ಜೂ.27: ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯ ನೂತನ ಕಟ್ಟಡದ ಶಿಲನ್ಯಾಸ ಕಾರ್ಯಕ್ರಮ

0

ಪುತ್ತೂರು: ಸಾಲ್ಮರ ದಾರುಲ್ ಹಸನಿಯಾ ಅಕಾಡಮಿ ಇದರ ಸಮನ್ವಯ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಶಿಲನ್ಯಾಸ ಕಾರ್ಯಕ್ರಮವು ಜೂನ್ 27 ರಂದು ನಡೆಯಲಿದೆ.
ಪ್ರಸಿದ್ಧ ಉಲಮಾ ಸಂಘಟನೆಯಾದ ಸಮಸ್ತ ದ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತು ಕೋಯ ತಂಙಳ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಅವರು ಶಿಲನ್ಯಾಸ ಕಾರ್ಯಕ್ರಮಕ್ಕೆ ನೇತೃತ್ವ ನೀಡುವರು. ಈ ಕಾರ್ಯಕ್ರಮ ದಲ್ಲಿ ಹಲವಾರು ಉಲಮಾ, ಸಾದಾತ್ ಗಳು, ಸಾಮಾಜಿಕ ಗಣ್ಯರು ಭಾಗವಹಿಸುವರು.
ಕಳೆದ ಐದು ವರ್ಷಗಳ ಹಿಂದೆ ಮ ರ್ಹೂಂ ಸಯ್ಯಿದ್ ಹಸನ್ ಕೋಯ ತಂಙಳ್  ಅಂತ್ಯ ವಿಶ್ರಾಂತಿಯನ್ನು ಹೊಂದಿರುವ ಸಾಲ್ಮರ ಸಾದಾತ್ ಮಹಲ್ ನಲ್ಲಿ  ಸಣ್ಣ ಮಟ್ಟಿನ ಕಟ್ಟಡದಲ್ಲಿ 18 ವಿದ್ಯಾರ್ಥಿಗಳಿಂದ ಹಿಫ್ಲುಲ್ ಖುರ್ ಆನ್ ಮೂಲಕ ಆರಂಭಿಸಲಾದ ಈ ಸಂಸ್ಥೆಯಲ್ಲಿ ಇಂದು ಸುಮಾರು 70 ವಿದ್ಯಾರ್ಥಿಗಳು ಪವಿತ್ರ ಖುರ್ ಆನ್ ಕಂಠಪಾಠ ಮತ್ತು ಧಾರ್ಮಿಕ -ಲೌಕಿಕ ಸಮನ್ವಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಈಗಾಗಲೇ ಈ ಸಂಸ್ಥೆಯಲ್ಲಿ 15 ವಿದ್ಯಾರ್ಥಿಗಳು ಪವಿತ್ರ ಖುರ್ ಆನ್ ಕಂಠಪಾಠವನ್ನು ಮುಗಿಸಿ ಹಾಫಿಳ್ ಗಳಾಗಿದ್ದಾರೆ.
ಸಂಸ್ಥೆಯು ಮುಂದೆ ಹಿಫ್ಲುಲ್ ಖುರ್ ಆನ್ ಮತ್ತು ದಅವಾ ಕಾಲೇಜ್ ನ ಜೊತೆಗೆ ‘ಸಮಸ್ತ’ ದ ಅಧೀನದ ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣದ SNEC ಯ ಸನಾಇ ಕೋರ್ಸ್ ,
ಇಸ್ಲಾಮಿಕ್ ಸ್ಟಡಿ ಸೆಂಟರ್, ಬೋರ್ಡಿಂಗ್ ಮದ್ರಸ, ಸಮನ್ವಯ ಶಿಕ್ಷಣದ ಮಹಿಳಾ  ಕಾಲೇಜ್, ಇಸ್ಲಾಮಿಕ್ ನರ್ಸರಿ ಸ್ಕೂಲ್ ಮೊದಲಾದವುಗಳನ್ನು ಆರಂಭಿಸುವ ವಿವಿಧ ಯೋಜನೆಗಳನ್ನು ಹಾಕಿ ಕೊಂಡಿದ್ದು, ಇದರ ಸಲುವಾಗಿ ಸುಸಜ್ಜಿತ ವಿಶಾಲ ಕಾಲೇಜ್ ಮತ್ತು ಹಾಸ್ಟೆಲ್ ಕಟ್ಟಡ ಅನಿವಾರ್ಯ ವಾಗಿದ್ದು, ಅದಕ್ಕಾಗಿ ಸಾಲ್ಮರ ಸಾದಾತ್ ಮಹಲ್ ನ ಹತ್ತಿರದಲ್ಲೇ ಸುಮಾರ್  ಒಂದು ಎಕ್ರೆ ಸೆಂಟ್ಸ್ ಜಾಗದಲ್ಲಿ ಈ ನೂತನ ಕಟ್ಟಡವು ನಿರ್ಮಾಣವಾಗಲಿದೆ ಎಂದು ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್ ಪುತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here