ಬಿಳಿನೆಲೆ ಗ್ರಾ.ಪಂ. ಸಾಮಾನ್ಯ ಸಭೆ

0

ಪುತ್ತೂರು: ಬಿಳಿನೆಲೆ ಗ್ರಾಮ ಪಂಚಾಯತಿನ ಮೇ ತಿಂಗಳ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷ ಶಿವಶಂಕರ್‌ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಘನತ್ಯಾಜ್ಯ ನಿರ್ವಹಣಾ ಜಮೀನು ಮತ್ತು ಸಾರ್ವಜನಿಕ ಸ್ಮಶಾನ ಜಮೀನಿನಲ್ಲಿ ಜೂ. 2ರಂದು ಶ್ರಮದಾನ ಮಾಡುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.  ಸಾರ್ವಜನಿಕ ಕುಡಿಯುವ ನೀರಿನ ಪಂಪು ಚಾಲಕರ ಮತ್ತು ಫಲಾನುಭವಿಗಳ ಸಭೆ ಕರೆಯುವುದು, ರಸ್ತೆ ದುರಸ್ತಿಗೆ ಅನುದಾನ ಕಾದಿರಿಸುವುದು, ಸರಕಾರಿ ಜಮೀನು ಲಭ್ಯತೆ ಬಗ್ಗೆ ಗ್ರಾಮ ಕರಣಿಕರ ಬಗ್ಗೆ ವಿವರ ಪಡೆಯುವುದು, ಬಿಳಿನೆಲೆ ಅಂಗನವಾಡಿ ಕೇಂದ್ರಕ್ಕೆ ಆವರಣಗೋಡೆ ರಚನೆ ಮಾಡುವುದು ಅಲ್ಲದೆ, ಗ್ರಾ.ಪಂ.ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವರು ತಮ್ಮ ಅಂಗಡಿಯನ್ನು ಅನುಮತಿ ಪಡೆಯದೆ ವಿಸ್ತರಿಸಿ ಕಟ್ಟಿರುವ ಬಗ್ಗೆ ಕ್ರಮ ಕೈಗೊಳ್ಳುವುದು ಎಂದು ನಿರ್ಧರಿಸಲಾಯಿತು.‌
ಸಭೆಯಲ್ಲಿ ಉಪಾಧ್ಯಕ್ಷೆ ಶಾರದಾ ದಿನೇಶ್, ಸದಸ್ಯರಾದ ಸುಧೀರ್‌ ಕುಮಾರ್‌ ಶೆಟ್ಟಿ, ಶಾರದ ಬಿಳಿನೆಲೆ, ಸತೀಶ್‌ ಕಳಿಗೆ ಮುರಳೀಧರ, ಭವ್ಯ ಶ್ರೀ ಚಂದ್ರಾವತಿ, ಬೇಬಿ, ಉಪಸ್ಥಿತರಿದ್ದರು. ಪಿಡಿಓ ಸುಜಾತ ವರದಿ ಮಂಡಿಸಿದರು.‌

LEAVE A REPLY

Please enter your comment!
Please enter your name here