ಪುತ್ತೂರು ಮಾನಕ ಜ್ಯುವೆಲ್ಲರ್‍ಸ್‌ನಲ್ಲಿ ಅಕ್ಷಯ ತೃತೀಯ ಸಂಭ್ರಮ ಮನದಿಚ್ಚೆಯ ಆಭರಣ ಖರೀದಿಸಿ ಖುಷಿಪಟ್ಟ ಆಭರಣ ಪ್ರಿಯರು

0

ಪುತ್ತೂರು: ಇಲ್ಲಿನ ಸಂಜೀವ ಶೆಟ್ಟಿ ಟೆಕ್ಸ್‌ಟೈಲ್ಸ್ ಹತ್ತಿರವಿರುವ ಮಾನಕ ಜ್ಯುವೆಲ್ಲರ್‍ಸ್‌ನಲ್ಲಿ ಅಕ್ಷಯ ತೃತೀಯವನ್ನು ಸಂಭ್ರಮಿಸಲಾಯಿತು. ಚಿನ್ನ ಬೆಳ್ಳಿ ಖರೀದಿಗೆ ಶುಭ ದಿನವಾಗಿರುವ ಅಕ್ಷಯ ತೃತೀಯ ದಿನದಂದು ಗ್ರಾಹಕರು ಮಾನಕ ಜ್ಯುವೆಲ್ಲರ್‍ಸ್‌ಗೆ ಭೇಟಿ ತಮ್ಮ ಮನದಿಚ್ಚೆಯ ಆಭರಣಗಳನ್ನು ಖರೀದಿಸುವ ಮೂಲಕ ಅಕ್ಷಯ ತೃತೀಯವನ್ನು ಸಂಭ್ರಮಿಸಿದರು.

ಬೆಳಿಗ್ಗೆಯಿಂದಲೇ ಗ್ರಾಹಕರು ಜ್ಯುವೆಲ್ಲರ್‍ಸ್‌ಗೆ ಭೇಟಿ ನೀಡುತ್ತಿರುವ ದೃಶ್ಯ ಕಂಡು ಬಂತು. ಅಕ್ಷಯ ತೃತೀಯದ ಅಂಗವಾಗಿ ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂಗೆ ರೂ.60 ಕಡಿತ ಮಾಡಲಾಗಿತ್ತು. ಗ್ರಾಹಕರ ಅನುಕೂಲ ಮತ್ತು ಆಪೇಕ್ಷೆಯ ಮೇರೆಗೆ ವೈವಿಧ್ಯಮಯ ಚಿನ್ನಾಭರಣಗಳ ಸಂಗ್ರಹವಿದ್ದು ಗ್ರಾಹಕರು ಮನದಿಚ್ಚೆಯ ಆಭರಣಗಳನ್ನು ಖರೀದಿಸಬಹುದಾಗಿದೆ.

ಗ್ರಾಹಕರಿಂದ ಪೂರ್ಣ ಬೆಂಬಲ

ಅಕ್ಷಯ ತೃತೀಯದ ವಿಶೇಷವಾಗಿ ಮಾನಕ ಜ್ಯುವೆಲ್ಲರ್‍ಸ್‌ನಲ್ಲಿ ಬೆಳಿಗ್ಗೆಯಿಂದಲೇ ಗ್ರಾಹಕರು ತುಂಬಿಕೊಂಡಿದ್ದರು. ಈ ದಿನ ಶುಭ ಕಾರ್ಯಗಳಿಗೆ ಮತ್ತು ಚಿನ್ನ ಬೆಳ್ಳಿ ಖರೀದಿಗೆ ವಿಶೇಷ ದಿನವಾಗಿರುವುದರಿಂದ ಜನರು ತಮ್ಮ ಇಚ್ಚೆಯ ಆಭರಣಗಳ ಹುಡುಕಾಟದಲ್ಲಿ ನಿರತರಾಗಿರುವ ದೃಶ್ಯ ಕಂಡುಬಂದಿತ್ತು. ಗ್ರಾಹಕರು ಉತ್ತಮ ರೀತಿಯಲ್ಲಿ ಬೆಂಬಲ ನೀಡಿದ್ದಾರೆ ಎಲ್ಲರಿಗೂ ಅಕ್ಷಯ ತೃತೀಯ ಶುಭವನ್ನು ತರಲಿ ಎನ್ನುವ ಶುಭಾಶಯಗಳೊಂದಿಗೆ ಗ್ರಾಹಕರ ಅನುಕೂಲಕ್ಕಾಗಿ ಶೀಘ್ರದಲ್ಲೇ ಪುತ್ತೂರಲ್ಲಿ ಮಾನಕದ ನೂತನ ಮಳಿಗೆ ಶುಭಾರಂಭಗೊಳ್ಳಲಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here