ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಸಮಿತಿ ಮಹಾಸಭೆ

0


ಪುತ್ತೂರು;ಬಿರುಮಲೆ ಬೆಟ್ಟದ ಸಮಗ್ರವಾದ ಅಭಿವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಶಾಸಕರು, ಅಧಿಕಾರಿಗಳನ್ನು ಸಮಿತಿಯಲ್ಲಿ ಸೇರಿಸಿಕೊಳ್ಳುವುದು. ಸಮಿತಿ ನಿಧಿ ವೃದ್ಧಿಸಲು ದಾನಿಗಳನ್ನು ಸಂಪರ್ಕಿಸುವುದು, ಕೋಚಣ್ಣ ರೈಯವರ ಕುಟುಂಬಸ್ಥರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳುವುದು ಹಾಗೂ ಸದಸ್ಯತ್ವ ಶುಲ್ಕವನ್ನು ಏರಿಕೆ ಮಾಡುವಂತೆ ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಮಹಾಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮಹಾಸಭೆಯು ಜೂ.25ರಂದು ಸಂಜೆ ಪರ್ಲಡ್ಕ ಸಮಿತಿ ಜತೆ ಕಾರ್ಯದರ್ಶಿ ನಿತಿನ್ ಪಕ್ಕಳರ ನಿವಾಸ ಗುಲಾಬಿ ಸದನದಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯ ಸೀತಾರಾಮ ರೈ ಸವಣೂರು ಮಾತನಾಡಿ, ಸದಸ್ಯತ್ವ ಶುಲ್ಕ ರೂ.100ವನ್ನು ರೂ.10000ಕ್ಕೆ ಏರಿಕೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು. ಇದರ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಲಾಯಿತು. ಸಮಿತಿಯ ನಿಧಿ ವೃದ್ಧಿಸಲು ದಾನಿಗಳನ್ನು ಸಂಪರ್ಕಿಸಿ, ಅವರ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು, ಕೋಚಣ್ಣ ರೈಯವರ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಅವರ ಕುಟುಂಬಸ್ಥರನ್ನು ಸಮಿತಿಯಲ್ಲಿ ಸೇರಿಸಿಕೊಂಡರೆ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಬಹುದು ಎಂದು ಸೀತಾರಾಮ ರೈಯವರು ಸಲಹೆ ನೀಡಿದರು. ಬಿರುಮಲೆ ಬೆಟ್ಟದ ಸಮಗ್ರವಾದ ಅಭಿವೃದ್ಧಿ ಸಹಕಾರಿಯಾಗುವ ನಿಟ್ಟಿನಲ್ಲಿ ಶಾಸಕರು, ಹಾಗೂ ಅಧಿಕಾರಿಗಳನ್ನು ಸಮಿತಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ ಎಂದು ಸಂತೋಷ್ ಶೆಟ್ಟ ಸಲಹೆ ನೀಡಿದರು. ಕೋಚಣ್ಣ ರೈಯವರ ಯೋಜನೆ ಪುಟಾಣಿ ರೈಲನ್ನು ಜಾರಿಮಾಡಬೇಕು ಎಂದು ಶಾಂತ ಕುಮಾರ್ ತಿಳಿಸಿದರು.

 


ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಎ.ವಿ ನಾರಾಯಣ ಮಾತನಾಡಿ, ಬಿರುಮಲೆ ಬೆಟ್ಟದ ಅಭಿವೃದ್ಧಿಗೆ ಪೂರಕವಾಗಿ ಶಾಸಕರು, ನಗರ ಸಭೆ ಎಲ್ಲಾ ರೀತಿಯ ಸಹಕಾರಗಳನ್ನು ನೀಡಿದ್ದು ರಸ್ತೆ ಕಾಂಕ್ರಿಟೀಕರಣ, ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಮುಂದಿನ ಅಭಿವೃದ್ಧಿ ಕಾರ್ಯಗಳು ಕಾರ್ಯಗತವಾಗುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರಿಗೆ ಎಲ್ಲಾ ರೀತಿಯ ಸಹಕಾರಗಳನ್ನು ನೀಡುವ ಎಂದು ತಿಳಿಸಿದರು.

ವಲಯಾರಣ್ಯಾಧಿಕಾರಿ ಕಿರಣ್ ಮಾತನಾಡಿ, ಬಿರುಮಲೆ ಬೆಟ್ಟದಲ್ಲಿ ಅರಣ್ಯ ಇಲಾಖೆಯಿಂದ ಮಾಹಿತಿ ಕೇಂದ್ರ, ಮಕ್ಕಳ ಆಟದ ಪಾರ್ಕ್, ಪೊದೆ ತೆಗೆದು ಹೊಸ ಗಿಡಗಳ ನೆಡುವುದು, ಟ್ರೀಪಾರ್ಕ್, ಓಪನ್‌ಅಡಿಟೋರಿಯಂ, ವಾಕಿಂಗ್ ಪಾರ್ಕ್ ನಲ್ಲಿ ಹೂವಿನ ಗಿಡಗಳನ್ನು ನೆಡಲಾಗುವುದು ಎಂದು ತಿಳಿಸಿದರು.

ನೂತನ ಅಧ್ಯಕ್ಷ ಜಗಜ್ಜೀವನ್‌ದಾಸ್ ರೈ ಮಾತನಾಡಿ, ಬಿರುಮಲೆ ಬೆಟ್ಟದಲ್ಲಿ ಒಟ್ಟು ೪೮ ಎಕರೆ ಜಾಗವಿದೆ. ಇದರಲ್ಲಿ ೧೬ ಎಕರೆಯಲ್ಲಿ ಅರಣ್ಯ ಇಲಾಖೆಯಿಂದ ಸಾಲುಮರ ತಿಮ್ಮಕ್ಕ ಥೀಮ್ ಪಾರ್ಕ್ ನಿರ್ಮಾಣಗೊಂಡಿದೆ. ಉಳಿದ ೩೨ ಎಕರೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಸಮಗ್ರವಾದ ಅಭಿವೃದ್ಧಿಗಾಗಿ ನಗರ ಸಭೆಯು ಯೋಜನೆಗೆ ನೀಲ ನಕಾಶ ರೂಪಿಸಿದ್ದಾರೆ. ಅದರ ಮೂಲಕ ಹಂತ ಹಂತವಾಗಿ ಅಭಿವೃದ್ಧಿ ನಡೆಯಲಿದೆ. ಈ ಎಲ್ಲಾ ಕೆಲಸ ಕಾರ್ಯಗಳು ನಡೆದು ಮುಂದೆ ಬಿರುಮಲೆ ಬೆಟ್ಟವು ಉತ್ತಮ ಪ್ರವಾಸಿ ತಾಣವಾಗಿ ನಿರ್ಮಾಣಗೊಳ್ಳಲಿದೆ ಎಂದರು. ಉಪಾಧ್ಯಕ್ಷ ಜಯಪ್ರಕಾಶ್ ರೈ ನೂಜಿಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ;
ಸಂಘದ ಲೆಕ್ಕಪರಿಶೋಧನೆಯನ್ನು ಉಚಿತವಾಗಿ ನಿರ್ವಹಣೆ ಮಾಡುತ್ತಿದ್ದ ಚಾರ್ಟರ್ಡ್ ಅಕೌಂಟೆಂಟ್ ರಾಮ ಭಟ್ ರವರನ್ನು ಸನ್ಮಾನಿಸಲಾಯಿತು.
ಶ್ರದ್ಧಾಂಜಲಿ ಅರ್ಪಣೆ;
ಕಳೆದ ಒಂದು ವರ್ಷದಲ್ಲಿ ನಿಧನರಾದ ಕಾರ್ಯಕಾರಿ ಸಮಿತಿ ಸದಸ್ಯರಾದ ವೆಂಕಟ್ರಾಮಯ್ಯ, ಮುರಳಿಮೋಹನ ಶೆಟ್ಟಿ, ಮಾಜಿ ಶಾಸಕ ರಾಮ ಭಟ್, ಕೋಚಣ್ಣ ರೈಯವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಹೊಸ ಕಾರ್ಯಕಾರಿ ಸಮಿತಿ ರಚನೆ;
ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ಗೌರವಾಧ್ಯಕ್ಷರಾಗಿ ಎ.ವಿ ನಾರಾಯಣ, ಅಧ್ಯಕ್ಷರಾಗಿ ಜಗಜ್ಜೀವನ್ ದಾಸ್ ರೈ, ಉಪಾಧ್ಯಕ್ಷರಾಗಿ ಕ್ಸೇವಿಯರ್ ಡಿ’ಸೋಜ, ಜಯಪ್ರಕಾಶ್ ರೈ ನೂಜಿಬೈಲು, ಕಾರ್ಯದರ್ಶಿಯಾಗಿ ಎಂ.ಎಸ್ ಅಮ್ಮಣ್ಣಾಯ, ಜತೆಕಾರ್ಯದರ್ಶಿಯಾಗಿ ನಿತಿನ್ ಪಕ್ಕಳ, ಕೋಶಾಧಿಕಾರಿಯಾಗಿ ದತ್ತಾತ್ರೇಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಾಂತ ಕುಮಾರ್, ಎಂ.ಎಸ್ ರಘೂನಾಥ, ಸುಭಾಷ್ ಬೆಳ್ಳಿಪ್ಪಾಡಿ, ಮನೋಜ್ ಶಾಸ್ತ್ರಿ, ಡಾ.ಸತ್ಯವತಿ ಆಳ್ವ, ಇಂದಿರಾ ಪಿ. ಆಚಾರ್ಯ, ಸಂತೋಷ ಕುಮಾರ್ ಶೆಟ್ಟಿ, ಸೂರ್ಯನಾಥ ಆಳ್ವ, ಡಾ.ರವೀಂದ್ರರವರನ್ನು ಆಯ್ಕೆ ಮಾಡಲಾಯಿತು.
ಸಮಿತಿ ಸದಸ್ಯರಾದ ಹರಿನಾರಾಯಣ ಮಾಡಾವು, ಜಗನ್ನಾಥ ರೈ, ಸಂತೋಷ ಶೆಟ್ಟಿ, ಡಾ.ಸತ್ಯವತಿ ಆಳ್ವ, ಕ್ಸೇವಿಯರ್ ಡಿ’ಸೋಜ, ಇಂದಿರಾ ಪಿ.ಆಚಾರ್ಯ, ಡಾ.ರವೀಂದ್ರ, ಡಾ.ಶ್ರೀಷ ಕುಮಾರ್, ಸಂದೀಪ್ ರೈ ಚಿಲ್ಮೆತ್ತಾರು, ಮಹೇಶ್ ಗೌಡ, ಮನೋಜ್ ಶೆಟ್ಟಿ, ಸೂರ್ಯನಾಥ ಆಳ್ವ, ಆಸ್ಕರ್ ಆನಂದ್, ವನಿತಾ ಯಧುಕುಮಾರ್, ಸುಭಾಷ್ ರೈ ಬೆಳ್ಳಿಪ್ಪಾಡಿ ಸಭೆಯಲ್ಲಿ ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷ ಎ.ವಿ ನಾರಾಯಣ ಸ್ವಾಗತಿಸಿದರು. ಕೋಶಾಧಿಕಾರಿ ದತ್ತಾತ್ರೇಯ ರಾವ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಜಗಜ್ಜೀವನ್‌ದಾಸ್ ರೈ ವಾರ್ಷಿಕ ವರದಿ ಮಂಡಿಸಿದರು. ಕಾರ್ಯದರ್ಶಿ ಎಂ.ಎಸ್ ಅಮ್ಮಣ್ಣಾಯ ಲೆಕ್ಕಪತ್ರ ಮಂಡಿಸಿದರು. ಯಧುಕುಮಾರ್ ಅಭಿನಂದನಾ ಭಾಷಣ ಮಾಡಿದರು. ಜತೆ ಕಾರ್ಯದರ್ಶಿ ನಿತಿನ್ ಪಕ್ಕಳ ವಂದಿಸಿದರು.

LEAVE A REPLY

Please enter your comment!
Please enter your name here