ಕೆಯ್ಯೂರು:  ಕಣಿಯಾರು 15 ಲಕ್ಷ ರೂ ವೆಚ್ಚದಲ್ಲಿ ಸಂಪರ್ಕ ಸೇತುವೆ ಕಾಮಗಾರಿಗೆ ಶಿಲಾನ್ಯಾಸ

0

  • ಗ್ರಾಮದ ಅಭಿವೃದ್ದಿಯಲ್ಲಿ ಗ್ರಾಮಸ್ಥರ ಸಹಕಾರ ಅಗತ್ಯ: ಸಂಜೀವ ಮಠಂದೂರು

ಕೆಯ್ಯೂರು:  ಕೇಂದ್ರ ಸರಕಾರದ  ಮಹತ್ವಾಕಾಂಕ್ಷಿ ಯೋಜನೆಯಲ್ಲಿ, ಪ್ರತಿ ಗ್ರಾಮಗಳ ಜನರಿಗೆ ಮೂಲಭೂತ ಸೌಕರ್ಯಗಳಿಗೆ, ಭಾರತ ಎನ್ನುವ ಪರಿಕಲ್ಪನೆಯ ಮೂಲಕ ಗ್ರಾಮಗಳಿಂದಲೇ ಅಭಿವೃದ್ದಿ ಪ್ರಾರಂಭವಾಗಲಿ, ಗ್ರಾಮ ಸ್ವರಾಜ್ಯದ ಕನಸು ನನಸಾಗಲಿ ಎಂದು ಎ.29 ರಂದು ಕೆಯ್ಯೂರು ಗ್ರಾಮದ ಕಣಿಯಾರು ಜನತೆಯ ಕುಟುಂಬಗಳಿಗೆ ಮಳೆಗಾಲದಲ್ಲಿ ನಡೆದು ಹೋಗಲು ಸರಿಯಾದ ಸಂಪರ್ಕ ರಸ್ತೆ ಇಲ್ಲದೆ ತೊಂದರೆಯಾಗಿತ್ತು.
5054-03-101-0-02-132  ಪ್ರಮುಖ ಜಿಲ್ಲಾ ರಸ್ತೆ ಸೇತುವೆಗಳ ಅನುದಾನದಲ್ಲಿ ಸುಮಾರು 15ಲಕ್ಷ ರೂ ವೆಚ್ಚದಲ್ಲಿ ಸಂಪರ್ಕ ಸೇತುವೆ ಕಾಮಾಗಾರಿಗೆ ತೆಂಗಿನ ಕಾಯಿ ಒಡೆಯುದರ ಮೂಲಕ  ಪುತ್ತೂರು ಶಾಸಕ ಸಂಜೀವ ಮಂಠದೂರು ಚಾಲನೆ ನೀಡಿ, ಮಾತಾಡಿದರು. ಸಂಪರ್ಕ ಸೇತುವೆ ರಸ್ತೆಗೆ  ಜಾಗದ ಸಮಸ್ಯೆ ಇದ್ದು ಅದನ್ನು ಜಾಗದ ಮಾಲಕರಾದ ಗೋಪಾಲ ಪೂಜಾರಿ ಕಣಿಯಾರು,ಶೇಖರ ಪೂಜಾರಿ ಕಣಿಯಾರು ನೀಡಿ ಸಹಕರಿಸಿದರು. ಉದ್ಘಾಟನೆಯನ್ನು ವಿಶ್ವನಾಥ ಪೂಜಾರಿ ಕಣಿಯಾರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. 
ಕೆಯ್ಯೂರು ಗ್ರಾಮ ಪಂಚಾಯತ್  ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ ಗುದ್ದಲಿ ಪೂಜೆ ನೇರವೇರಿಸಿದರು. ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾ.ಪಂ. ಪ್ರಭಾರ ಅಭಿವೃದ್ದಿ ಅಧಿಕಾರಿ ಸುರೇಂದ್ರ ರೈ ಇಳಾಂತಜೆ, ಉಪಾಧ್ಯಕ್ಷ ಗಿರಿಜಾ ಕಣಿಯಾರು, ಕೆಯ್ಯೂರು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಪ್ರಕಾಶ ಆಳ್ವ ಇಳಾಂತಜೆ, ಕೆಯ್ಯೂರು 5ನೇ ವಾರ್ಡ್ ಅದ್ಯಕ್ಷ ಶರತ್ ರೈ ದೇರ್ಲ, ಜಯರಾಮ ಶೆಟ್ಟಿ ಮೇಗಿನ ಮನೆ ಇಳಾಂತಜೆ,  ಕೆಯ್ಯೂರು ಗ್ರಾ.ಪಂ. ಸದಸ್ಯರಾದ ಶರತ್ ಕುಮಾರ್ ಮಾಡಾವು, ವಿಜಯಕುಮಾರ್ ಸಣಂಗಳ, ತಾರಾನಾಥ ಕಂಪ, ಭಟ್ಯಪ್ಪ ರೈ ದೇರ್ಲ ಮೀನಾಕ್ಷಿ ರೈ ಮಾಡಾವು, ಸುಮಿತ್ರಾ ಪಲ್ಲತ್ತಡ್ಕ, ಶುಭಾಷಿಣಿ ಸಣಂಗಳ, ಮಮತ ರೈ ಕೆಯ್ಯೂರು , ಗುತ್ತಿಗೆದಾರ ಪ್ರಭಾಕರ,  ಪಿ.ಡ.ಬ್ಯು ಲ್ ಇಂಜಿನಿಯರ್ ರಾಜರಾಮ್,  ಸಿಕ್ವೇರಾ , ಪ್ರಕಾಶ ಶೆಟ್ಟಿ ದೇರ್ಲ, ವಿಶ್ವನಾಥ ಶೆಟ್ಟಿ ಸಾಗು,  ಗ್ರಾಮಸ್ಥರಾದ ಪದ್ಮಯ್ಯ ಗೌಡ ಕಣಿಯಾರು, ರಾಮಣ್ಣ ಗೌಡ , ಕೇಶವ ಗೌಡ, ಹರೀಶ ನಾಯ್ಕ, ಪ್ರಕಾಶ ಗೌಡ, ಲಿಂಗಪ್ಪ ಗೌಡ, ಸುಬ್ರಮಣ್ಯ ಗೌಡ, ಸುರೇಶ ಗೌಡ, ವಿನೋದ, ರುಕ್ಮಯ್ಯ ಗೌಡ ಕಣಿಯಾರು, ಉಪಸ್ಥಿತರಿದ್ದರು. ಕೆಯ್ಯೂರು ಅಂಬೆಡ್ಕರ್ ಭವನ ಅದ್ಯಕ್ಷ ಕಿಟ್ಟ ಅಜಿಲ ಕಣಿಯಾರು ಸ್ವಾಗತಿಸಿ, ವಂದಿಸಿದರು. 

LEAVE A REPLY

Please enter your comment!
Please enter your name here