ಪ್ರಧಾನಿ ನರೇಂದ್ರ ಮೋದಿ ಸರಕಾರದ 8 ವರ್ಷ ಪೂರ್ಣದ ಸಂಭ್ರಮಾಚರಣೆ – ಸೇವೆ, ಸುಶಾಸನ, ಬಡವರಕಲ್ಯಾಣ ಯೋಜನೆಯಡಿ ಎಸ್ಸಿ ಸಮಾಜದ ಸಾಧಕರಿಗೆ ಗೌರವಾರ್ಪಣೆ

0

  • ಹೃದಯ ಶ್ರೀಮಂತಿಕೆ ನಿಮ್ಮಲ್ಲಿ ಕಾಣಲು ಸಾಧ್ಯ- ಸಂಜೀವ ಮಠಂದೂರು
  • ಚುನಾವಣೆ ಬಂದಾಗ ಆಮೀಷಗಳಿಗೆ ಒಳಗಾಗಬೇಡಿ – ಮೀನಾಕ್ಷಿ ಶಾಂತಿಗೋಡು
  • ಸಂವಿಧಾನವನ್ನು ಗಟ್ಟಿಗೊಳಿಸಿದ ಪಕ್ಷ ಬಿಜೆಪಿ – ವಿನಯನೇತ್ರ
  • ಮೋದಿ ಆಡಳಿತದ ಸಂಭ್ರಮಾಚರಣೆ ಪರಿಣಾಮಕಾರಿ ಅನುಷ್ಠಾನ – ಸಾಜ ರಾಧಾಕೃಷ್ಣ ಆಳ್ವ
  • ಸರಕಾರದ ಸೌಲಭ್ಯವನ್ನು ಪಡೆಯಿರಿ – ಶಿವಪ್ರಸಾದ್

 

ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಸರಕಾರ 8 ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆಯ ಅಂಗವಾಗಿ ಸೇವೆ ಸುಶಾಸನ ಬಡವರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಬಿಜೆಪಿ ಪುತ್ತೂರು ಮಂಡಲದ ವತಿಯಿಂದ ಪರಿಶಿಷ್ಟ ಜಾತಿ ಸಮಾಜದ ಸಾಧಕರನ್ನು ಗೌರವಿಸುವ ಮತ್ತು ಅಭಿನಂದಿಸುವ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಮಾಹಿತಿ ಕಾರ್ಯಕ್ರಮ ಜೂ.13 ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ದೈವನರ್ತಕರ ಸಂಚಾಲಕರು, ದೈವ ನರ್ತಕರು, ಚಾಕ್ರಿಯವರು,ಕಾರ್ಮಿಕರು, ಮಾಜಿ ಸೈನಿಕರು, ನಾಟಿ ವೈದ್ಯರು, ಸಿಡಿಮದ್ದು ಪ್ರದರ್ಶನ ಸೇವಕರನ್ನು ಗುರುತಿಸಿ ಗೌರವಿಸಲಾಯಿತು.

 

ಹೃದಯ ಶ್ರೀಮಂತಿಕೆ ನಿಮ್ಮಲ್ಲಿ ಕಾಣಲು ಸಾಧ್ಯ:
ಶಾಸಕ ಸಂಜೀವ ಮಠಂದೂರು ಅವರು ಅಭಿನಂದನಾ ಮಾತುಗಳನ್ನಾಡಿದರು. ಹಿಂದು ಸಂಸ್ಕೃತಿಯಲ್ಲಿ ಸನಾತನ ಪರಂಪರೆ ಆರಾಧನೆಗೆ ಮಹತ್ವ ಕೊಡುವ ಸಂದರ್ಭದಲ್ಲಿ ಆರಾಧನೆಗೆ ಕೊಡುಗೆ ಕೊಟ್ಟವರನ್ನು ಗುರುತಿಸುವುದು ನಮ್ಮ ಕರ್ತವ್ಯ ಎಂದು ಬಿಜೆಪಿಯಿಂದ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇವತ್ತು ಹಿಂದು ಸಮಾಜದಲ್ಲಿನ ನಾಗರಧನೆ, ಭೂತಾರಾಧನೆ ದೈವ ಸಂಪ್ರದಾಯಗಳು ಉಳಿಯಲು ಕಾರಣ ನಿಮ್ಮಂತಹ ಆರಾಧಕರಿಂದಾಗಿ ನಿಮ್ಮಲ್ಲಿ ವಿದ್ಯಾಭ್ಯಾಸ, ಆರ್ಥಿಕ ಕೊರತೆ ಇದ್ದರೂ ಹೃದಯ ಶ್ರೀಮಂತಿಕೆ ಇದೆ. ನಿವೆಲ್ಲ ಧರ್ಮಿಷ್ಟರು ಎಂದ ಅವರು ಡಾ| ಬಾಬ ಸಾಹೇರ್ ಅಂಬೇಡ್ಕರ್ ಅವರು ಈ ಸಮಾಜದ ಬಡವರ್ಗದ ದಲಿತ ಸಮಾಜ ಎಳ್ಗೆಗಾಗಿ ಮೀಸಲಾತಿ ಪದ್ಧತಿ ತಂದು ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ಅದನ್ನು ಮುಂದುವರಿಸುತ್ತಾ ನಮ್ಮ ಸರಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಸರಕಾರದ ಸೌಲಭ್ಯ ಉಪಯೋಗಿಸಿಕೊಂಡು ಇತರ ಸಮಾಜದೊಂದಿಗೆ ಸಮಾನವಾಗಿ ಬದುಕುವ ಕೆಲಸ ಆಗಬೇಕು ಎಂದರು.

ಚುನಾವಣೆ ಬಂದಾಗ ಆಮೀಷಗಳಿಗೆ ಒಳಗಾಗಬೇಡಿ:
ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಕಲ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ತಳಮಟ್ಟದ ಜನಾಂಗಕ್ಕೆ ಹಲವು ಯೋಜನೆ ನೀಡುವ ಮೂಲಕ ವಿಶ್ವಮಟ್ಟದಲ್ಲೇ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಉಳಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ನಮ್ಮ ಸಮಾಜದವರು ಹೆಂಡ, ಹಣಗಳ ಆಮೀಷಕ್ಕೆ ಒಳಗಾಗದೆ ದೇಶದ ತಳಮಟ್ಟದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಿಜೆಪಿ ಸರಕಾರಕ್ಕೆ ಮತಚಲಾಯಿಸುವ ಎಂದರು.

ಸಂವಿಧಾನವನ್ನು ಗಟ್ಟಿಗೊಳಿಸಿದ ಪಕ್ಷ ಬಿಜೆಪಿ:
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿನಯನೇತ್ರ ದಡ್ಡಳ್ ಕಾಡು ಅವರು ಮಾತನಾಡಿ ಜ್ಞಾನದ ಸೂರ್ಯ ನಮ್ಮ ಬಾಬಾ ಸಾಹೇಬ್ ಅಂಬೆಡ್ಕರ್ ಅವರ ಸ್ಥಳವನ್ನು ಪಂಚ ತೀರ್ಥ, ಪುಣ್ಯ ತೀರ್ಥ ವನ್ನಾಗಿ ಮಾಡಿದ ನಮ್ಮ ಸರಕಾರ ಸಂವಿಧಾನವನ್ನು ಗಟ್ಟಿಗೊಳಿಸಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಯಾವುದೇ ಅಪವಾದ ಇಲ್ಲದೆ ಆಡಳಿತ ನಡೆಸಿರುವುದು ನಮ್ಮ ಸರಕಾರದ ದೊಡ್ಡ ಸಾಧನೆ.

ಮೋದಿ ಆಡಳಿತದ ಸಂಭ್ರಮಾಚರಣೆ ಪರಿಣಾಮಕಾರಿ ಅನುಷ್ಠಾನ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ರಾಷ್ಟ್ರದ ಸೇವೆಗಾಗಿ ಪ್ರಧಾನಿ ಮೋದಿಯವರ ಅವಿರತ ಪ್ರಯತ್ನ ‘ಸೇವೆ’ಯನ್ನು ಬಿಂಬಿಸುತ್ತದೆ. ಹಾಗೆಯೇ ಉತ್ತಮ ಆಡಳಿತಕ್ಕೆ ‘ಸುಶಾಸನ’ ನಿದರ್ಶನವಾಗಿದೆ. ಬಡವರ ಪರವಾದ ಯೋಜನೆಗಳು ‘ಬಡವರ ಕಲ್ಯಾಣ’ವನ್ನು ಪ್ರತಿನಿಧಿಸುತ್ತದೆ. ಇವತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳು ಮತ್ತು ೮ ವರ್ಷಗಳ ಸಂಭ್ರಮಾಚರಣೆಯ ಕಾರ್ಯಕ್ರಮಗಳನ್ನು ಬಿಜೆಪಿ ಪುತ್ತೂರು ಮಂಡಲ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ.

ಸರಕಾರದ ಸೌಲಭ್ಯವನ್ನು ಪಡೆಯಿರಿ:
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಾಮಾಜಿಕ ಹಿತಚಿಂತಕ ಶಿವಪ್ರಸಾದ್ ಕೊಕ್ಕಡ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಮತ್ತು ಸಮುದಾಯ ಕಾರ್ಯಗಳ ಮಾಹಿತಿ ನೀಡಿದರು. ಅಂಬೇಡ್ಕರ್ ಅವರ ಸಂವಿಧಾನದಿಂದ ಜನಾಂಗ ಮೇಲೆ ಬಂತು. ಇವತ್ತಿನ ಸರಕಾರ ಕಾಲೋನಿಯ ಬದಲು ಲೇ ಔಟ್ ಮಾದರಿಯ ಸೌಲಭ್ಯ ನೀಡುತ್ತಿದೆ. ಅದರ ಪ್ರಯೋಜನ ಸಮುದಾಯ ಪಡೆಯಬೇಕೆಂದರು.

ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸೇವೆ ಸುಶಾಸನ ಬಡವರಕಲ್ಯಾಣ ಕಾರ್ಯಕ್ರಮದ ಜಿಲ್ಲಾ ಸಹ ಸಂಚಾಲಕ ಆರ್ ಸಿ ನಾರಾಯಣ, ಜಿಲ್ಲಾ ಎಸ್ಸಿ ಮೋರ್ಚದ ಪ್ರಧಾನ ಕಾರ್ಯದರ್ಶಿ ಅಣ್ಣಿ ಎಳ್ತಿಮಾರು, ಜಿಲ್ಲಾ ಎಸ್ಸಿ ಮೋರ್ಚದ ಕಾರ್ಯಕಾರಿ ಸಮಿತಿ ಸದಸ್ಯ ಕಿಟ್ಟ ಅಜಿಲ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಸಿ ಮೋರ್ಚಾದ ಗ್ರಾಮಾಂತರ ಮಂಡಲದ ಅಧ್ಯಕ್ಷ ಬಾಬು ಬಿ ಮತ್ತು ನಗರಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ತಿಮ್ಮಪ್ಪ ನೀರ್ಪಾಜೆ ಹಾಗು ಪ್ರಭಾರಿ ಲೋಲಾಕ್ಷ ಅತಿಥಿಗಳನ್ನು ಗೌರವಿಸಿದರು. ಧನ್ಯ ಇಚಿಲಂಪಾಡಿ ಪ್ರಾರ್ಥಿಸಿದರು. ಎಸ್ಸಿ ಮೋರ್ಚದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಸ್ವಾಗತಿಸಿದರು. ನಗರಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ತಿಮ್ಮಪ್ಪ ನೀರ್ಪಾಜೆ ವಂದಿಸಿದರು. ಸೇವೆ ಸುಶಾಸನ ಬಡವರ ಕಲ್ಯಾಣ ಕಾರ್ಯಕ್ರಮದ ಮಾಧ್ಯಮ ಪ್ರಮುಖ್ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ರಾವ್ ಬಪ್ಪಳಿಗೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here