ಸಂಜಯನಗರ ಶಾಲಾ ಆರಂಭೋತ್ಸವ

0

  • ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಯಾವ ಸಾಗರದಲ್ಲೂ ಈಜಬಲ್ಲರು- ಯೂಸುಫ್ ಡ್ರೀಮ್ಸ್

ಪುತ್ತೂರು : ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಯಾವ ಸಾಗರದಲ್ಲೂ ಈಜಬಲ್ಲರು ಎಂದು ಪುತ್ತೂರು ನಗರಸಭಾ ಸದಸ್ಯರಾದ ಯುಸುಫ್ ಡ್ರೀಮ್ಸ್ ರವರು ಹೇಳಿದರು. ಅವರು ಸಂಜಯನಗರ ಸರ್ಕಾರಿ ಶಾಲಾ ಆರಂಭೋತ್ಸವ ಹಾಗೂ ಕಲಿಕಾ ಚೇತರಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 

ಸರಕಾರಿ ಶಾಲೆಗಳು ಮಕ್ಕಳ ಸರ್ವತೋಮುಖ ಕಲಿಕೆಗೆ ಒತ್ತು ನೀಡುತ್ತದೆ. ಮಕ್ಕಳ ಸ್ವಕಲಿಕೆಯ ಸಾಮರ್ಥ್ಯ ಹೆಚ್ಚಾಗುತ್ತದೆ. ಅಲ್ಲದೆ ಈ ವರ್ಷ ಜಾರಿಗೆ ಬಂದಿರುವ ಕಲಿತಾ ಚೇತರಿಕೆ ಹಾಗೂ ಮಳೆಬಿಲ್ಲು ಕಲಿಕಾ ಯೋಜನೆಗಳು ಮಕ್ಕಳಲ್ಲಿ ಕಲಿಕಾ ಕುತೂಹಲವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಬಲ್ಲದು ಎಂದರು. ಅಧ್ಯಕ್ಷತೆ ವಹಿಸಿಕೊಂಡ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಚೈತ್ರಾ ಮನೋಜ್ ಶುಭ ಹಾರೈಸಿದರು. ಹೊಸದಾಗಿ ಶಾಲೆಗೆ ಸೇರಿದ ಮಕ್ಕಳಿಗೆ ಪೋಷಕರು ಆರತಿ ಬೆಳಗಿ ತಿಲಕವನ್ನಿಟ್ಟು ಗುಲಾಬಿ ನೀಡಿ ಸ್ವಾಗತಿಸಲಾಯಿತು. ನಂತರ ಪೋಷಕರಿಗೆ ಕಲಿಕಾ ಚೇತರಿಕೆ ಹಾಗೂ ಮಳೆಬಿಲ್ಲು ಕಲಿಕಾ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಎಲ್ಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸಲಾಯಿತು. ಮಧ್ಯಾಹ್ನ ಸಿಹಿ ಊಟ ನೀಡಲಾಯಿತು. ಶಾಲಾ ಮುಖ್ಯಗುರು ರಮೇಶ್ ಉಳಯ ಕಲಿಕಾ ಚೇತರಿಕೆಯ ಮಾಹಿತಿ ನೀಡಿದರು. ಸಹ ಶಿಕ್ಷಕಿ ಸ್ಮಿತಾಶ್ರೀ ಹಾಗೂ ಸುನಿಲ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here