ನೆಟ್ಟಣಿಗೆ: ಭೂತಬಲಿ ಉತ್ಸವ, ಅಭಿನಂದನೆ . ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಭೂತಬಲಿ ಉತ್ಸವ

0

ಪುತ್ತೂರು: ಕಾಸರಗೋಡು ತಾಲೂಕಿನ ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಶ್ರೀ ಭೂತಬಲಿ ಉತ್ಸವ ಮೇ ೧ರಿಂದ ೩ರವರೆಗೆ ಜರಗಿತು.
ದೇವಳದ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡ ಸುಮಾರು ೫೫ ಮಂದಿಗೆ ಮೇ ೨ರಂದು ಸಂಜೆ ೬ಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಅಭಿನಂದನೆ ನೆರವೇರಿಸಿ ಮಾತನಾಡಿದ ಕ್ಷೇತ್ರದ ಮೊಕ್ತೇಸರ ಎನ್. ದಾಮೋದರ ಮಣಿಯಾಣಿ ನಾಕೂರು, ಹೊರಗಿನ ಸಾಧಕರನ್ನು ಕರೆದು ಗೌರವಿಸುವ ಬದಲು ಕ್ಷೇತ್ರದಲ್ಲೇ ಕೆಲಸ ಮಾಡಿದ ಮಹನೀಯರನ್ನು ಗೌರವಿಸುವ ಕೆಲಸ ಮಾಡಿದ್ದೇವೆ. ಇದು ಎಲ್ಲಿಯೂ ಆಗಿರದ ಕೆಲಸ ಎಂದುಕೊಂಡಿದ್ದೇವೆ. ಇಲ್ಲಿ ಕೆಲಸ ಮಾಡಿದ ಮಹನೀಯರಿಂದಾಗಿ ದೇವಸ್ಥಾನದ ಕೈಂಕರ್ಯಗಳು ಸಾಂಗವಾಗಿ ನಡೆದುಕೊಂಡು ಬಂದಿದೆ. ಇವರೆಲ್ಲರನ್ನು ಗುರುತಿಸುವ ಕೆಲಸವನ್ನು ಮಾಡಿದ್ದೇವೆ ಎಂದರು.
ನಾಕೂರು ಮನೆತನ ಶಿವನೊಲಿದ ಮನೆತನ. ಈ ಮನೆತನದ ಹಿರಿಯರು ತೋರಿಸಿಕೊಟ್ಟ ದಾರಿಯಲ್ಲಿ ಸಾಗುತ್ತಾ, ದೇವಸ್ಥಾನದ ಮೊಕ್ತೇಸರ ಕೆಲಸವನ್ನು ನಿರ್ವಹಿಸುತ್ತಿದ್ದೇನೆ. ಇಲ್ಲಿನ ಕೆಲಸಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ ಎಂದರೆ ಅದಕ್ಕೆ ಕಾರಣ ಇಲ್ಲಿ ಅಭಿನಂದನೆ ಸ್ವೀಕರಿಸಿದ ಮಹನೀಯರು ಎಂದರು.
ಮಾಧವ ನೆಟ್ಟಣಿಗೆ ಮಾತನಾಡಿ, ಖರಸುರ ಕಾಶಿಯಿಂದ ತಂದ ಲಿಂಗಗಳ ಪೈಕಿ ಒಂದು ಭೂಗರ್ಭದಲ್ಲಿ ಮರೆಯಾಯಿತು. ಅದು ನಿಟ್ಟೋನಿ ಎಂಬ ಮುಗೇರ ಸಮುದಾಯದ ಭಕ್ತನಿಗೆ ನರೆಗಡ್ಡೆ ಅಗೆಯುವ ಸಮಯ ಗೋಚರವಾಗಿ, ಮುಂದೆ ದೇವಸ್ಥಾನ ನಿರ್ಮಾಣ ಮಾಡಲಾಯಿತು. ಈ ಕ್ಷೇತ್ರದಲ್ಲಿ ೧೨ ವರ್ಷಕ್ಕೊಂದು ಬಾರಿ ಜಾಂಬ್ರಿ ಮಹೋತ್ಸವವೂ ನಡೆಯುತ್ತಿದೆ. ಈ ಬಾರಿ ದಾಮೋದರ ಮಣಿಯಾಣಿ ಅವರು ಆಡಳಿತ ವಹಿಸಿಕೊಂಡು ೨೫ ವರ್ಷ ಸಂದ ಹಿನ್ನೆಲೆಯಲ್ಲಿ ದೇವಸ್ಥಾನದ ವಿವಿಧ ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಂಡ ಮಹನೀಯರನ್ನು ಗೌರವಿಸುವ ಕೆಲಸ ನಡೆದಿದೆ ಎಂದರು.
ಧಾರ್ಮಿಕ ಕಾರ್ಯಕ್ರಮ:
ಮೇ ೧ರಂದು ಶ್ರೀ ಮಹಾಲಿಂಗೇಶ್ವರ ದೇವರಿಗೆ ಪೂಜೆ ನಡೆದು, ಹುಲಿಭೂತ, ಧೂಮಾವತಿ, ಪಟ್ಟದ ಅರಸ ಬೀರ್ನಾಳ್ವ ದೈವಗಳಿಗೆ ತಂಬಿಲ ನಡೆಯಿತು. ಮೇ ೨ರಂದು ಬೆಳಿಗ್ಗೆ ನಿತ್ಯ ಪೂಜೆಯಾಗಿ ಬೆಳಿಗ್ಗೆ ೮ಕ್ಕೆ ನೂರ ಎಂಟು ತೆಂಗಿನಕಾಯಿ ಗಣಪತಿ ಹೋಮ, ಪ್ರಸಾದ ವಿತರಣೆ, ಏಕಾದಶ ರುದ್ರ, ೧೩೫ ಸೀಯಾಳ ಅಭಿಷೇಕ, ೧೩೫ ಕುಡ್ತೆ ದನದ ಹಾಲು ಅಭಿಷೇಕವಾಗಿ, ಭಕ್ತರಿಂದ ತುಲಾಭಾರ ಸೇವೆ ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಸಂಜೆ ಕ್ಷೇತ್ರದ ಕಾರ್ಯಸ್ಥ ಗುಳಿಗ ದೈವದ ಕೋಲ ನಡೆದು ಬಳಿಕ, ರಾತ್ರಿ ಶ್ರೀ ಮಹಾಲಿಂಗೇಶ್ವರ ದೇವರ ಶೃಂಗಾರ ಬಲಿ ಉತ್ಸವ, ಅನ್ನದಾನ ಜರಗಿತು. ಮೇ ೩ರಂದು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ, ಗಂಧ ಪ್ರಸಾದ ವಿತರಿಸಲಾಯಿತು.

ಅಭಿನಂದನೆ:
ಎನ್. ದಾಮೋದರ ಮಣಿಯಾಣಿ ಅವರು ಮೊಕ್ತೇಸರರಾಗಿ ೨೫ ವರ್ಷ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡ ಮಹನೀಯರನ್ನು ಅಭಿನಂದಿಸಲಾಯಿತು. ಕುಂಟಾರು ವಾಸುದೇವ ತಂತ್ರಿಗಳ ಅನುಪಸ್ಥಿತಿಯಲ್ಲಿ ಅವರ ಸೇವೆಯನ್ನು ಗುರುತಿಸಲಾಯಿತು. ಗೋಪಾಲಕೃಷ್ಣ ಅಡಿಗಳು ಕುಂಬಳೆ, ಕ್ಷೇತ್ರದ ಅರ್ಚಕ ಶ್ರೀರಾಮಪ್ರಸಾದ್ ಕೇಕುಣ್ಣಾಯ, ಗಂಗಾಧರ ಮಾರಾರ್ ನೀಲೇಶ್ವರ, ಶ್ರೀನಿವಾಸ ರಾವ್ ನಾರಂಪಾಡಿ, ಅರ್ಚಕರ ಸಹಾಯಕ ಶ್ರೀಧರ ಭಟ್ ಕಾಟುಕುಕ್ಕೆ, ವೆಂಕಟ್ರಮಣ ಹೊಳ್ಳ ಉಕ್ಕುಮೂಲೆ, ಶಂಕರನಾರಾಯಣ ರಾವ್ ಚಾರ್ಮಾಡಿ, ನಾರಾಯಣ ಬಲ್ಲಾಳ್ ನಾಟೆಕಲ್, ಕ್ಷೇತ್ರದ ಕ್ಲರ್ಕ್ ದಯಾನಂದ, ನಾರಾಯಣ ಆಚಾರ್ಯ ಕಿನ್ನಿಂಗಾರು, ಲಕ್ಷ್ಮಣ ಆಚಾರ್ಯ ನಾಕೂರು, ಪದ್ಮನಾಭ ಮಣಿಯಾಣಿ ಬೆಳೇರಿ ಮೇಗಿನಮನೆ, ಕೃಷ್ಣ ಮಣಿಯಾಣಿ ಬೆಳೇರಿ, ಬಾಲಗೋಪಾಲ ಮಣಿಯಾಣಿ ಬೆಳೇರಿ ದೊಡ್ಡಮನೆ, ಪಕೀರ ಕಾರ್ನವರ್ ಬೆಳೇರಿ, ಕೃಷ್ಣ ಪಣಿಕ್ಕರ್ ಆದೂರು, ನಾರಾಯಣ ಗೌಡ ಆಜಡ್ಕ, ಶಿವರಾಮ ಗೌಡ ಗುತ್ಯಡ್ಕ, ಕುಂಞ್ಞಿಕಣ್ಣ ಅಗಸ ಕುಂಜತ್ತೋಡಿ, ನಾಗೇಶ ಸೇರಿಗಾರ ನೆಟ್ಟಣಿಗೆ, ಶ್ರೀಧರ ಸೇರಿಗಾರ ನೆಟ್ಟಣಿಗೆ, ಉಮೇಶ ಸೇರಿಗಾರ ನೆಟ್ಟಣಿಗೆ, ಚಂದ್ರಶೇಖರ ಸೇರಿಗಾರ ಪುತ್ತೂರು, ಪ್ರಭಾಕರ ಸೇರಿಗಾರ ನೆಟ್ಟಣಿಗೆ, ಯಾದವ ಸೇರಿಗಾರ ನೆಟ್ಟಣಿಗೆ, ಸುಧಾಕರ ಸೇರಿಗಾರ ನೆಟ್ಟಣಿಗೆ, ನಾರಾಯಣ ಪಾಟಾಳಿ ನೆಟ್ಟಣಿಗೆ, ನಾರಾಯಣ ಮೂಲ್ಯ ಪೈರುಪುಣಿ, ಪ್ರಕಾಶದಾಸ್ ಬೆದ್ರಡ್ಕ, ಅಣ್ಣುನಾಯ್ಕ ಮಂಜತ್ತೂರು, ಬಾಳಪ್ಪ ನಾಯ್ಕ ಮಂಜತ್ತೂರು, ಸುಬ್ಬಣ್ಣ ನಾಯ್ಕ ಪಾದೆಗದ್ದೆ, ಅಪ್ಪಯ ನಾಯ್ಕ ಮಂಜತ್ತೂರು, ರಾಮ ನಾಯ್ಕ ಬಜ, ಕೊರಗಪ್ಪ ನಾಯ್ಕ ಕಜೆ, ದೇವಪ್ಪ ನಾಯ್ಕ ಬಜ, ಮೋನಪ್ಪ ನಾಯ್ಕ ಸವಣೂರು, ಐತ್ತಪ್ಪ ನಾಯ್ಕ ತುರಕೆರೆಮೂಲೆ, ಶಿವಪ್ಪ ನಾಯ್ಕ ಬೀಜತ್ತಡ್ಕ, ನಿತ್ಯಾನಂದ ನಾಯ್ಕ ಕಜೆ, ವಿಶ್ವನಾಥ ನಾಯ್ಕ ಪಾದೆಗದ್ದೆ, ಬಾಳಪ್ಪ ನಾಯ್ಕ ಕಜೆ, ಸಂಜೀವ ನಾಯ್ಕ ಏಲಕ್ಕಿಮೂಲೆ, ರಮೇಶ್ ನಾಯ್ಕ ಪಾದೆಗದ್ದೆ, ಶಿವಪ್ಪ ನಾಯ್ಕ ಕೈಪಂಗಳ, ಜಯಾನಂದ ನಾಯ್ಕ ಬೀಜತ್ತಡ್ಕ, ಶ್ರೀಧರ ಚೆಟ್ಟಾರ್ ನೆಟ್ಟಣಿಗೆ, ದಾಮೋದರ ಚೆಟ್ಟಾರ್ ನೆಟ್ಟಣಿಗೆ, ಸಂಜೀವ ಚೆಟ್ಟಾರ್ ನೆಟ್ಟಣಿಗೆ, ಹರೀಶ್ ಮಯ್ಯಾಳ, ವಾಸು ಪೂಜಾರಿ ಬಜ, ಸುರೇಶ್ ಕೋಪಾಲ ಬಜ, ಬಾಬು ಕಾಪಾಡ ನೆಟ್ಟಣಿಗೆ, ಆನಂದ ಕಾಪಾಡ ನೆಟ್ಟಣಿಗೆ, ವಿಶ್ವನಾಥ ಪರವ ಪಡುಮಲೆ, ಸರಸ್ವತಿ ನಾಕೂರು, ದಿ. ಶಿವರಾಮ ಕೇಕುಣ್ಣಾಯ ನೆಟ್ಟಣಿಗೆ ಅವರ ಪರವಾಗಿ ಕೃಷ್ಣಮೂರ್ತಿ ಕೇಕುಣ್ಣಾಯ, ದಿ. ಶ್ರೀನಿವಾಸ್ ರಾವ್ ನೆಟ್ಟಣಿಗೆ ಪರವಾಗಿ ಅವರ ಪತ್ನಿ ಮಹಾಲಕ್ಷ್ಮೀ ನೆಟ್ಟಣಿಗೆ, ದಿ. ಕುಂಞಂಬು ಚೆಟ್ಟಾರು ಪರವಾಗಿ ಕಮಲ ನೆಟ್ಟಣಿಗೆ, ಹಿಂದೆ ೮ ವರ್ಷಗಳ ಕಾಲ ಆಡಳಿತ ನಡೆಸಿದ ದಿ. ಎನ್. ಕೃಷ್ಣ ಮಣಿಯಾಣಿ ಅವರ ನೆನಪಿಗಾಗಿ ಗೋಪಾಲ ನೆಟ್ಟಣಿಗೆ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಕ್ಷೇತ್ರದ ಮೊಕ್ತೇಸರ ದಾಮೋದರ ಎನ್. ದಾಮೋದರ ಮಣಿಯಾಣಿ ಅವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here