ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಅಲೈಡ್ ಆರ್ಟ್ಸ್‌ನಿಂದ ಯೋಗ ಶಿಬಿರ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಅಲೈಡ್ ಆರ್ಟ್ಸ್ ಪುತ್ತೂರು ಶಾಖೆ ಜಂಟಿ ಆಶ್ರಯದಲ್ಲಿ ಜೂ.21ರಿಂದ 24 ರವರೆಗೆ ಪ್ರತೀ ದಿನ ಸಂಜೆ 5.30 ರಿಂದ 6.30 ರವರೆಗೆ ನಡೆಯುವ ಉಚಿತ ಯೋಗ ಶಿಬಿರವನ್ನು ಹಾಗೂ ವಿಶ್ವ ಸಂಗೀತ ದಿನಾಚರಣೆಯನ್ನು ಶ್ರೀ ರಾಧಾಕೃಷ್ಣ ಮಂದಿರದಲ್ಲಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ ಉದ್ಘಾಟಿಸಿದರು. ‌

ಸುಮಾರು 40 ಶಿಬಿರಾರ್ಥಿಗಳು ಈ ಯೋಗಾಸನ ಶಿಬಿರದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಹಾಗೂ ಅಂತರರಾಷ್ಟೀಯ ಹಲವಾರು ವೇದಿಕೆಗಳಲ್ಲಿ ಸಂಗೀತ ಪ್ರದರ್ಶನವನ್ನು ನೀಡುತ್ತಿರುವ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಸದಸ್ಯಅಶೋಕ ಆಚಾರ್ಯರವರನ್ನು ಸನ್ಮಾನಿಸಲಾಯಿತು. 2022-23 ನೇ ಸಾಲಿನ ನಿಯೋಜಿತ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಶುಭ ಹಾರೈಸಿದರು. ವೇದಿಕೆಯಲ್ಲಿ ಅಂತರ್‌ರಾಷ್ಟ್ರೀಯ ಯೋಗ ತೀರ್ಪುಗಾರರಾದ ಡಾ| ರಾಮಣ್ಣ ರೈ, ಕರಾಟೆ ತರಬೇತುದಾರ ಸುರೇಶ್ ಎಂ. ವಲಯ ಸೇನಾನಿ ಜಯಂತ ಶೆಟ್ಟಿ ಕಂಬಳತ್ತಡ್ಡ, ಕಾರ್ಯದರ್ಶಿ ಆನಂದ ಮೂವಪ್ಪು, ನಿಯೋಜಿತ ವಲಯ ಸೇನಾನಿ ಸೆನೋರಿಟಾ ಆನಂದ್ ಹಾಗೂ ರೋಟರಿ ಸ್ವರ್ಣ ಹಾಗೂ ಕರಾಟೆ ಸಂಸ್ಥೆಯ ಹಲವರು ಉಪಸ್ಥಿತರಿದ್ದರು. ನಿಯೋಜಿತ ಕಾರ್ಯದರ್ಶಿ ಸುರೇಶ್ ಪಿ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here