ಮೇ.31: ಕಾಮಧೇನು ವಿವಿದೋದ್ದೇಶ ಚಾರಿಟೇಬಲ್ ಟ್ರಸ್ಟ್ನಿಂದ ಪತ್ರಿಕಾ ವಿತರಕರಿಗೆ, ಆಶಾ ಕಾರ್ಯಕರ್ತರಿಗೆ ರೈನ್ ಕೋಟ್ ವಿತರಣೆ

0

ಪುತ್ತೂರು : ಸುಳ್ಯ ಕಾಮಧೇನು ವಿವಿದೋದ್ದೇಶ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪತ್ರಿಕಾ ವಿತರಕರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ರೈನ್ ಕೋಟ್ ವಿತರಣಾ ಕಾರ್ಯಕ್ರಮ ಮೇ.31ರಂದು ಬೆಳಿಗ್ಗೆ 10.30ರಿಂದ ಪುತ್ತೂರು ತಾಲೂಕು ಅರೋಗ್ಯಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ನಡೆಯಲಿದೆ. ಟ್ರಸ್ಟ್ ಗೌರವಾಧ್ಯಕ್ಷ ಮಾಧವ ಗೌಡ ಹಾಗೂ ಅಧ್ಯಕ್ಷೆ ದಿವ್ಯಾಪ್ರಭಾ ಗೌಡ ಚಿಲ್ತಡ್ಕ, ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ಕಹಳೆ ನ್ಯೂಸ್‌ನ ಶ್ಯಾಮ್‌ಸುದರ್ಶನ್, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಪತ್ರಕರ್ತೆ ಅಂಜುಮನ್ ಉಪಸ್ಥಿತರಿರಲಿದ್ಧಾರೆ. ಪತ್ರಿಕಾ ವಿತರಕರಿಗೆ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ 150 ಆಶಾ ಕಾರ್ಯಕರ್ತೆಯರಿಗೆ ರೈನ್ ಕೋಟ್ ವಿತರಿಸಲಾಗುವುದು ಎಂದು ದಿವ್ಯಪ್ರಭಾ ಚಿಲ್ತಡ್ಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here