ಚಾರ್ವಾಕ ಪ್ರಾ.ಕೃ.ಪ.ಸ.ಸಂಘದಲ್ಲಿ ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಸಮವಸ್ತ್ರ ವಿತರಣೆ

0

  • ಕೋವಿಡ್‌ನಿಂದ ಮೃತಪಟ್ಟ ರೈತರ ಸಾಲ ತೀರುವಳಿ ಪರಿಹಾರ ವಿತರಣೆ
  • ನವೋದಯ ಸ್ವಸಹಾಯ ಸಂಘಗಳು ಜನರ ಆರ್ಥಿಕ ಶಕ್ತಿಯಾಗಿ ಬೆಳೆದಿದೆ- ಶಶಿಕುಮಾರ್ ರೈ ಬಾಲ್ಯೊಟ್ಟು

 

ಕಾಣಿಯೂರು: ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧೀನದಲ್ಲಿ ಸುಮಾರು ೩೮ ಸಾವಿರ ಗುಂಪಿನಲ್ಲಿ ಸದಸ್ಯರಿದ್ದಾರೆ. ಎಲ್ಲರಿಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ. ೬ ಲಕ್ಷ ಸಮವಸ್ತ್ರ ವಿತರಣೆ ನಡೆದಿದ್ದು, ಇನ್ನೂ ೨ ಲಕ್ಷದಷ್ಟು ಸಮವಸ್ತ್ರ ವಿತರಣೆ ನಡೆಯಬೇಕಾಗಿದೆ. ನವೋದಯ ಸ್ವಸಹಾಯ ಸ್ವಹಾಯ ಸಂಘವು ಧಾರವಾಡ, ಚಿಕ್ಕಮಗಳೂರು, ಹುಬ್ಬಳಿ, ಬೆಳಗಾಂ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಜುಲೈ ೧ರಿಂದ ಆರಂಭವಾಗಲಿದ್ದು, ಒಟ್ಟು ೧೫ ಲಕ್ಷ ಸ್ವಸಹಾಯ ಜನರ ತಂಡ ನಮ್ಮ ನಮ್ಮೊಂದಿಗೆ ಇರುತ್ತದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು. ಅವರು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜೂ ೨೧ರಂದು ನಡೆದ ನವೋದಯ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಸಮವಸ್ತ್ರ ವಿತರಣೆ ಹಾಗೂ ಕೋವಿಡ್‌ನಿಂದ ಮೃತಪಟ್ಟ ರೈತರ ಸಾಲ ತೀರುವಳಿ ಪರಿಹಾರವನ್ನು ವಾರೀಸುದಾರರಿಗೆ ವಿತರಿಸಿ ಮಾತನಾಡಿದರು. ಗ್ರಾಮೀಣ ಜನರ ಬದುಕಿಗೆ ಆಧಾರವಾಗಿರುವ ನವೋದಯ ಸ್ವಸಹಾಯ ಸಂಘಗಳು ಸಾಮಾಜಿಕ ಪರಿವರ್ತನೆಯನ್ನು ಮಾಡಿದೆ. ನವೋದಯ ಸ್ವಸ್ವಹಾಯ ಸಂಘಗಳ ಮೂಲಕ ವಿವಿಧ ರೀತಿಯ ಸ್ವ ಉದ್ಯೋಗ ನಡೆಸುವವರಿಗೆ ಸಬ್ಸಿಡಿ ಮೊತ್ತದೊಂದಿಗೆ ಸಾಲವನ್ನು ನೀಡುವ ವ್ಯವಸ್ಥೆಯನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖಾಂತರ ನೀಡಲಿದ್ದು, ಡಾ. ಎಂ.ಎನ್ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ನವೋದಯ ಸ್ವಸಹಾಯ ಸಂಘಗಳು ಸಂಘಟನಾತ್ಮಕವಾಗಿ ಬಡವರ್ಗದ ಜನರ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಆನಂದ ಗೌಡ ಮೇಲ್ಮನೆ ಅವರು ವಹಿಸಿದ್ದರು. ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ರಂಗನಾಥ್ ರೈ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ.ಪಿ, ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ, ಎಸ್‌ಸಿಡಿಸಿಸಿ ಬ್ಯಾಂಕಿನ ವಲಯ ಮೇಲ್ವೀಚಾರಕ ವಸಂತ್ ಎಸ್, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮುರಳೀಧರ ಟಿ.ಪುಣ್ಚತ್ತಾರು, ನಿರ್ದೇಶಕರಾದ ಹರೀಶ ಗೌಡ ಅಂಬುಲ, ವಿಶ್ವನಾಥ ಗೌಡ ಮರಕ್ಕಡ, ಅನಂತ ಕುಮಾರ್ ಬೈಲಂಗಡಿ, ವಿಶ್ವನಾಥ ಕೂಡಿಗೆ, ಜಯರಾಮ ಕೆಳಗಿನಕೇರಿ, ರಮೇಶ ಉಪ್ಪಡ್ಕ, ಕಮಲ ಮುದುವ, ರತ್ನಾವತಿ ಮುದುವ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನವೋದಯ ಪ್ರೇರಕಿ ಪ್ರೇಮ ಪ್ರಾರ್ಥಿಸಿದರು.

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನವೋದಯ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಸಮವಸ್ತ್ರ ವಿತರಣೆ ಹಾಗೂ ಕೋವಿಡ್‌ನಿಂದ ಮೃತಪಟ್ಟ ರೈತರ ಸಾಲ ತೀರುವಳಿ ಪರಿಹಾರವನ್ನು ರೈತರ ವಾರೀಸುದಾರರಾದ ದಿನೇಶ್ ಇಡ್ಯಡ್ಕ, ಜಾನಕಿ ಓಡದಕರೆ, ನವೀನ್ ಅಗತ್ತಬೈಲು ಇವರಿಗೆ ವಿತರಿಸಲಾಯಿತು. ಇಂಟಿಗ್ರೇಟೆಡ್ ನ್ಯೂಟ್ರಿಯಂಟ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಲೆಕ್ಕಿಗ ಭವತ್ ಎ.ಎಸ್ ಅವರನ್ನು ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here