ಎಸ್‌ಎಸ್‌ಎಲ್‌ಸಿ: ರಾಮಕುಂಜ ಕ.ಮಾ.ಪ್ರೌಢಶಾಲೆಗೆ ಶೇ.92 ಫಲಿತಾಂಶ

0

ರಾಮಕುಂಜ: 2021-22ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ 92 ಶೇ.ತೇರ್ಗಡೆ ಫಲಿತಾಂಶ ಲಭಿಸಿದೆ.

ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 168 ವಿದ್ಯಾರ್ಥಿಗಳ ಪೈಕಿ 153 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಪೈಕಿ 27 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ(ಡಿಸ್ಟಿಂಕ್ಷನ್) ತೇರ್ಗಡೆಯಾಗಿದ್ದಾರೆ. 86 ವಿದ್ಯಾರ್ಥಿಗಳು ಪ್ರಥಮ, 30 ವಿದ್ಯಾರ್ಥಿಗಳು ದ್ವಿತೀಯ ಹಾಗೂ 10 ವಿದ್ಯಾರ್ಥಿಗಳು
ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಜೀವನ್ ಎಸ್., 624 ಅಂಕಗಳನ್ನು ಪಡೆದು ರಾಜ್ಯದಲ್ಲಿ 2ನೇ ಸ್ಥಾನವನ್ನು ಪಡೆದಿದ್ದಾರೆ. ತೃಪ್ತಿ-608, ರಮ್ಯ-608, ಪ್ರತೀಕ್ಷಾ ಎಸ್-601, ಹರ್ಷಿತ್ ಡಿ-601, ಎನ್ ಶ್ರೀರಕ್ಷಾ-595, ಚಸ್ವಿತ ಡಿ- 592, ಸಮೀದಾ-591, ವರ್ಷಿತಾ-589, ನಿತೇಶ್-589, ಭಗತ್ ಪಿ.,-578,ಎ.ಲಿಖಿತ್‌ಗೌಡ-577, ಶ್ರವಣ್-575, ಶರಣ್ಯ ಜಿ-572, ವಂಶಿ-568, ಅಂಕಿತಾ ಎಂ.ಎಚ್.-558, ನಿಖಿಲ್-556, ಮಾಲಿನಿ ಎಂ.,-553, ಪ್ರತೀಕ್ಷಾ -550, ಶ್ರೇಷ್ಠ ಬಿ-550, ಯಶಸ್ವಿನಿ-550, ಆಯಿಷತ್ ಫರ್ವಿನಾ-545, ಸುರಕ್ಷಾ -542, ಹರ್ಷ-539, ಮೋಕ್ಷಿತ್‌ಕುಮಾರ್ ಎನ್.ಕೆ.-537, ವರ್ಷ-536, ದೀಪ್ತಿ ಡಿ.ಎಸ್.-533 ಅಂಕ ಪಡೆದುಕೊಂಡಿದ್ದಾರೆ. ಪರೀಕ್ಷಾ ಮಂಡಳಿಯಿಂದ ಫಲಿತಾಂಶದ ಆಧಾರದಲ್ಲಿ ಶಾಲೆಗೆ ಎ ಗ್ರೇಡ್ ಮಾನ್ಯತೆ ದೊರೆತಿದೆ.

LEAVE A REPLY

Please enter your comment!
Please enter your name here