ಕಾಂಚನ ಪ್ರೌಢ ಶಾಲಾ ಮಂತ್ರಿಮಂಡಲ ರಚನೆ

0

ಬಜತ್ತೂರು : ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು. ಸಾರ್ವತ್ರಿಕ ಚುನಾವನಾ ಮಾದರಿಯಲ್ಲಿ ಮಕ್ಕಳಿಗೆ ಚುನಾವಣೆ ನಡೆಸಲಾಯಿತು. ಮುಖ್ಯಮಂತ್ರಿಯಾಗಿ ಹತ್ತನೇ ತರಗತಿಯ ದೀಕ್ಷಿತಾ, ಉಪಮುಖ್ಯಮಂತ್ರಿಯಾಗಿ ೯ನೇ ತರಗತಿಯ ಗಾಯತ್ರಿ ಹಾಗೂ ಉಪೋಪಮುಖ್ಯಮಂತ್ರಿಯಾಗಿ ಎಂಟನೇ ತರಗತಿಯ ರೂಪಶ್ರೀ ಆಯ್ಕೆಯಾದರು.


ವಿಪಕ್ಷ ನಾಯಕನಾಗಿ ದೀಪಕ್ ಕುಮಾರ್, ಗೃಹಮಂತ್ರಿಯಾಗಿ ಪವನ್ ಕುಮಾರ್, ಶಿಕ್ಷಣ ಮಂತ್ರಿಯಾಗಿ ರಕ್ಷಿತಾ, ಸ್ವಚ್ಛತಾ ಮಂತ್ರಿಯಾಗಿ ಕೃತಿಕ್, ಆರೋಗ್ಯ ಮಂತ್ರಿಯಾಗಿ ಪವಿತಾ, ಆಹಾರ ಮಂತ್ರಿಯಾಗಿ ಅಭಿಲಾಷ್, ನೀರಾವರಿ ಮಂತ್ರಿಯಾಗಿ ಗುರುರಾಜ್, ವಾರ್ತಾ ಮಂತ್ರಿಯಾಗಿ ಹಿತಾಕ್ಷಿ, ಸಾಂಸ್ಕೃತಿಕ ಮಂತ್ರಿಯಾಗಿ ಪೂರ್ವಿಕಾ, ಕ್ರೀಡಾ ಮಂತ್ರಿಯಾಗಿ ಸುಜನ್, ಶಾಲಾ ಪತ್ರಿಕೆಯ ಮಂತ್ರಿಯಾಗಿ ದಿವ್ಯಾ, ಕೃಷಿ ಮಂತ್ರಿಯಾಗಿ ರಂಜಿತ್, ಶಾಲಾ ಬಸ್ ಮಂತ್ರಿಯಾಗಿ ಸುಹೈಬ್ ಆಯ್ಕೆಯಾದರು. ಮುಖ್ಯೋಪಾಧ್ಯಾಯರಾದ ಸೂರ್ಯಪ್ರಕಾಶ್‌ರವರ ಮಾರ್ಗದರ್ಶನದಂತೆ ಚುನಾವಣೆ ಪ್ರಕ್ರಿಯೆ ಅಧಿಕಾರಿಯಾಗಿ ಜಯಲಕ್ಷ್ಮಿ ಕಾರ್ಯನಿರ್ವಹಿಸಿದ್ದರು. ವಿಜಯಲಕ್ಷ್ಮಿ, ಚರಣ್‌ಕುಮಾರ್, ಜ್ಞಾನೇಶ್ ಸಹಕರಿಸಿದರು.

LEAVE A REPLY

Please enter your comment!
Please enter your name here