ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆ

0

ಬಡಗನ್ನೂರುಃ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಗ್ಗೆ ಗಂ 9.30 ರಿಂದ ಸಂಜೆ ಗಂ 5 ರ ತನಕ ಕರ್ತವ್ಯ ನಿರ್ವಹಿಸುವ  ಬಗ್ಗೆ ಹಾಗೂ ರಾತ್ರಿ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡುವ ಬಗ್ಗೆ   ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಯವರಿಗೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಯವರಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ಏ.27 ರಂದು   ಗ್ರಾ.ಪಂ ಸಭಾಂಗಣದಲ್ಲಿ  ನಡೆಯಿತು. ಪದಡ್ಕ ಆರೋಗ್ಯ ಉಪಕೇಂದ್ರಕ್ಕೆ ವಾರದಲ್ಲಿ ಒಂದು ದಿವಸ ವೈಧ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುವ ಬಗ್ಗೆ ತಾಲೂಕು ವೈದ್ಯಧಿಕಾರಿಯವರಿಗೆ ಬರೆಯಲು ನಿರ್ಣಯಿಸಲಾಯಿತು.
ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಪಟ್ಟೆ ಪ್ರದೇಶದ ನಿರ್ವಹಣೆ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಮರದ ದಿಂಬಿಗಳು ಹಾಗೂ ಇನ್ನಿತರ ಕಸಕಡಿಗಳು ನಿಂತು ರಸ್ತೆ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುವ ಅಣೆಕಟ್ಟು ತೆರವು ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳ ಗ್ರಾಮವಾಸವ್ಯ ಸಂದರ್ಭದಲ್ಲಿ ಗ್ರಾಮಸ್ಥರು ಮನವಿ ನೀಡಿದರು. ಈ ಬಗ್ಗೆ  ಇಂಜಿನಿಯರ್ ಇಲಾಖೆಯ ಅಧಿಕಾರಿಗಳಿಗೆ ತೆರವು ಮಾಡುವ ಅದೇಶ ನೀಡಿದ್ದರು ಈ ಬಗ್ಗೆ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖಾಧಿಕಾರಿಗಳಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಪುತ್ತೂರು – ಕೌಡಿಚ್ಚಾರ್ – ಸುಳ್ಯಪದವು – ಮುಳ್ಲೇರಿಯ ರಸ್ತೆ ಮೂಲಕ ಕಾಸರಗೋಡಿಗೆ ಸಂಚಾರಿಸುತ್ತಿದ್ದ  ಕೆ.ಎಸ್‌ ಆರ್.ಟಿ.ಸಿ ಬಸ್ಸುವನ್ನು ಪುನಃ ಆರಂಬಿಸುವಂತೆ  ಪ್ರಾದೇಶಿಕ ಸಾರಿಗೆ ಇಲಾಖಾಧಿಕಾರಿಗಳಿಗೆ ಬರೆಯಲು ತೀರ್ಮಾನಿಸಲಾಯಿತು. ಪುತ್ತೂರು  ಕೌಡಿಚ್ಚಾರ್ ಮಾರ್ಗವಾಗಿ ಬೆಳಗ್ಗೆ  9 ಗಂಟೆಗೆ  ಹಾಗೂ  11 ಗಂಟೆಗೆ ಸುಳ್ಯಪವಿಗೆ ತಲುಪುವ  ಸರ್ಕಾರಿ ಬಸ್ ಕಳೆದ ಒಂದು ವಾರದಿಂದ ಬರುತ್ತಿಲ್ಲ. ಇದರಿಂದ ಜನ ಸಾಮಾನ್ಯರಿಗೆ ಕಷ್ಟಕರವಾಗಿದೆ. ಇದರಿಂದ ಈ ಎರಡು ಹೊತ್ತಿಗೆ ಬರುತ್ತಿದ್ದ ಸರ್ಕಾರಿ ಬಸನ್ನು ಪುನರ್ ಆರಂಭಿಸುವಂತೆ ಪುತ್ತೂರು ಡಿಪೊ ಮ್ಯಾನೇಜರ್ ರವರಿಗೆ ಬರೆಯಲು ನಿರ್ಣಯಿಸಲಾಯಿತು.
 
ಸುಳ್ಯಪದವು ಪ್ರದೇಶದ ಕುಡಿಯುವ ನೀರಿನ ಪಂಪ್ ಚಾಲಕರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರನ್ನು ಸಾರ್ವಜನಿಕ ಪ್ರದೇಶದಲ್ಲಿ ಅವ್ಯಾಚಕ ಶಬ್ದ ಬೈದು ನಿಂದಿಸಿದ ವಿಚಾರದಲ್ಲಿ ಆತನನ್ನು ವಜಾಗೊಳಿಸಿ   ಏ.30 ರಂದು ನಡೆಯುವ ಬಳಕೆದಾರ ಸಭೆಯಲ್ಲಿ  ನೂತನ ಪಂಪ್ ಚಾಲಕರ  ನೇಮಕಾತಿ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. 
ಸಭೆಯಲ್ಲಿ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ ಸದಸ್ಯರಾದ ರವಿರಾಜ ರೈ ಸಜಂಕಾಡಿ, ವಸಂತ ಗೌಡ ಕನ್ನಯ, ವೆಂಕಟೇಶ್ ಕನ್ನಡ್ಕ, ಲಿಂಗಪ್ಪ ಮೋಡಿಕೆ, ಧರ್ಮೇಂದ್ರ ಪದಡ್ಕ, ಕಲಾವತಿ ಗೌಡ ಪಟ್ಲಡ್ಕ, ಜ್ಯೋತಿ ಅಂಬಟೆಮೂಲೆ, ಸುಜಾತ ಎಂ, ಸವಿತಾ ನೇರೋತ್ತಡ್ಕ,  ಹೇಮಾವತಿ ಮೋಡಿಕೆ, ಪುಷ್ಷಲತಾ ದೇವಕಜೆ, ದಮಯಂತಿ ನೆಕ್ಕರೆ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಸ್ವಾಗತಿಸಿ, ವಂದಿಸಿ, ಸರ್ಕಾರಿ ಸುತೋಳೆಗಲನ್ನು ಓದಿದರು. ಪಂ ಸಿಬ್ಬಂದಿಗಳು ಸಹಕರಿಸಿದರು.

ಮಾಹಿತಿ ಕಾರ್ಯಕ್ರಮ

ಮಲೇರಿಯಾ ರೋಗ ಹರಡುವಿಕೆ ಮತ್ತು ತಡೆಗಟ್ಟುವ ವಿಧಾನಗಳ ಬಗ್ಗೆ  ಪಡುವನ್ನೂರು  ಉಪ ಕೇಂದ್ರದ  ಸಿ.ಎಸ್ ಸಿ ಒ  ದಿವ್ಯ   ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ  ಗ್ರಾ ಪಂ ಸದಸ್ಯರು ಹಾಗೂ ಪಡುವನ್ನೂರು ಬಡಗನ್ನೂರು ಗ್ರಾಮಗಳ ಅಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.  ಗ್ರಾ.ಪಂ ಸಾಮಾನ್ಯ ಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here