ಗ್ರಾಮೀಣ ಭಾಗದ ಕೃಷಿಕರಿಗೆ 9-11 ಸಮಸ್ಯೆ ಪರಿಹಾರಕ್ಕಾಗಿ ಶಾಸಕರು, ಸಂಸದರಿಗೆ ಮನವಿ ಮಾಡಲು ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯ

0

ಪುತ್ತೂರು: ಕೃಷಿಕರಿಗೆ ತಮ್ಮ ಜಮೀನಿಗೆ ಸಂಬಂಧಿಸಿ 9-11 ಪಡೆಯಲು ಈ ಹಿಂದೆ ಇದ್ದಂತೆ ಗ್ರಾ.ಪಂ ಬದಲಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯುವ ವ್ಯವಸ್ಥೆ ಗ್ರಾಮೀಣ ಭಾಗದ ಕೃಷಿಕರಿಗೆ ತೊಂದರೆ ಆಗುತ್ತಿದೆ. ಈ ನಿಟ್ಟಿನಲ್ಲಿ ಮುಡಾದ ಬದಲು ಈ ಹಿಂದಿನಂತೆ ಗ್ರಾ.ಪಂ ಮಟ್ಟದಲ್ಲೇ 9-11 ಕೊಡುವಂತೆ ಸರಕಾರಕ್ಕೆ ಬರೆಯುವ ಕುರಿತು ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದ ಹಾಗು ಶಾಸಕರಿಗೆ ಮತ್ತು ಸಂಸದರಿಗೆ ಮನವಿ ಮಾಡುವುದಾಗಿ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.

ಎಪಿಎಂಸಿ ಸಾಮಾನ್ಯ ಸಭೆಯು ಎ.30 ರಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ನಡೆಯಿತು. ಈಗಾಗಲೇ ಕೃಷಿಕರಿಗೆ ತಮ್ಮ ಜಮೀನಿನಲ್ಲಿ ಇತರ ಕಟ್ಟಡ ಅಥವಾ ಚಟುವಟಿಕೆ ನಡೆಸಲು 9-11 ಅಗತ್ಯವಿದ್ದು ಅದನ್ನು ಪಡೆಯಲು ಇದೀಗ ಮಂಗಳೂರಿಗೆ ಹೋಗುವುದು ಕಷ್ಟಕರವಾಗಿದೆ ಎಂದು ಬಾಲಕೃಷ್ಣ ಬಾಣಜಾಲು ಪ್ರಸ್ತಾಪಿಸಿದರು. ಉತ್ತರಿಸಿದ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ರೈತರು ಗ್ರಾ.ಪಂನಲ್ಲಿ 9-11 ಪಡೆದು ಬೇರೆ ಬೇರೆ ವ್ಯವಹಾರ ಮಾಡುವುದು ಪದ್ಧತಿ ಇತ್ತು. ಆದರೆ ಯಾವುದೇ ಸಂಬಂಧವಿಲ್ಲದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೋಗುವುದು ರೈತರಿಗೆ ಅಧಿಕಾರಿಗಳು ಕೊಡುವ ತೊಂದರೆ ಆಗಿದೆ. ಈ ನಿಟ್ಟಿನಲ್ಲಿ 9-11 ಪಡೆಯುವಲ್ಲಿ ಗ್ರಾ.ಪಂನಲ್ಲೇ ಹಿಂದಿನಂತೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಬರೆಯುವ ಕುರಿತು ಸಭೆಯಲ್ಲಿ ನಿರ್ಣಯ ಮಾಡುವುದು ಮತ್ತು ಶಾಸಕರಿಗೆ ಮತ್ತು ಸಂಸದರಿಗೆ ಮನವಿ ಮಾಡುವಂತೆ ಸಭೆಯಲ್ಲಿ ತಿಳಿಸಿದರು.

ಲೀವ್ ಆಂಡ್ ಲೈಸೆನ್ಸ್ ಆಧಾರದಲ್ಲಿ ಅಂಗಡಿ ಗೋದಾಮು ಹಂಚಿಕೆ:

ತ್ತೂರು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಖಾಲಿ ಇರುವ ಅಂಗಡಿ ಮತ್ತು ಗೋದಾಮುಗಳನ್ನು ಲೀವ್ ಆಂಡ್ ಲೈಸೆನ್ಸ್ ಆಧಾರದಲ್ಲಿ ಹಂಚಿಕೆ ಮಾಡುವ ಕುರಿತು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದರು. 40 ಎಂ.ಟಿ ಗೋದಾಮು 4, 30 ಎಂ.ಟಿ ಗೋದಾಮು 2 , ಸಣ್ಣ ಅಂಗಡಿ 1, ಸಂಡ್ರಿಶಾಪ್ 6, ಸಂತೆಕಟ್ಟೆ ಸುತ್ತ ಅಂಗಡಿ 6, ಸಂತೆಕಟ್ಟೆ ಸುತ್ತ ಗೋದಾಮು 2ಇದ್ದು ಅದನ್ನು ಎಪಿಎಂಸಿಗೆ ಆದಾಯ ಬರುವ ನಿಟ್ಟಿನಲ್ಲಿ ಎಪಿಎಂಸಿ ಲೈಸೆನ್ಸ್ ಹೊಂದಿದವರಿಗೆ ಹಂಚಿಕೆ ಮಾಡುವ ಕುರಿತು ಅವರು ಮಾಹಿತಿ ನೀಡಿದರು. ಎಪಿಎಂಸಿ ಉಪಾಧ್ಯಕ್ಷ ಮಂಜುನಾಥ್ ಎನ್,ಎಸ್, ಸದಸ್ಯರಾದ ಬಾಲಕೃಷ್ಣ ಬಾಣಜಾಲು, ಪುಲಸ್ತ್ಯಾ ರೈ, ತ್ರಿವೇಣಿ ಪೆರ್‍ವೋಡಿ, ಅಬ್ದುಲ್ ಶಕೂರು ಹಾಜಿ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ತೀರ್ಥಾನಂದ ದುಗ್ಗಳ, ಮೇದಪ್ಪ ಗೌಡ, ಕುಶಾಲಪ್ಪ ಗೌಡ, ಬೂಡಿಯಾರ್ ರಾಧಾಕೃಷ್ಣ ರೈ, ಕೃಷ್ಣಕುಮಾರ್ ರೈ, ನಾಮನಿರ್ದೇಶಿತ ಸದಸ್ಯರಾದ ಮೋಹನಾಂಗಿ, ಬಾಲಕೃಷ್ಣ ಜೋಯಿಷ, ಬಾಬು ಸಭೆಯಲ್ಲಿ ಉಪಸ್ಥಿತರಿದ್ದರು.

ಮೇ 21 ಕ್ಕೆ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಬಹುಕಾಲದ ಬೇಡಿಕೆಯಾಗಿರುವ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ನಿರ್ಮಾಣಕ್ಕೆ ಎಲ್ಲಾ ಹಂತದ ಟೆಂಡರ್ ಪೂರ್ಣಗೊಂಡಿದ್ದು, ಸಂಸದರು ಮತ್ತು ಶಾಸಕರ ಮಾರ್ಗದರ್ಶನದಂತೆ ಮೇ 21 ಕ್ಕೆ ಅದರ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಸಚಿವರು, ಮಂತ್ರಿಗಳು ಬರಲಿದ್ದಾರೆ – ದಿನೇಶ್ ಮೆದು ಅಧ್ಯಕ್ಷರು ಎಪಿಎಂಸಿ ಪುತ್ತೂರು

LEAVE A REPLY

Please enter your comment!
Please enter your name here