ಪುಷ್ಕರಿಣಿ ಮದಗ ಪಲ್ಲದ ಕೆರೆ ಹಸ್ತಾಂತರ, ನಾಮಫಲಕ ಅನಾವರಣ ಕಾರ್ಯಕ್ರಮ

0

ಅರಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ರಿ, ದ.ಕ. ಜಿಲ್ಲೆ-೨ ಪುತ್ತೂರು. ಪುಷ್ಕರಿಣಿ ಮದಕ ಪಲ್ಲದ ಕೆರೆ ಅಭಿವೃದ್ಧಿ ಸಮಿತಿ ಮತ್ತು ಗ್ರಾಮಪಂಚಾಯತ್ ಅರಿಯಡ್ಕ ಇದರ ಸಹಯೋಗದೊಂದಿಗೆ 404ನೇ ನಮ್ಮೂರ ಕೆರೆ ಕಾರ್ಯಕ್ರಮದಡಿಯಲ್ಲಿ ಹೂಳೆತ್ತಿ ಪುನಶ್ಚೇತನ ಗೊಳಿಸಲಾದ ಪುಷ್ಕರಿಣಿ ಮದಗ ಪಲ್ಲದ ಕೆರೆ , ಹಸ್ತಾಂತರ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮ ಮೇ ೨೮ರಂದು ಕೆರೆಯ ಬಳಿ ನಡೆಯಿತು. ಪ್ರಾರಂಭದಲ್ಲಿ ಪುರೋಹಿತ ಶಿವಪ್ರಸಾದ ಕಡಮಣ್ಣಾಯರವರು ಗಂಗಾ ಪೂಜೆ ನೆರವೇರಿಸಿದರು. ಶಾಸಕ ಸಂಜೀವ ಮಠಂದೂರು ರವರು ಕೆರೆಗೆ ಬಾಗಿನ ಅರ್ಪಿಸಿ, ಗಿಡ ನಾಟಿ ಮಾಡಿ, ನಾಮಫಲಕ ಅನಾವರಣ ನೆರವೇರಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಇಂದು ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ, ಇನ್ನು ಮುಂದಕ್ಕೆ ಕೆರೆಯನ್ನು ಅಭಿವೃದ್ಧಿಪಡಿಸಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕಾಡು ಹಾಗೂ ನೀರಿನ ರಕ್ಷಣೆ ನಮ್ಮ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಕೆರೆ ಅಭಿವೃದ್ಧಿಯಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಮಣ್ಯಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾಧ್ಯಕ್ಷರಾದ ಪ್ರವೀಣ್ ಕುಮಾರ್, ಪ್ರಗತಿಪರ ಕೃಷಿಕ ಗುಂಡ್ಯಡ್ಕ ವಾಸು ಪೂಜಾರಿ, ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಹಾರ್ಪಳ, ಪಂಚಾಯತ್ ಪಿ.ಡಿ.ಓ ಪದ್ಮಕುಮಾರಿ, ಕಾರ್ಯದರ್ಶಿ ಶಿವರಾಮ್ ಮೂಲ್ಯಉಪಸ್ಥಿತರಿದ್ದರು. ಕೆರೆ ಸಮಿತಿಯ ಅಧ್ಯಕ್ಷ ಲೋಕೇಶ್ ರೈ ಅಮೈ ಸಭಾಧ್ಯಕ್ಷತೆ ವಹಿಸಿದ್ದರು.

 

ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ತಾಲೂಕು ಪಂಚಾಯತಿನ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಮಣಿಯಾಣಿ ಕುತ್ಯಾಡಿ, ಭೇಟಿ ನೀಡಿದರು. ಅರಿಯಡ್ಕ ವಲಯ ಅಧ್ಯಕ್ಷೆ ನವೀನ ಬಿ.ಡಿ, ಅರಿಯಡ್ಕ ಒಕ್ಕೂಟಗಳ ಅಧ್ಯಕ್ಷರುಗಳಾದ ಕುಂಞಿ ರಾಮ ಮಣಿಯಾಣಿ ಕುತ್ಯಾಡಿ, ವಿಶ್ವನಾಥ ರೈ ಕುತ್ಯಾಡಿ ಮತ್ತು ಗೋವಿಂದ ಮಣಿಯಾಣಿ ಮಡ್ಯಂಗಳ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು, ಪಂಚಾಯತ್ ಸದಸ್ಯರುಗಳು, ಕೆರೆ ಸಮಿತಿಯ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಸಹಕರಿಸಿದರು. ಯೋಜನಾಧಿಕಾರಿ ಆನಂದ .ಕೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಅರಿಯಡ್ಕ ವಲಯ ಮೇಲ್ವಿಚಾರಕ ಮೋಹನ್ ವಂದಿಸಿ, ಕೃಷಿ ಅಧಿಕಾರಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here