ದರ್ಬೆ: ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸಾಹಿರಾ ಝುಬೇರ್ ಮನೆಗೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ಭೇಟಿ

0

ಪುತ್ತೂರು: ರಾಜ್ಯ ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್‌ರವರು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ, ನೋಟರಿ ಸಾಹಿರಾ ಝುಬೇರ್‌ರವರ ದರ್ಬೆ ನಿವಾಸಕ್ಕೆ ಜೂ.೧೫ರಂದು ಸಂಜೆ ಭೇಟಿ ನೀಡಿದರು.
ಸಾಹಿರಾ ಝುಬೇರ್ ಅವರ ತಾಯಿ ಅಪ್ಸಾ ರಹೀಂ ಅವರು ಜೂ.೧೩ರಂದು ನಿಧನರಾಗಿರುವ ಹಿನ್ನೆಲೆಯಲ್ಲಿ ಯು.ಟಿ ಖಾದರ್‌ರವರು ಭೇಟಿ ನೀಡಿದ್ದು ಕುಟುಂಬದವರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಮಂಗಳೂರು ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಜೊತೆಗಿದ್ದರು.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲ ತಾಣಗಳ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಸಾಹಿರಾ ಝುಬೇರ್‌ರವರ ಪತಿ
ಕಿಲಾಬ್ ಝಬೇರ್, ಮಕ್ಕಳಾದ ಅಬ್ದುಲ್ಲ ನಶತ್, ಮಹಮ್ಮದ್ ನಾಝಿಶ್, ನ್ಯಾಯವಾದಿ ಅಬ್ದುಲ್ ರಹಿಮಾನ್ ನಿಹಾಲ್ ಹಾಗೂ
ಅಬ್ದುಲ್ ನಿಝಾರ್, ತಾಜುದ್ದೀನ್, ಅಬ್ದುಲ್ ಹಮೀದ್, ಮಹಮ್ಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here