ನೆಕ್ಕಿಲಾಡಿ ಶಾಲಾ ಮುಖ್ಯ ಶಿಕ್ಷಕಿ ರುಕ್ಮಿಣಿ ನಿವೃತ್ತಿ

0

ಪುತ್ತೂರು: 34 ನೆಕ್ಕಿಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರುಕ್ಮಿಣಿ ಡಿ.ರವರು ಮೇ 31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. 34 ನೆಕ್ಕಿಲಾಡಿ ಬೇರಿಕೆ ನಿವಾಸಿಯಾಗಿರುವ ರುಕ್ಮಿಣಿರವರು 1993ರ ನವೆಂಬರ್ 9ರಂದು ಶಿಕ್ಷಕ ವೃತ್ತಿಗೆ ಸೇರಿದ್ದು ಬಳಿಕ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕದಲ್ಲಿ 1998ರ ಡಿಸೆಂಬರ್ ವರೆಗೆ ಕರ್ತವ್ಯ ನಿರ್ವಹಿಸಿದ್ದರು. 1999ರ ಜನವರಿಯಿಂದ ಕೋಡಿಂಬಾಡಿ ಹಿ.ಪ್ರಾ. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಇವರು 2016ರ ಅಕ್ಟೋಬರ್ ನಿಂದ 2022 ಏಪ್ರಿಲ್ 30ರವರೆಗೆ ಉಪ್ಪಿನಂಗಡಿ ಮಠ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದರು.‌ ಇತ್ತೀಚೆಗೆ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಪಡೆದ ಇವರು ಮೇ 7 ರಿಂದ ನೆಕ್ಕಿಲಾಡಿ ಸ ಹಿ ಪ್ರಾ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ರುಕ್ಮಿಣಿರವರ ಹಿರಿಯ ಪುತ್ರಿ ಚೈತ್ರಾ ಹರೀಶ್ ಬೆಂಗಳೂರಿನಲ್ಲಿದ್ದು ಕಿರಿಯ ಪುತ್ರಿ ಮಿತ್ರ ಚರಣ್ ವಕೀಲೆಯಾಗಿದ್ದಾರೆ.

LEAVE A REPLY

Please enter your comment!
Please enter your name here