
ಪುತ್ತೂರು: ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಅಸ್ವಾಲಿಹಾ ವುಮೆನ್ಸ್ ಶರೀಅತ್ ಕಾಲೇಜ್ ಇದರ ಏಳನೆಯ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪದವಿ ಪ್ರದಾನ ಸಮಾರಂಭವು ಜೂನ್ 27ರಂದು ಮೌಂಟನ್ ವ್ಯೂ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಜೂ.27ರಂದು ಮಧ್ಯಾಹ್ನ ಗಂಟೆ 2 ರಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಪ್ರಸಿದ್ಧ ಉಲಮಾ ಸಂಘಟನೆಯಾದ ‘ಸಮಸ್ತ’ ದ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತು ಕೋಯ ತಂಙಳ್ ಅವರು ಆಗಮಿಸಲಿದ್ದು, ಅವರು ಪದವಿ ಪ್ರದಾನ ಮತ್ತು ಅನುಗ್ರಹ ಭಾಷಣ ನಡೆಸುವರು.
ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಪಿ.ಅಹ್ಮದ್ ಹಾಜಿ ಆಕರ್ಷಣ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು, ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಅವರು ದುಆ ನಡೆಸುವರು. ಸಮಸ್ತ ಶಿಕ್ಷಣ ಮಂಡಳಿಯ ಮ್ಯಾನೇಜರ್ ಮೋಯಿನ್ ಕುಟ್ಟಿ ಮಾಸ್ಟರ್ ಮಲಪ್ಪುರಂ ಅವರು ಕಾರ್ಯಕ್ರಮವನ್ನು ಉದ್ಗಾಟಿಸುವರು. ಹಲವಾರು ಉಲಮಾ ,ಸಾದಾತ್ ಗಳು, ಧಾರ್ಮಿಕ, ಸಾಮಾಜಿಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಅಸ್ವಾಲಿಹಾ ಮಹಿಳಾ ಶರೀಅತ್ ಕಾಲೇಜಿನಲ್ಲಿ ಪಿ.ಯು.ಸಿ.ಯೊಂದಿಗೆ ಪ್ರತಿಷ್ಠಿತ CSWC ಬೋರ್ಡ್ ಅಂಗೀಕೃತ 2 ವರ್ಷಗಳ ಫಾಳಿಲಾ ಶರೀಅತ್ ಕೋರ್ಸು ಹಾಗೂ ಪಿಯುಸಿ ಯೊಂದಿಗೆ ಅಸ್ವಾಲಿಹಾ ಶರೀಅತ್ ಕೋರ್ಸ್ ಮತ್ತು ಶರೀಅತ್ ಮಾತ್ರ ಕಲಿಯುವವರಿಗೆ ಅಸ್ವಾಲಿಹಾ ಶರೀಅತ್ ಕೋರ್ಸನ್ನು ಇತರ ಕೋರ್ಸುಗಳೊಂದಿಗೆ ನೀಡಲಾಗುತ್ತಿದ್ದು, ಕಳೆದ ಏಳು ವರ್ಷಗಳಲ್ಲಿ ಪಿ.ಯು. ಮತ್ತು ಶರೀಅತ್ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರು ಉತ್ತಮ ಸಾಧನೆಯನ್ನು ಮಾಡಿದ್ದು, ಪಿ.ಯು.ಸಿ.ಯಲ್ಲಿ ಸತತ 5 ನೆಯ ಬಾರಿಯೂ ಉತ್ತಮ ಅಂಕಗಳೊಂದಿಗೆ ಶೇ.100 ಫಲಿತಾಂಶ ದಾಖಲಿಸಿ ಮೀಫ್ ನಿಂದ ಪ್ರಶಸ್ತಿಯನ್ನು ಪಡೆದಿರುವುದು ಗಮನಾರ್ಹ ವಾಗಿದೆ. ಅದೇ ರೀತಿ CSWC ಅಧೀನದಲ್ಲಿ ನಡೆದ ಶರೀಅತ್ ಫಾಳಿಲಾ ಪಬ್ಲಿಕ್ ಪರೀಕ್ಷೆಯಲ್ಲೂ ರಾಜ್ಯ ಮಟ್ಟದಲ್ಲಿ ಗರಿಷ್ಠ ಅಂಕಗಳೊಂದಿಗೆ ಶೇ.100 ಫಲಿತಾಂಶ ಪಡೆದಿರುತ್ತದೆ. ರಾಜ್ಯ ಮಟ್ಟದ ಫಾಳಿಲಾ ಪ್ರತಿಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪಡೆದು ಕೊಂಡಿದೆ.
ಈಗಾಗಲೇ ಐದು ಬ್ಯಾಚ್ ನ ವಿದ್ಯಾರ್ಥಿನಿಯರು ಶರೀಅತ್ ಕೋರ್ಸ್ ಪೂರೈಸಿದ್ದು ಇದೀಗ ದ್ವಿತೀಯ ಪದವಿ ಪ್ರದಾನ ಸಮಾರಂಭದಲ್ಲಿ ನಾಲ್ಕು ಮತ್ತು ಐದನೇಯ ಬ್ಯಾಚ್ ನ ವಿದ್ಯಾರ್ಥಿನಿಯರಿಗೆ ‘ಅಸ್ವಾಲಿಹಾ’ ಪದವಿಯನ್ನು ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.