ಹಳೆನೇರೆಂಕಿ: ಫಿಲೋಮಿನಾ ಮ್ಯಾಥ್ಯುವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

0


ನೆಲ್ಯಾಡಿ: ಇತ್ತೀಚೆಗೆ ನಿಧನರಾದ ಹಳೆನೇರೇಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಫಿಲೋಮಿನಾ ಮ್ಯಾಥ್ಯುವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಮೇ ೧ರಂದು ಸಂಜೆ ಹಳೆನೇರೆಂಕಿಯಲ್ಲಿ ನಡೆಯಿತು.
ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ತಾ.ಪಂ.ಮಾಜಿ ಸದಸ್ಯೆ, ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿನಿಶೇಖರ್ ಕಟ್ಟಪುಣಿ, ಹಳೆನೇರೆಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಶೀಲಾವತಿ, ಕೃಷಿಕರಾದ ಹೊನ್ನಪ್ಪ ಗೌಡ ಮರಂಕಾಡಿ, ಶೇಖರ ಗೌಡ ಕಟ್ಟಪುಣಿಯವರು ಮೃತ ಫಿಲೋಮಿನಾ ಮ್ಯಾಥ್ಯುರವರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್ ಜನಾರ್ದನ ಕದ್ರರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಫಿಲೋಮಿನಾ ಮ್ಯಾಥ್ಯುರವರ ಪತಿ, ನಿವೃತ್ತ ಸೈನಿಕ ಮ್ಯಾಥ್ಯು ಟಿ.ಜಿ., ಹಳೆನೇರೇಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಪುಷ್ಪಾವತಿ ಸುರೇಶ್, ನಿರ್ದೇಶಕರುಗಳಾದ ಸವಿತಾ ಕದ್ರ, ಚಂದ್ರಾವತಿ, ಜಯಶೀಲ, ಮಾಜಿ ನಿರ್ದೇಶಕರಾದ ಮೀನಾಕ್ಷಿ ಅಲೆಪ್ಪಾಡಿ, ಹಾಲು ಪರೀಕ್ಷಕಿ ಯೋಗಿನಿ, ರಾಮಕುಂಜ ಗ್ರಾ.ಪಂ.ಸದಸ್ಯರಾದ ಕುಶಾಲಪ್ಪ ಗೌಡ, ಸುಚೇತಾ ಬರೆಂಬೆಟ್ಟು, ಎಪಿಎಂಸಿ ನಿರ್ದೇಶಕ ಕೊರಗಪ್ಪ ಐ, ಸಂಘಟನೆಯ ಪ್ರಮುಖ್ ವೀರೇಂದ್ರ ಪಾಲೆತ್ತಡ್ಡ, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಮೇಶ್ ರೈ ರಾಮಜಾಲು, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಚರಣ್ ಪಾಲೆತ್ತಡ್ಡ, ಕಾರ್ಯದರ್ಶಿಗಳಾದ ನಾಣ್ಯಪ್ಪ, ಪ್ರವೀಣ್ ಹಿರಿಂಜ, ಸ್ಥಳೀಯರಾದ ಗುಣಪಾಲ, ಶೇಖರ ಅಲೆಪ್ಪಾಡಿ, ಧರ್ಣಪ್ಪ ಗೌಡ ಅಲೆಪ್ಪಾಡಿ, ವೀರಪ್ಪ ಗೌಡ, ಜಯರಾಜ್, ವೆಂಕಪ್ಪ ಗೌಡ, ಶೇಖರ ಗೌಡ, ಶೇಖರ ಗೌಡ ಮರಂಕಾಡಿ, ಮೇದಪ್ಪ, ದಾಮೋದರ, ಸೌಮ್ಯ, ಹೇಮಚಂದ್ರ, ಹೇಮಲತಾ, ಜಾಹ್ನವಿಹೇಮಚಂದ್ರ, ರೋಹಿತಾಕ್ಷ ಅಲೆಪ್ಪಾಡಿ, ನವೀನ್ ರೈ ಎರಟಾಡಿ, ಹರಿಣಾಕ್ಷಿ, ಸೇವಾ ಪ್ರತಿನಿಧಿ ಗಣೇಶ್ ಕಟ್ಟಪುಣಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here