ಕುದ್ಮಾರು ಶಾಲಾ ಪ್ರಾರಂಭೋತ್ಸವ

0

ಕಾಣಿಯೂರು: ದ.ಕ ಜಿ. ಪಂ. ಉ. ಹಿ. ಪ್ರಾ. ಶಾಲೆ ಕುದ್ಮಾರು ಇಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ನಡೆಯಿತು. ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಬಂದು, ಆರತಿ ಬೆಳಗಿ, ಕಲಿಕಾ ಸಾಮಗ್ರಿಗಳನ್ನು ನೀಡುವುದರ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು. ಜನವಸತಿ ಪ್ರದೇಶದಲ್ಲಿ ದಾಖಲಾತಿ ಆಂದೋಲನವನ್ನು ಈ ಸಮಯದಲ್ಲಿ ಮಾಡಲಾಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೋಹಿತಾಕ್ಷ ಕೆಡೆಂಜಿಕಟ್ಟ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಗಂಗಾಧರ ಗೌಡ, ವಿದ್ಯಾಭಿಮಾನಿ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಕುಮಾರ್ ಕೆರೆನಾರು ಮತ್ತು ತಾರಾ ಅನ್ಯಾಡಿ, ಕುದ್ಮಾರು ಸ್ಕಂದಶ್ರೀ ಯುವಕ ಮಂಡಲದ ಅಧ್ಯಕ್ಷರಾದ ದೇವರಾಜ್ ನೂಜಿ ಹಾಗೂ ಎಸ್.ಡಿ. ಎಂ.ಸಿ ಸದಸ್ಯರುಗಳು ಉಪಸ್ಥಿತರಿದ್ದರು. ಎಸ್. ಡಿ.ಎಂ. ಸಿ ಅಧ್ಯಕ್ಷ ಗಂಗಾಧರ್ ಅವರು ನೂತನ ಮುಖ್ಯಗುರುಗಳಾಗಿ ನೇಮಕಗೊಂಡ ಕುಶಾಲಪ್ಪ ಬಿ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿದ್ಯಾಪ್ರವೇಶ, ಕಲಿಕಾ ಚೇತರಿಕೆ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಪೋಷಕರಿಗೆ ನೀಡಲಾಯಿತು. ಶಾಲಾ ಮುಖ್ಯಗುರುಗಳಾದ ಕುಶಾಲಪ್ಪ ಬಿ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ ಪಿ. ಎಂ.ವಂದಿಸಿದರು. ಪ್ರೌಢಶಾಲಾ ಶಿಕ್ಷಕಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು. ಜಿಪಿಟಿ ಸಂತೋಷ್ ಹಾಗೂ ಶಿಕ್ಷಕಿ ವೀಣಾ ವಿದ್ಯಾಪ್ರವೇಶ ಹಾಗೂ ಕಲಿಕಾ ಚೇತರಿಕೆಯ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ನೀಡಿದರು. ಶಿಕ್ಷಕರಾದ ವೀರಾ ಡಿಸೋಜಾ, ಸುಜಾತ, ಪ್ರಿಯಾಂಕ ಸಹಕರಿಸಿದರು.

LEAVE A REPLY

Please enter your comment!
Please enter your name here