ಅಂಚೆ ಇಲಾಖೆಯಲ್ಲಿ ಚಿನ್ನದ ಬಾಂಡ್ ಹಣ ಹೂಡಿಕೆ ಅವಕಾಶ

0

ಪುತ್ತೂರು: ಲಾಭದಾಯಕ ಹೂಡಿಕೆಗಳಲ್ಲೊಂದಾದ ಚಿನ್ನದ ಬಾಂಡ್‌ನ ಮೇಲೆ ಹಣ ಹೂಡಿಕೆ ಮಾಡಲು ಅಪೇಕ್ಷಿಸುವವರಿಗೆ ಪ್ರಸಕ್ತ ಆರ್ಥಿಕ ವರ್ಷ 2022-23ನೇ ಸಾಲಿನಲ್ಲಿ ಪ್ರಥಮ ಅವಕಾಶ ಸರಕಾರ ಘೋಷಿಸಿದಂತೆ ಜೂ. 20ರಿಂದ ಜೂ. 24ರ ತನಕ ಹಣ ಹೂಡಲು ಅವಕಾಶವಿದೆ ಎಂದು ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಗ್ರಾಮ್‌ಗೆ ರೂ. 5,091 ಮೌಲ್ಯವಿದ್ದು, ಹೂಡಿಕೆ ಮಾಡುವ ಆಕಾಂಕ್ಷಿಗಳು ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿಯೊಂದಿಗೆ ಸಮೀಪದ ಇಲಾಖಾ ಅಂಚೆ ಕಚೇರಿಗೆ ಭೇಟಿ ನೀಡಿ ಹಣ ಹೂಡಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here