ಪೆರ್ಲಂಪಾಡಿ ಶಾಲಾ ಮಂತ್ರಿಮಂಡಲ ರಚನೆ

0

ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2022-23 ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಮೇ.17 ರಂದು ರಚಿಸಲಾಯಿತು. ಮುಖ್ಯಮಂತ್ರಿಯಾಗಿ 7 ನೇ ತರಗತಿಯ ಪುನೀತ್ ಪಿ.ವಿ, ಉಪಮುಖ್ಯಮಂತ್ರಿಯಾಗಿ 6 ನೇ ತರಗತಿಯ ತನುಷ್ ಕೆ ಹಾಗೂ ಗೃಹಮಂತ್ರಿಯಾಗಿ ಕೀರ್ತನ್, ಪುನೀತ್, ರಾಬಿಯತ್ ಬೀಬಿ, ಯಶ್ಮಿತಾ, ನೀರಾವರಿ ಮಂತ್ರಿಯಾಗಿ ತನುಷ್ ಮತ್ತು ಚೇತನ್, ಆಹಾರ ಮಂತ್ರಿಯಾಗಿ ಯುಪ್ತಿ ಪಿ.ಜೆ, ರಕ್ಷಾ ಎಸ್, ವಿರೋಧ ಪಕ್ಷದ ನಾಯಕರಾಗಿ ವಿದ್ಯಾಸಾಗರ್ ಎ, ಸ್ವಚ್ಛತಾ ಮಂತ್ರಿಯಾಗಿ ಭೂಮಿಕಾ ಕೆ ಮತ್ತು ಹಿಮಾನಿ, ಕ್ರೀಡಾಮಂತ್ರಿಯಾಗಿ ಶ್ರವಣ್ ರೈ ಮತ್ತು ಭೂಮಿಕಾ ಎಸ್, ಶಿಕ್ಷಣ ಮಂತ್ರಿಯಾಗಿ ಅಖಿಲ್ ಜೆ.ಯು, ಸಾಂಸ್ಕೃತಿಕ ಮಂತ್ರಿಯಾಗಿ ದೀವಿತಾ ಮತ್ತು ಪ್ರೇಕ್ಷಾ ಆಯ್ಕೆಯಾದರು.

 


ಶಾಲಾ ಮುಖ್ಯಗುರು ನೀಲಾವತಿ ಕೆ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಸಹಶಿಕ್ಷಕಿಯರಾದ ರಾಜೀವಿ ಬಿ.ಕೆ, ಸುಶೀಲಾ ಹೆಗಡೆ, ಜ್ಯೋತಿ ಡಿ, ದೀಪ್ತಿ ಎಂ.ರೈ, ಗಗನಶ್ರೀ ಕೆ.ಎಸ್, ಶ್ರದ್ಧಾ ಎಂ, ಕೆ.ಮಾಣಿಕ್ಯ ಸಹಕರಿಸಿದ್ದರು.
ಚಿತ್ರ: 

 

LEAVE A REPLY

Please enter your comment!
Please enter your name here