ಪರಿಸರ ದಿನಾಚರಣೆ: ನೆಲ್ಯಾಡಿ, ಕೊಣಾಲು ಶಾಲಾ ವಠಾರದಲ್ಲಿ ಗಿಡ ನಾಟಿ

0

ನೆಲ್ಯಾಡಿ: ಪರಿಸರ ದಿನಾಚರಣೆ ಅಂಗವಾಗಿ ನೆಲ್ಯಾಡಿ ಹಾಗೂ ಕೊಣಾಲು ಶಾಲಾ ವಠಾರದಲ್ಲಿ ಪರಿಸರ ಪ್ರೇಮಿ ದುರ್ಗಾಸಿಂಗ್‌ರವರ ಮಾರ್ಗದರ್ಶನದಲ್ಲಿ ಜಪಾನ್ ವಿಜ್ಞಾನಿ ’ಮಿಯಾ ವಾಕಿ’ ಅವರ ಮಾದರಿ ಅನುಸರಿಸಿಕೊಂಡು ವಿವಿಧ ಜಾತಿಯ ಹಣ್ಣು ಹಂಪಲು ಹಾಗೂ ಅರಣ್ಯ ಗಿಡಗಳ ನಾಟಿ ಮಾಡಲಾಯಿತು.


ಕಾರ್ಯಕ್ರಮಕ್ಕೆ ಎಸ್‌ಕೆಎಸ್‌ಎಸ್‌ಎಫ್, ಜೆಸಿಐ ನೆಲ್ಯಾಡಿ, ಆಲಂಕಾರು ಲಯನ್ಸ್ ಕ್ಲಬ್ ಹಾಗೂ ನೆಲ್ಯಾಡಿ ವಲಯ ಬಂಟರ ಸಂಘದವರು ಸಹಕಾರ ನೀಡಿದರು. ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಜಯಂತಿ ಬಿ.ಎಂ., ಆಲಂಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ನಿತ್ಯಾನಂದ ರೈ ಮನವಳಿಕೆ, ಬಂಟರ ಸಂಘದ ಪದಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ಪುರ, ಸುಂದರ ಶೆಟ್ಟಿ ಪುರ, ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಕ್ಲಸ್ಟರ್ ಅಧ್ಯಕ್ಷ ಯೂಸುಫ್ ಬೈಲಂಗಡಿ, ಕಾರ್ಯದರ್ಶಿ ಅನ್ಸೀಫ್ ಎ., ಕೋಶಾಧಿಕಾರಿ ಹೈದರ್ ಮಲ್ಲಿಗೆ, ಎಸ್‌ಕೆಎಸ್‌ಎಸ್‌ಎಫ್ ಗೋಳಿತ್ತೊಟ್ಟು ಶಾಖೆ ಅಧ್ಯಕ್ಷ ಹಾರೀಸ್ ಪಿ.ಎಸ್., ಕೋಶಾಧಿಕಾರಿ ಜಲೀಲ್ ಹೆಚ್., ವಿಖಾಯ ಕನ್ವೀನರ್ ಹನೀಫ್ ಮರ್ಲಾಪು, ಅಬ್ದುಲ್ ಕುಂಞಿ ಕೊಂಕೋಡಿ, ಎಸ್‌ಕೆಎಸ್‌ಎಸ್‌ಎಫ್ ಕೊಕ್ಕಡ ಶಾಖೆ ಕಾರ್ಯದರ್ಶಿ ಸಿರಾಜ್ ಸೌತಡ್ಕ, ವಿಖಾಯ ಕನ್ವೀನರ್ ಯೂಸುಫ್ ಹಳ್ಳಿಂಗೇರಿ, ಎಸ್‌ಕೆಎಸ್‌ಎಸ್‌ಎಫ್ ನೆಲ್ಯಾಡಿ ಶಾಖೆ ಕೋಶಾಧಿಕಾರಿ ಶುಕೂರ್ ಕೆ.ಜಿ.ಎನ್. ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here