ಬೆಳಂದೂರು: ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕಾರ್ಯಕ್ರಮ

0

ಕಾಣಿಯೂರು: ಸ.ಪ್ರ.ದ ಕಾಲೇಜು, ಬೆಳಂದೂರು ಇಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಉದ್ಯೋಗ ಭರವಸಾ ಕೋಶದ ವತಿಯಿಂದ “MATHS SHORTCUT TIPS & TRICKS FOR COMPETITIVE EXAMS”  ಎಂಬ ವಿಷಯದ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ| ಶಂಕರ ಭಟ್. ಪಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪುತ್ತೂರು, ಸುಳ್ಯ ಐಆರ್‌ಸಿಎಂಡಿ ಎಜ್ಯುಕೇಶನ್ ಸೆಂಟರ್‌ನ ತರಬೇತುದಾರರಾದ ಪ್ರಫುಲ್ಲ ಗಣೇಶ್ ಇವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉದ್ಯೋಗ ಭರವಸಾ ಕೋಶದ ಸಂಚಾಲಕರು ಹಾಗೂ ಗ್ರಂಥಪಾಲಕರಾದ ಡಾ| ರವಿಚಂದ್ರ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಐಕ್ಯುಎಸಿ ಸಂಚಾಲಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ವೆಂಕಟೇಶ ಪ್ರಸನ್ನ ಪಿ. ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುದೀಪ್ ತೃತೀಯ ಬಿಕಾಂ ಸ್ವಾಗತಿಸಿ, ನವ್ಯಶ್ರೀ ತೃತೀಯ ಬಿಕಾಂ ವಂದಿಸಿ, ಪ್ರಜ್ಞಾ ಡಿ ತೃತೀಯ ಬಿಕಾಂ ಇವರು ನಿರೂಪಿಸಿದರು. ಅನುಷಾ ಕೆ ತೃತೀಯ ಬಿಕಾಂ ವಿದ್ಯಾರ್ಥಿಗಳನ್ನು ಪರಿಚಯಿಸಿ, ಉಜಿತ್‌ಶ್ಯಾಮ್ ದ್ವಿತೀಯ ಬಿಎ ಮತ್ತು ಸುದೀಪ್ ತೃತೀಯ ಬಿಕಾಂ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here