ಕಾಂಚನ ಹ್ಯುಂಡೈಯಲ್ಲಿ ವಿನೂತನ ವಿನ್ಯಾಸದೊಂದಿಗೆ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್ ಬಿಡುಗಡೆ

0

ಪುತ್ತೂರು; ಕಾರುಗಳ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹ್ಯುಂಡೈಯು ವಿನೂತನ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನಗಳೊಂದಿಗೆ ತಯಾರಿಸಲಾಗಿರುವ ವೆನ್ಯೂ ಫೇಸ್ ಲಿಫ್ಟ್ ಕಾರನ್ನು ದರ್ಬೆ ಕಾಂಚನ ಹ್ಯುಂಡೈ ಶೋ ರೂಂನಲ್ಲಿ ಬಿಡುಗಡೆಗೊಂಡಿತು.


ನೂತನ ಕಾರನ್ನು ಕೆನರಾ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕ ನರೇಂದ್ರ ರೆಡ್ಡಿ ಅನಾವರಣ ಮಾಡಿ ಬಿಡುಗಡೆ ಮಾಡಿದರು. ವಿಭಾಗೀಯ ವ್ಯವಸ್ಥಾಪಕ ನೀಲಾಧರ ಭಂಡಾರ್ ಕರ್, ಸೇಲ್ಸ್ ಮ್ಯಾನೇಜರ್ ರಂಜಿತ್, ಸರ್ವೀಸ್ ಮ್ಯಾನೇಜರ್ ವಿಶ್ವಾಸ್ ಉಪಸ್ಥಿತರಿದ್ದರು.


ಕಾರಿನ ಪ್ರಥಮ ಗ್ರಾಹಕರಾದ ಗೋಪಾಲಕೃಷ್ಣ ಭಟ್, ಕುಶಲಾಕ್ಷಿ ಹಾಗೂ ರಕ್ಷಿತ್ ರವರಿಗೆ ಕಾರಿನ ಕೀ ಹಸ್ತಾಂತರಿಸಲಾಯಿತು. ಸೇಲ್ಸ್ ಎಕ್ಸಿಕ್ಯುಟಿವ್ ಪಂಕಜ್ ಸ್ವಾಗತಿಸಿ, ವಂದಿಸಿದರು. ಸೇಲ್ಸ್ ಎಕ್ಸಿಕ್ಯುಟಿವ್ ಅಫ್ವಾನ್ ಕಾರಿ‌ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು.  ಸಿಬ್ಬಂದಿಗಳಾದ ರೇಖಾ, ಸುಷ್ಮಾ, ಹರೀಶ್, ಪ್ರತೀಕ್ಷಾ ಅತಿಥಿಗಳನ್ನು ಹೂ ಗುಚ್ಚ ನೀಡಿ ಸ್ವಾಗತಿಸಿದರು.

 


ಕಾರಿನ ವಿಶೇಷತೆಗಳು;
2022ರ ವೆನ್ಯೂ ಮಾದರಿಯು E, S, S(O), SX ಮತ್ತು SX(O) ವೆರಿಯೆಂಟ್‌ಗಳನ್ನು ಪಡೆದುಕೊಂಡಿದ್ದು, ಈ ಬಾರಿ ಹಲವು ನವೀಕೃತ ವಿನ್ಯಾಸಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಮುಂಭಾಗದ ವಿನ್ಯಾಸವು ಮಧ್ಯಮ ಕ್ರಮಾಂಕದ ಐಷಾರಾಮಿ SUV ಟ್ಯೂಸಾನ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಮುಂಭಾಗದ ಗ್ರಿಲ್ ಅನ್ನು ಡಾರ್ಕ್ ಕ್ರೋಮ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ಮುಂಭಾಗದ ಬಂಪರ್‍ನಲ್ಲಿಯೂ ಸಹ ಸಾಕಷ್ಟು ಪರಿಷ್ಕರಣೆ ಮಾಡಲಾಗಿದೆ. ಹೊಸ ಬಂಪರ್ ಜೊತೆ ಈ ಬಾರಿ ದೊಡ್ಡದಾದ ಏರ್ ಡ್ಯಾಮ್ ನೀಡಲಾಗಿದ್ದು, ಇದರಲ್ಲಿ ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಕೂಡ ಕಂಡುಬರುತ್ತದೆ. ಹೊಸ ಕಾರಿನ ಎರಡು ಬದಿಯಲ್ಲೂ ಹೊಸ ವಿನ್ಯಾಸದ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ. LED ಟೈಲ್‌ಲೈಲ್, ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಜೊತೆಗೆ ಸ್ಕೂಪ್-ಔಟ್‌ನೊಂದಿಗೆ ನವೀಕೃತಗೊಂಡಿರುವ ಹಿಂಭಾಗದ ಬಂಪರ್ ಮತ್ತು ನಂಬರ್ ಪ್ಲೇಟ್ ವಿಭಾಗವನ್ನು ಕಪ್ಪು ಬಣ್ಣದ ಪ್ಲಾಸ್ಟಿಕ್‌ನೊಂದಿಗೆ ಜೋಡಿಸಲಾಗಿದೆ.

ಎಂಜಿನ್‌ಗಳನ್ನು 4 ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. 5-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ ಆಟೋಮ್ಯಾಟಿಕ್, 6-ಸ್ಪೀಡ್ ಮ್ಯಾನ್ಯುವಲ್ ಮತ್ತು 7-ಸ್ಪೀಡ್ ಡಿಸಿಟಿ. ಹೊಸ ಹ್ಯುಂಡೈ ವೆನ್ಯೂ ಸಹ ಸಾಮಾನ್ಯ, ಇಕೋ ಮತ್ತು ಸ್ಪೋರ್ಟ್ ಮೋಡ್‌ಗಳ ಆಯ್ಕೆಯೊಂದಿಗೆ ಬಹುಮುಖ ಚಾಲನಾ ಕಾರ್ಯಕ್ಷಮತೆಗಾಗಿ ಡ್ರೈವ್ ಮೋಡ್ ಅನ್ನು ನೀಡಲಾಗಿದೆ.

ಸುರಕ್ಷತೆಯ ವಿಷಯದಲ್ಲಿ 2022ರ ಹ್ಯುಂಡೈ ವೆನ್ಯೂ ಫೇಸ್‌ಲಿಫ್ಟ್ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್-ಅಸಿಸ್ಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಸೆನ್ಸರ್‌ಗಳ ಜೊತೆಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿರುತ್ತದೆ.

LEAVE A REPLY

Please enter your comment!
Please enter your name here