ ಹಿಂದುತ್ವದ ಕಾರ್‍ಯಕರ್ತರಾಗಿ ಅತ್ಯಂತ ನಿಷ್ಠುರವಾದಿ ಪ್ರಾಮಾಣಿಕರಾಗಿ ದುಡಿದು ದಿವಂಗತ ಶೀನಪ್ಪ ಪೂಜಾರಿಯವರು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಂತ ಪೊರೋಳಿ ಮಾತನಾಡಿ ಶೀನಪ್ಪ ಪೂಜಾರಿ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸುವ ಮೂಲಕ ನಿರಂತರವಾಗಿ 25 ವರ್ಷಗಳ ಗ್ರಾಮ ಪಂಚಾಯಿತಿ ಸದಸ್ಯರಾಗಿ ಮನ್ನಣೆ ಗಳಿಸಿದ್ದರು ಅಲ್ಲದೆ ಅವರಿಗೆ ಹಲವು ಬಾರಿ ಉಪಾಧ್ಯಕ್ಷ ಹುದ್ದೆ ಅಲಂಕರಿಸಲು ಅವಕಾಶ ಸಿಕ್ಕಿದ್ದರೂ ಕಿರಿಯರಿಗೆ ಅವಕಾಶವನ್ನು ಮಾಡಿಕೊಟ್ಟ ಏಕೈಕ ವ್ಯಕ್ತಿ ಎಂದು ಬಣ್ಣಿಸಿದರು.

ಸಭೆಯಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸಿ.ಎ. ಬ್ಯಾಂಕ್ ಅಧ್ಯಕ್ಷ ಕೆ.ವಿ. ಪ್ರಸಾದ್, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ  ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಸದಸ್ಯ ಸುರೇಶ ಅತ್ರಮಜಲು, ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್, ಪ್ರಮುಖರಾದ ಉಮೇಶ ಶೆಣೈ, ಹರಿರಾಮಚಂದ್ರ, ಸಾಜಾ ರಾಧಾಕೃಷ್ಣ ಆಳ್ವ, ಬೂಡಿಯಾರ್ ರಾಧಾಕೃಷ್ಣ ರೈ, ನಿತಿನ್, ಶಯನ ಜಯನಂದ, ಅರುಣ್ ವಿಟ್ಲ, ಹರಿಪ್ರಸಾದ್ ಯಾದವ್, ಸುರೇಶ್ ಆಳ್ವ, ಚಂದಪ್ಪ ಪೂಜಾರಿ, ಸದಾನಂದ ಕಾರ್‌ಕ್ಲಬ್, ಚಂದ್ರಪ್ಪ ಮೂಲ್ಯ, ಚಂದ್ರಶೇಖರ ಮಡಿವಾಳ, ಕುಟುಂಬ ಸದಸ್ಯರಾದ ಸುನೀಲ್ ಕುಮಾರ್ ದಡ್ಡು, ಅನಿಲ ಕುಮಾರ್, ನವೀನ, ನಮಿತ, ಜಗದೀಶ ಹೊನ್ನಾಳಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here