ಒಳಮೊಗ್ರು ಗ್ರಾಪಂನಿಂದ ವಿಕಲಚೇತನರಿಗೆ ಸವಲತ್ತು ವಿತರಣೆ

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ಗೆ ಒಳಪಟ್ಟ ವಿಕಲಚೇತನ ಫಲಾನುಭವಿಗಳಿಗೆ 2020-22 ನೇ ಸಾಲಿನ ವಿವಿಧ ಸಲವತ್ತುಗಳನ್ನು ಎ.30 ರಂದು ವಿತರಿಸಲಾಯಿತು. ಗ್ರಾಮ ಪಂಚಾಯತ್ ಸ್ವಂತ ನಿಧಿ ಶೇ.05 ರ ನಿಧಿಯಿಂದ ವಿಕಲಚೇತನರಿಗೆ ಅವಶ್ಯವಿರುವ ವೀಲ್ ಚೆಯರ್, ಸ್ಟಿಕ್, ಶ್ರವಣ ಸಾಧನಗಳನ್ನು ವಿತರಿಸಲಾಯಿತು. ಗ್ರಾಮದ 6 ಮಂದಿ ವಿಕಲಚೇತನ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ವಿತರಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್, ಕಾರ್ಯದರ್ಶಿ ಜಯಂತಿ, ಸದಸ್ಯರುಗಳಾದ ಶೀನಪ್ಪ ನಾಯ್ಕ್, ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಸಿರಾಜುದ್ದೀನ್, ಚಿತ್ರ ಬಿ.ಸಿ, ಶಾರದಾ, ನಳಿನಾಕ್ಷಿ, ನಿಮಿತಾ ರೈ, ವನಿತಾ ಕುಮಾರಿ, ಪ್ರದೀಪ್, ಲತೀಫ್, ಮಹೇಶ್ ಕೇರಿ ಉಪಸ್ಥಿತರಿದ್ದರು. ಸಿಬ್ಬಂದಿಗಳು ಸಹಕರಿಸಿದ್ದರು.

ಕ್ಯಾಶ್‌ಲೆಸ್ ಇ.ಪೇಮೆಂಟ್ ಆರಂಭ

ಗ್ರಾಮಸ್ಥರಿಗೆ ಗ್ರಾಮ ಪಂಚಾಯತ್‌ಗೆ ಸಲ್ಲತಕ್ಕ ತೆರಿಗೆ, ಶುಲ್ಕಗಳನ್ನು ಇ.ಪೇಮೆಂಟ್ ಮೂಲಕ ಪಾವತಿ ಮಾಡುವ ವ್ಯವಸ್ಥೆಯನ್ನು ಒಳಮೊಗ್ರು ಗ್ರಾಪಂನಲ್ಲಿ ಆರಂಭಿಸಲಾಗಿದೆ. ಗ್ರಾಪಂಗೆ ಸಲ್ಲತಕ್ಕ ತೆರಿಗೆ, ಶುಲ್ಕ ಇತ್ಯಾದಿ ಪಾವತಿಗಳನ್ನು ಗ್ರಾಹಕರು ಗೂಗಲ್‌ಪೇ, ಫೋನ್‌ಪೇ ಇತ್ಯಾದಿಗಳ ಮೂಲಕ ಪಾವತಿ ಮಾಡುವ ವ್ಯವಸ್ಥೆಯನ್ನು ಪಂಚಾಯತ್ ಕಛೇರಿಯಲ್ಲಿ ಆರಂಭಿಸಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here