ಕೊಳ್ತಿಗೆ ಕೃಷಿ ಮಾಹಿತಿ ಕಾರ್ಯಾಗಾರ

0

 

ಕೊಳ್ತಿಗೆ: ರೈತಮಿತ್ರ ಕೂಟ ಕೊಳ್ತಿಗೆ (ಕೊಳ್ತಿಗೆ ಕೃಷಿಪತ್ತಿನ ಸಹಕಾರಿ ಸಂಘ ಪ್ರವರ್ತಿತ) ಕೃಷಿಕರಿಗಾಗಿ ಕೃಷಿ ಮಾಹಿತಿ ಹಾಗೂ ಕಾರ್ಬನ್ ಫೈಬರ್ ದೋಟಿ ಇದರ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು, ದಕ್ಷಿಣ ಕನ್ನಡ ಕೃಷಿ ಇಲಾಖೆಯಲ್ಲಿ ಸಾವಯವ ಸಮಗ್ರ ಕೃಷಿಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪಡೆದ ಶ್ರೀ ಗಣಪತಿ ಭಟ್ ಎಕ್ಕಡ್ಕ ಇವರ ನಿವಾಸದಲ್ಲಿ ಸಭಾ ಕಾರ್ಯಕ್ರಮವು ಜರಗಿತು. ಇದರ ಅಧ್ಯಕ್ಷತೆಯನ್ನು ರೈತಮಿತ್ರ ಕೂಟ ಕೊಳ್ತಿಗೆಯ ಅಧ್ಯಕ್ಷರಾದ ಶ್ರೀ ದಿವಾಕರ ರೈ ಕೆರೆಮೂಲೆ ವಹಿಸಿದ್ದರು. ಸಿಎ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ವಸಂತ ಕುಮಾರ್ ರೈ ದುಗ್ಗಲ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. Eco fresh Enterprises ಬೆಳ್ತoಗಡಿ ಇದರ ಮಾಲಕರಾದ ಶ್ರೀ ರಾಜೇಶ್ ಹೆಗ್ಡೆ ಕಾರ್ಬನ್ ಫೈಬರ್ ದೋಟಿ ಅಡಿಕೆ ತೋಟದ ಕಲ್ಪವೃಕ್ಷ ಎಂದು ಬಣ್ಣಿಸಿ ಇದರ ಪ್ರಯೋಜನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು. ನಂತರ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುವ, ಅಡಿಕೆ, ತೆಂಗಿನಕಾಯಿ, ಮಾವು ಕೀಳುವ ಮೂಲಕ ಪ್ರಾತ್ಯಕ್ಷಿಕೆಯನ್ನು ನಾಗರಾಜ ಭಟ್ ಬೇಡಡ್ಕ ಮಾಡಿತೋರಿಸಿದರು.

CPCRI ವಿಟ್ಲ ಇಲ್ಲಿನ ಕೃಷಿ ವಿಜ್ಞಾನಿ ಡಾ. ಭವಿಷ್ಯ ಅಡಿಕೆ ಕೃಷಿಯ ಬಗ್ಗೆ ವಿಶೇಷವಾಗಿ ಹಿಂಗಾರ ಒಣಗುವ, ಎಳೆಕಾಯಿ ಬೀಳುವ ರೋಗದ ಬಗ್ಗೆ ಮಾತನಾಡಿ ಔಷಧಿ ಸಿಂಪಡಿಸುವ ಬಗ್ಗೆ ವಿವರಿಸಿದರು.

ಶ್ರೀ ಸುಬ್ರಹ್ಮಣ್ಯ ಭಟ್ ಕೈಲಾರು ಇತ್ತೀಚಿನ ವರ್ಷಗಳಿಂದ ಕಾರ್ಬನ್ ಫೈಬರ್ ದೋಟಿ ಉಪಯೋಗಿಸುತ್ತಿದ್ದು ತನ್ನ ಅನಿಸಿಕೆಯನ್ನು ಸಭೆಯ ಮುಂದಿಟ್ಟರು.

ವೇದಿಕೆಯಲ್ಲಿ ಸಿಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಹಂಸಾವತಿ, ಕಾರ್ಯಕ್ರಮದ ಆಯೋಜಕರಾದ ಶ್ರೀ ಗಣಪತಿ ಭಟ್ ಎಕ್ಕಡ್ಕ ಉಪಸ್ಥಿತರಿದ್ದರು.

ಶ್ರೀ ವಿಷ್ಣು ಭಟ್ ಎಕ್ಕಡ್ಕ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು, ಶ್ರೀ ಅಶೋಕ ಒರ್ಕೊಂಬು ಧನ್ಯವಾದವಿತ್ತರು, ಶ್ರೀ ಪ್ರಭಾಕರ ರೈ ಕೊರಂಬಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here