ಅರಿಯಡ್ಕ: ವಿವಿಧ ಕಡೆಗಳಲ್ಲಿ ರಸ್ತೆ ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿ ಪೂಜೆ

0

 

ಪುತ್ತೂರು: ಅರಿಯಡ್ಕ ಗ್ರಾಮದ ವಿವಿಧ ಕಡೆಗಳಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರು ಮೇ.೨೮ರಂದು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯಯೋಜನೆಯನ್ನು ನಿರೂಪಿಸಿದೆ.

 

ರಸ್ತೆ ಕಾಮಗಾರಿ ಆಗುವ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿ ಶುಭ ಹಾರೈಸಿದರು. ಕೌಡಿಚ್ಚಾರು-ನೇರೋಳ್ತಡ್ಕ-ಅರಿಯಡ್ಕ ರಸ್ತೆ ೧ ಕೋಟಿ, ಶೇಖಮಲೆ-ಪಯಂದೂರು-ಪಾಪೆಜಾಲು ರಸ್ತೆ ೨೦ ಲಕ್ಷ, ಪಾಪೆಮಜಲು-ಪೈಲಕಲ್ಲು ರಸ್ತೆ ೧೦ಲಕ್ಷ, ಶೇಖಮಲೆ-ಎರ್ಕ ರಸ್ತೆ ೧೦ಲಕ್ಷ, ಪಾಪೆಮಜಲು-ಕುತ್ಯಾಡಿ ೧೦ ಲಕ್ಷ, ಪಾಪೆಮಜಲು- ಕುರಿಂಜ ರಸ್ತೆ ೧೦ ಲಕ್ಷ, ಕೌಡಿಚ್ಚಾರ -ದರ್ಬೆತ್ತಡ್ಕ ರಸ್ತೆ ೫೦ ಲಕ್ಷ ,ಶೇಖಮಲೆ-ಮಡ್ಯಂಗಳ ರಸ್ತೆ ೧೦ ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಸಂದರ್ಭದಲ್ಲಿ ಅರಿಯಡ್ಕ ಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ರೈ ಪಾಪೆಮಜಲು, ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಮಣ್ಯ, ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಪಿ.ಡಿ.ಓ ಪದ್ಮಾ ಕುಮಾರಿ, ಕಾರ್ಯದರ್ಶಿ ಶಿವರಾಮ ಮೂಲ್ಯ,ಪಂಚಾಯತ್ ಸದಸ್ಯರಾದ ಹರೀಶ್ ರೈ ಜಾರತ್ತಾರು, ರೇಣುಕಾ ಸತೀಶ್ ಕರ್ಕೆರಾ, ಭಾರತಿ ವಸಂತ್ ಕೌಡಿಚ್ಚಾರು, ವಿನುತ ಬಳ್ಳಿಕಾನ, ದಿವ್ಯಾನಾಥ ಶೆಟ್ಟಿ ಕಾವು, ಮೋನಪ್ಪ ಪೂಜಾರಿ ಕೆರೆಮಾರು, ಜಯಂತಿ ಪಟ್ಟು ಮೂಲೆ, ಸಾವಿತ್ರಿ ಕುರಿಂಜ, ಮೀನಾಕ್ಷಿ ಪಾಪೆಮಜಲು, ನಾರಾಯಣ ನಾಯ್ಕ ಚಾಕೋಟೆ, ಪುಷ್ಪಲತಾ ಮರತ್ತ ಮೂಲೆ, ಉಷಾ ರೇಖಾ ರೈ ಅಮೈ, ಅನಿತಾ ಆಚಾರಿ ಮೂಲೆ, ಲೋಕೇಶ್ ಚಾಕೋಟೆ ಮತ್ತು ಸದಾನಂದ ಮಣಿಯಾಣಿ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈ ಪ್ರಮೋದ್ ರೈ ಪನೆಕ್ಕಳ, ಗಣೇಶ್ ಶೇಖಮಲೆ, ನವೀನ್‌ ಭಂಡಾರಿ ಕುತ್ಯಾಡಿ, ಗಣೇಶ್ ರೈ ಪಾಲ್ಗುಣಿ, ನಾರಾಯಣ ಗೌಡ ಪಟ್ಲಕಾನ, ಹರಿಪ್ರಸಾದ್ ಮಾಯಿಲಕೊಚ್ಚಿ, ಅಬ್ದುಲ್ ರಹಿಮಾನ್ ಅರಿಯಡ್ಕ, ಜಾಬೀರ್ ಅರಿಯಡ್ಕ, ರಾಮ ಮಣಿಯಾಣಿ ಕೊಪ್ಪಳ, ಕಣ್ಣಪಾಟಾಳಿ, ರಫೀಕ್ ಡಿ, ಅನೀಫ್ ಪಯಂದೂರು, ಎ.ಆರ್ ರಹೀಮಾನ್, ರಘುನಾಥ ಶೇರಿಗಾರ್, ಶರತ್ ಮಡ್ಯಂಗಳ, ಗಿರೀಶ್ ಮಡ್ಯಂಗಳ, ವೇಣುಗೋಪಾಲ ಮಡ್ಯಂಗಳ, ಮತ್ತಿತರರು ಉಪಸ್ಥಿತರಿದ್ದರು. ತಿಲಕ್ ರೈ ಕುತ್ಯಾಡಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here