ನಿವೃತ್ತಿ ಹೊಂದಿದ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಇಬ್ಬರು ಸಿಬ್ಬಂದಿಗಳಿಗೆ ವಿದಾಯ ಸಮಾರಂಭ

0

  • ಸಂಘದ ಅಭಿವೃದ್ಧಿಗೆ ಮೀರಾ ಎನ್, ಮೇದಪ್ಪ ಗೌಡ ದೊಡ್ಡ ಕೊಡುಗೆ ನೀಡಿದ್ದಾರೆ-ಬಾಬು ಶೆಟ್ಟಿ

ಪುತ್ತೂರು: ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಂಸ್ಥೆಯ ಸಿಬ್ಬಂದಿಗಳಾದ ಮೀರಾ ಎನ್ ಹಾಗೂ ಮೇದಪ್ಪ ಗೌಡರಿಗೆ ವಿದಾಯ ಸಮಾರಂಭ ಸಂಘದ ಸಭಾಂಗಣದಲ್ಲಿ ಮೇ.31ರಂದು ನಡೆಯಿತು.

ಸೇವಾ ನಿವೃತ್ತಿ ಹೊಂದಿದ ಈರ್ವರನನ್ನೂ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ವೀರಮಂಗಲ ಮಾತನಾಡಿ ಸಮಸ್ಥೆಯಿಂದ ನಿವೃತ್ತಿ ಹೊಂದಿರುವ ಮೀರಾ ಹಾಗೂ ಮೇದಪ್ಪ ಗೌಡರು ನಮ್ಮ ಸಂಘದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. 1986ನೇ ಇಸವಿಯಲ್ಲಿ ಕನಿಷ್ಠ ಸಂಬಳಕ್ಕೆ ದುಡಿಯುತ್ತಿದ್ದ ಇವರು ಅಂದಿನಿಂದ ಇಂದಿನವರೆಗೆ ನಿಯ್ಯತ್ತಿನಿಂದ ಕೆಲಸ ನಿರ್ವಹಿಸಿದ್ದಾರೆ. ಸಂಘದ ಸಿಬ್ಬಂದಿಗಳ ಸಹಕಾರವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಹೆಚ್, ಆಡಳಿತ ಮಂಡಳಿ ಉಪಾಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ, ಹಿರಿಯ ಸದಸ್ಯರಾದ ರತ್ನಾಕರ ಪಿ.ಎಸ್ ಪಂಜಿಗ, ಚಂದ್ರಶೇಖರ ಕೆ, ಎಸ್‌ಸಿಡಿಸಿಸಿ ಬ್ಯಾಂಕ್‌ನ ದರ್ಬೆ ಶಾಖೆಯ ವ್ಯವಸ್ಥಾಪಕ ಕೇಶವ್, ಎಸ್‌ಸಿಡಿಸಿಸಿ 2ನೇ ವಲಯ ಇದರ ಮೇಲ್ವಿಚಾರಕ ವಸಂತ್ ಎಸ್ ವೇದಿಕೆಯಲ್ಲಿದ್ದು ಶುಭ ಹಾರೈಸಿದರು. ಆಡಳಿತ ಮಂಡಳಿಯ ನಿರ್ದೇಶಕರಾದ ಪರಮೇಶ್ವರ ಭಂಡಾರಿ, ಕುಶಾಲಪ್ಪ ಗೌಡ, ವಿಜೇಶ್ ಕುಮಾರ್, ಹಸನ್ ಎ, ನಾರಾಯಣ ಪೂಜಾರಿ ಬೇರಿಕೆ, ಶಿವರಾಮ, ವಿಶ್ವನಾಥ ನಾಯ್ಕ, ನಾಗಮ್ಮ ಬಾಲಕೃಷ್ಣ ಗೌಡ, ಯಮುನಾ, ಲತಾ ಮೋಹನ ಗೌಡ ಪಾದೆ ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ ಈ ಹಿಂದೆ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಚಂದ್ರಕಲಾ ರೈ, ಸಂಘದ ಸದಸ್ಯರುಗಳಾದ ವೇದನಾಥ ಸುವರ್ಣ, ನಾರಾಯಣ ಗೌಡ ಎಸ್, ಸುರೇಶ್ ಪ್ರಭು ಶೆಟ್ಟಿಮಜಲು, ಚಂದ್ರಕಲಾ ಮುಕ್ವೆ, ಎಸ್‌ಸಿಡಿಸಿಸಿ ಬ್ಯಾಂಕ್ ದರ್ಬೆ ಶಾಖೆಯ ವ್ಯವಸ್ಥಾಪಕ ಕೇಶವ್ ಅನಿಸಿಕೆ ವ್ಯಕ್ತಪಡಿಸಿ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಶುಭ ಹಾರೈಸಿದರು. ಲತಾ ಮೋಹನ ಗೌಡ ಪಾದೆ ಪ್ರಾರ್ಥಿಸಿದರು. ಉಪಾಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ ವಂದಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಧುಕರ ಹೆಚ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here