ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ‌ ವಿತರಣೆ

0

  • ಗುರುಭಕ್ತಿಯಿಂದ ವಿದ್ಯೆ ಕಲಿತು ದೇಶದ ಕೀರ್ತಿಗೆ ಪಾತ್ರರಾಗಿ: ಶ್ರೀ ಶ್ರೀಕೃಷ್ಣ ಗುರೂಜಿ

 

 

ವಿಟ್ಲ: ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀಕಾಳಿಕಾಂಬ ಆಂಜನೇಯದೇವಸ್ಥಾನದ ವತಿಯಿಂದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ನೇತೃತ್ವದಲ್ಲಿ ಬಡ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.


ಬಳಿಕ ಕ್ಷೇತ್ರದ‌ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿರವರು ಆಶೀರ್ವಚನ ನೀಡಿದ‌ ದೇವಸ್ಥಾನದಿಂದ ಕೊಡುವ ಪುಸ್ತಕ ದೇವರ ಪ್ರಸಾದ ಪುಸ್ತಕವನ್ನು ಸ್ವಚ್ಚತೆಯಿಂದ ಭಕ್ತಿಯಿಂದ ಯಾರು ನೋಡುತ್ತಾರೆ ಅವರಿಗೆ ವಿದ್ಯಾ ಸರಸ್ವತಿ ಅನುಗ್ರಹ ಮಾಡುತ್ತಾಳೆ. ಎಲ್ಲರೂ ಗುರು ಭಕ್ತಿಯಿಂದ ವಿದ್ಯೆಯನ್ನು ಕಲಿತು ದೇಶದ ಕೀರ್ತಿಗೆ ಪಾತ್ರರಾಗಿ ಎಂದರು. ಕಾಳಿಕ ಕಲಾ ಸಂಘದ ಅಧ್ಯಕ್ಷರಾದ ಸಂಜೀವ ಕುಲಾಲ್ ಪಾಲನೀರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಹಿಳಾ ಸಂಘದ ಅಧ್ಯಕ್ಷೆ ಮೋಹಿನಿ ತಾರಿದಾಳ, ಸಚಿನ್ ಮಂಗಳೂರು ಸುಶ್ಮಿತಾ ಕುಕ್ಕಾಜೆ ಮೊದಲಾದವರು ಉಪಸ್ಥಿತರಿದ್ದರು ಗಿರೀಶ್ ಕುಕ್ಕಾಜೆ ಸ್ವಾಗತಿಸಿ, ಸತ್ಯಪ್ರಾಸದ್ ವಂದಿಸಿದರು.

LEAVE A REPLY

Please enter your comment!
Please enter your name here