ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಹಿರೇಬಂಡಾಡಿ ಶಾಖೆಯ ಪ್ರಧಾನ ವ್ಯವಸ್ಥಾಪಕಿ ಉಷಾ ಸೇವಾ ನಿವೃತ್ತಿ

0

ಉಪ್ಪಿನಂಗಡಿ: ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘದ ಹಿರೇಬಂಡಾಡಿ ಶಾಖೆಯಲ್ಲಿ ಪ್ರಧಾನ ವ್ಯವಸ್ಥಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಉಷಾ ಆರ್.ಕೆ. ಎ. 30ರಂದು ಸೇವಾ ನಿವೃತ್ತಿ ಹೊಂದಿದರು.


1987 ಎಪ್ರಿಲ್ 1ರಂದು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಸೇವೆಗೆ ನೇಮಕಗೊಂಡಿದ್ದ ಉಷಾರವರು ಸಂಘದ ಪ್ರಧಾನ ಕಚೇರಿ ಮತ್ತು ಶಾಖಾ ಕಚೇರಿಗಳಲ್ಲಿ ಪಡಿತರ ವಿಭಾಗ, ನಗದು ವಿಭಾಗ, ಸಾಲದ ವಿಭಾಗ, ಠೇವಣಾತಿ ವಿಭಾಗ ಮತ್ತು ಲೆಕ್ಕಪತ್ರ ವಿಭಾಗಗಳಲ್ಲಿ ಸೇವೆ ಸಲ್ಲಿಸಿ 2019ಡಿಸೆಂಬರ್ 10ರಿಂದ ಹಿರೇಬಂಡಾಡಿ ಶಾಖಾ ಕಚೇರಿಯ ಪ್ರಧಾನ ವ್ಯವಸ್ಥಾಪಕರಾಗಿ ನಿಯುಕ್ತಿಗೊಂಡು ಒಟ್ಟು 35 ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಿದರು.

ಅಣ್ಣು ಗೌಡ ಮತ್ತು ನೀಲಮ್ಮ ದಂಪತಿಯ ಪುತ್ರಿಯಾಗಿರುವ ಉಷಾರವರ ಪತಿ ರಾಧಾಕೃಷ್ಣ ಗೌಡರವರು ಸೇನೆಯಲ್ಲಿ ಸೇವೆ ಸಲ್ಲಿಸಿ ತದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುತ್ತಾರೆ. ಹಿರಿಯ ಪುತ್ರ ರಂಜಿತ್ ಭಾರತೀಯ ನೌಕಾ ದಳದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದು, ಕಿರಿಯ ಮಗ ರಾಧೇಶ್ ಮೇಜರ್ ಆಗಿ ಭಾರತೀಯ ಭೂಸೇನೆಯಲ್ಲಿ ಅಗಣಿತ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here