ಮೇ. 20: ಬಲ್ನಾಡು ಗ್ರಾ.ಪಂ.ನ ಒಂದು ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ

0

  • ಬೆಳಿಯೂರುಕಟ್ಟೆ ಶಾಲೆಯಲ್ಲಿ ಮತಗಟ್ಟೆ 1603ಮತದಾರರು

ಪುತ್ತೂರು: ಬಲ್ನಾಡು ಗ್ರಾಮ ಪಂಚಾಯತ್‌ನ ವಾರ್ಡ್-1ರ ಸದಸ್ಯೆ ಯಮುನಾರವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆಯು ಮೇ 20ರಂದು ನಡೆಯಲಿದೆ.

 


ಹಿಂದುಳಿದ ವರ್ಗ `ಎ’ ಮಹಿಳಾ ಮೀಸಲು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಉಮಾವತಿ ಎಸ್. ಅಟ್ಲಾರು ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗ್ರಾ.ಪಂನ ಮಾಜಿ ಅಧ್ಯಕ್ಷೆ ವಿನಯ ಬೆಳಿಯೂರುಕಟ್ಟೆಯವರು ಕಣದಲ್ಲಿದ್ದು ನೇರ ಸ್ಪರ್ಧೆ ನಡೆಯಲಿದೆ.

ಬೆಳಿಯೂರುಕಟ್ಟೆ ಶಾಲೆ ಮತಗಟ್ಟೆ, 1603 ಮತದಾರರು: ಚುನಾವಣೆಗೆ ಬೆಳಿಯೂರುಕಟ್ಟೆ ಅನುದಾನಿತ ಹಿ.ಪ್ರಾ ಶಾಲೆಯ ಪೂರ್ವ ಭಾಗದ ಕೊಠಡಿ ಸಂಖ್ಯೆ-1 ಹಾಗೂ ಕೊಠಡಿ ಸಂಖ್ಯೆ-2 ಎಂಬ ಎರಡು ಪ್ರತ್ಯೇಕ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಕೊಠಡಿ ಸಂಖ್ಯೆ-1ರಲ್ಲಿ 373 ಪುರುಷರು, 390 ಮಹಿಳೆಯರು, ಕೊಠಡಿ ಸಂಖ್ಯೆ-2ರಲ್ಲಿ 400 ಪುರುಷರು ಹಾಗೂ 440 ಮಹಿಳೆಯರು ಸೇರಿದಂತೆ ಒಟ್ಟು 1603 ಮತದಾರರು ಮತ ಚಲಾಯಿಸಲಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ಪ್ರಕ್ರಿಯೆ ನಡೆಯಲಿದೆ. ಮೇ.22ರಂದು ತಾಲೂಕು ಆಡಳಿತ ಸೌಧದಲ್ಲಿ ಮತ ಎಣಿಕೆ ಕಾರ್ಯಗಳು ನಡೆದು ಫಲಿತಾಂಶ ಘೋಷಣೆಯಾಗಲಿದೆ. ಒಟ್ಟು 11 ಸ್ಥಾನಗಳನ್ನು ಒಳಗೊಂಡಿರುವ ಬಲ್ನಾಡು ಗ್ರಾ.ಪಂನಲ್ಲಿ ಕಳೆದ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 2 ಸ್ಥಾನಗಲ್ಲಿ ಮಾತ್ರ ಕಾಂಗ್ರೆಸ್ ಬೆಂಬಲಿತ ಸದಸ್ಯರು ಚುನಾಯಿತರಾಗಿದ್ದರು. 11 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಪಡೆಯುವ ಮೂಲಕ ಪ್ರಥಮ ಬಾರಿಗೆ ಬಲ್ನಾಡು ಗ್ರಾ.ಪಂನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರಕ್ಕೇರಿದ್ದರು. ಈ ಪೈಕಿ ವಾರ್ಡ್-1ರ ಬಿಜೆಪಿ ಬೆಂಬಲಿತ ಸದಸ್ಯೆ ಯಮುನಾರವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು ಈ ಬಾರಿ ವಿಜಯಮಾಲೆ ಯಾರಿಗೆ ಒಲಿಯಲಿದೆ ಎಂಬುದು ಮೇ 22ರಂದು ತಿಳಿಯಲಿದೆ.

ಸಂತೆ, ಜಾತ್ರೆ, ನಿಷೇಧ: ಮಂಗಳೂರು ತಾಲೂಕಿನ ಮುಚ್ಚೂರು, ಬೆಳ್ತಂಗಡಿ ತಾಲೂಕಿನ ಕಣಿಯೂರು ಹಾಗೂ ಪುತ್ತೂರು ತಾಲೂಕಿನ ಬಲ್ನಾಡು ಸೇರಿ ದ.ಕ ಜಿಲ್ಲೆಯಲ್ಲಿ ಮೂರು ಗ್ರಾ.ಪಂಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರು ಮತ ಚಲಾಯಿಸಲು ಅನುಕೂಲವಾಗುವಂತೆ ಸಂತೆ ಮತ್ತು ಎಲ್ಲಾ ತರದ ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ಇಂದು ಮಸ್ಟರಿಂಗ್: ಉಪ ಚುನಾವಣೆಗೆ ಸಂಬಂಧಿಸಿದಂತೆ ಮಸ್ಟರಿಂಗ್ ಕಾರ್ಯಗಳು ಮೇ.19ರಂದು ತಾಲೂಕು ಆಡಳಿತ ಸೌಧದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here