ಮಾಂಡೋವಿ ಮೋಟಾರ್ಸ್‌ನಿಂದ ಗ್ರಾಹಕರ ಸ್ನೇಹ ಸಂಗಮ

0

ಪುತ್ತೂರು: ಉಪ್ಪಿನಂಗಡಿ ಮಾಂಡೋವಿ ಮೋಟಾರ್‍ಸ್ ವತಿಯಿಂದ ಗುರುವಾಯನಕೆರೆ ಹವ್ಯಕ ಭವನದಲ್ಲಿ ಜೂ.25ರಂದು ಗ್ರಾಹಕರ ಸ್ನೇಹ ಸಂಗಮ ಕಾರ್ಯಕ್ರಮ ಜರುಗಿತು.


ಉಜಿರೆಯ ಉದ್ಯಮಿ, ಸಮಾಜಸೇವಕಿ ವಿಜಯಲಕ್ಷ್ಮಿ, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ ಹೆರಾಲ್ಡ್ ಪಿಂಟೊ, ಬೆಳ್ತಂಗಡಿ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ, ಸೋನ್ಸ್ ಪೈಂಟ್‌ನ ರೊನಾಲ್ಡ್ ಜಯಕರ್ ಸೋನ್ಸ್, ಗುತ್ತಿಗೆದಾರ ಸುಜಯ್ ನಾಗೇಂದ್ರ ಅಡೂರು, ಕುವೆಟ್ಟು ಗ್ರಾಮ ಪಂಚಾಯತ್ ಉದ್ಯೋಗಿ ಆನಂದ, ಉದ್ಯಮಿ ಕೆ.ಎಸ್. ನಿರಂಜನ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.


ಅಕ್ಷಯ್ ಕುಮಾರ್ ತಂತ್ರಜ್ಞಾನದ ಬಗ್ಗೆ ವಿವರಿಸಿದರು. ಉಪ್ಪಿನಂಗಡಿ ಶಾಖೆಯ ಮ್ಯಾನೇಜರ್ ಚಂದ್ರಶೇಖರ್ ಸನಿಲ್ ಮಾತನಾಡಿ ಮಾಂಡೋವಿ ಮೋಟಾರ್‍ಸ್ ಉಪ್ಪಿನಂಗಡಿ ಶಾಖೆ ಬೆಳೆದು ಬಂದ ರೀತಿಯನ್ನು ವಿವರಿಸಿದರು. ಮಾಂಡೋವಿ ಮೋಟಾರ್‍ಸ್‌ನ ಸೇಲ್ಸ್ ಆಪೀಸರ್‌ಚರಣ್ ಕುಮಾರ್ ರವರನ್ನು ಉತ್ತಮ ಸಾಧನೆಗಾಗಿ ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸುಜುಕಿ ಕಂಪನಿಯ ಮಾಂಡೋವಿ ಮೋಟಾರ್ಸ್‌ನ ಡಿಜಿಎಂ ಶಶಿಧರ್ ಕಾರಂತ್ ಸ್ವಾಗತಿಸಿದರು. ಮಾಂಡೋವಿ ಮೋಟಾರ್‍ಸ್‌ನ ಎಎಸ್‌ಎಮ್ ಸುಜಿತ್ ಕುಮಾರ್ ವಂದಿಸಿದರು. ಮುರಳೀಧರ್ ಬಾರಧ್ವಾಜ್ ನಿರೂಪಿಸಿದರು. ಕಿಶನ್ ಶೆಟ್ಟಿ, ಸುಪಾಶ್ವ ಶೆಟ್ಟಿ, ಗಿರೀಶ್ ಎಲ್.ಪಿ., ಪ್ರದೀಪ್, ಸುರೇಶ್ ಬಿ.ಜಿ., ಶ್ರೀಹರ್ಷ ರೈ, ಸುನಿಲ್ ಕುಮಾರ್, ಚೇತನ್, ಡೆನ್ಸಿಲ್ ಪಿಂಟೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here