ಪ್ರಧಾನ ಮಂತ್ರಿ ವನಧನ ವಿಕಾಸ ಯೋಜನೆ, ಕಿರು ಅರಣ್ಯ ಉತ್ಪನ್ನಗಳಿಗೆ ಮೌಲ್ಯವರ್ಧಿತ ಮಾರುಕಟ್ಟೆ: ಬೆಟ್ಟಂಪಾಡಿಯಲ್ಲಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

0

ಬೆಟ್ಟಂಪಾಡಿ: ಪ್ರಧಾನ ಮಂತ್ರಿ ವನಧನ ವಿಕಾಸ ಯೋಜನೆಯ ಮೂಲಕ ಗ್ರಾಮೀಣ ಭಾಗದ ಪರಿಶಿಷ್ಟ ಪಂಗಡದ ಮಹಿಳೆಯರು ಸ್ವಾವಲಂಬಿ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಕಿರು ಅರಣ್ಯ ಉತ್ಪನ್ನಗಳಿಗೆ ಮೌಲ್ಯವರ್ಧಿತ ಮಾರುಕಟ್ಟೆ ಒದಗಿಸಲು ತರಬೇತಿ ಕಾರ್ಯಾಗಾರದ ಉದ್ಘಾಟನೆ ಬೆಟ್ಟಂಪಾಡಿ ಗ್ರಾ.ಪಂ. ಸಮುದಾಯ ಭವನದಲ್ಲಿ ಜೂ. 28ರಂದು ಜರಗಿತು.

ಚಿತ್ರ: ಶ್ರೀಹರಿ ರೆಂಜ

ಗ್ರಾಮ ಪಂಚಾಯತ್ ಬೆಟ್ಟಂಪಾಡಿ, ಪಾಣಾಜೆ ಹಾಗೂ ನಿಡ್ಪಳ್ಳಿ ಮತ್ತು ಶ್ರೀ ವನದುರ್ಗಾ ವನಧನ ವಿಕಾಸ ಕೇಂದ್ರ ಸಮಿತಿ ಇವರ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೆ.ಎಸ್. ರಂಗನಾಥ ರೈ ಗುತ್ತುರವರು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮಾತನಾಡಿದರು. ‘ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತ ಕನಸಿನಂತೆ ಎಲ್ಲರೂ ತನ್ನ ಕಾಲಿನಲ್ಲಿ ನಿಂತು ಬದುಕುವವರಾಗಬೇಕು. ಆ ದಿಶೆಯಲ್ಲಿ ಈ ತರಬೇತಿ ಉತ್ತಮ ಫಲಿತಾಂಶ ನೀಡಲಿ’ ಎಂದು ಶುಭ ಹಾರೈಸಿದರು.

ಶ್ರೀ ವನದುರ್ಗಾ ವನಧನ ವಿಕಾಸ ಕೇಂದ್ರ ಸಮಿತಿಯ ಅಧ್ಯಕ್ಷೆ ವಸಂತಿ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಡಿ., ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಗುತ್ತು, ಪಾಣಾಜೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಭಟ್, ಉಪಾಧ್ಯಕ್ಷ ಅಬೂಬಕ್ಕರ್, ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಗೀತಾ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನದ್ ಕುಮಾರ್ ಭಂಡಾರಿ, ಎನ್‌ಆರ್‌ಎಲ್‌ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಪಾಣಾಜೆ ಪಂಚಾಯತ್ ಪಿಡಿಒ ಚಂದ್ರಮತಿ, ನಿಡ್ಪಳ್ಳಿ ಪಂಚಾಯತ್ ಪಿಡಿಒ ಸಂಧ್ಯಾಲಕ್ಷ್ಮಿ, ಸಂಜೀವಿನಿ ಬೆಟ್ಟಂಪಾಡಿ ಒಕ್ಕೂಟದ ಅಧ್ಯಕ್ಷೆ ಅಶ್ವಿನಿ, ಪಾಣಾಜೆ ಒಕ್ಕೂಟದ ಅಧ್ಯಕ್ಷೆ ಅನಿತಾ, ನಿಡ್ಪಳ್ಳಿ ಒಕ್ಕೂಟದ ಅಧ್ಯಕ್ಷೆ ಆಶಾಲತ, ವನದುರ್ಗಾ ವನಧನ ವಿಕಾಸ ಕೇಂದ್ರ ಸಮಿತಿಯ ಕಾರ್ಯದರ್ಶಿ ಮಮತಾ ಉಪಸ್ಥಿತರಿದ್ದರು. ಮಧು ಮಲ್ಪಿಪ್ಲೆಸ್‌ನ ವೆಂಕಟಕೃಷ್ಣ ಮತ್ತು ಪಿಂಗಾರ ತೋಟಗಾರಿಕಾ ರೈತ ಉತ್ಪಾದನಾ ಕಂಪೆನಿಯ ಸಿಇಒ ಪ್ರದೀಪ್‌ರವರು ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು.

ಜೊತೆ ಕಾರ್ಯದರ್ಶಿ ಲೋಲಾಕ್ಷಿ ಸ್ವಾಗತಿಸಿ, ಬೆಟ್ಟಂಪಾಡಿ ಗ್ರಾ.ಪಂ. ಕಾರ್ಯದರ್ಶಿ ಬಾಬು ನಾಯ್ಕ್ ವಂದಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ನಮಿತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮೂರೂ ಪಂಚಾಯತ್‌ಗಳ ಸದಸ್ಯರು, ಪ್ರಮುಖರು, ಸಂಜೀವಿನಿ ಒಕ್ಕೂಟದ ಸದಸ್ಯರು ಪಾಲ್ಗೊಂಡು ತರಬೇತಿಯ ಸದುಪಯೋಗ ಪಡೆದುಕೊಂಡರು.

[box type=”info” bg=”#” color=”#” border=”#” radius=”16″]ತಾಲೂಕಿನಲ್ಲಿ ಪ್ರಥಮ ಕಾರ್ಯಕ್ರಮ
ಮಹಿಳೆಯರಿಗೆ ಉದ್ಯೋಗಾವಕಾಶ
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ)ನ ತಾಲೂಕು ವ್ಯವಸ್ಥಾಪಕ ಜಗತ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ ‘ಪರಿಶಿಷ್ಟ ಪಂಗಡ ಅಥವಾ ಬುಡಕಟ್ಟು ಜನಾಂಗದ ಮಹಿಳೆಯರು ಉದ್ಯೋಗಾವಕಾಶ ಪಡೆದು ಆ ಮೂಲಕ ಸ್ವಾವಲಂಬಿ ಬದುಕು ಕಲ್ಪಿಸುವಂತಾಗಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಈ ವನಧನ ವಿಕಾಸ ಕೇಂದ್ರ ರಚನೆಗೊಂಡಿದೆ. ಇದರ ಮೂಲಕ ಕೆಲವೊಂದು ಕಿರು ಕಾಡುತ್ಪತ್ತಿ ಹಣ್ಣುಗಳನ್ನು ಬೆಳೆಯಲು, ಸಂಸ್ಕರಿಸಲು ಮತ್ತು ಅದಕ್ಕೆ ಮೌಲ್ಯವರ್ಧಿತ ಮಾರುಕಟ್ಟೆಯನ್ನು ಒದಗಿಸುವ ಉದ್ದೇಶ ಇರಿಸಲಾಗಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ೩೦೦ ಮಂದಿ ಮಹಿಳೆಯರಿಗೆ ಉದ್ಯೋಗ ಅವಕಾಶ ದೊರಕಿದಂತಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ೨ ಕಡೆ ನಡೆಯುವ ಈ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಗಿಗೆ ಒಂದು ಗುರಿ ಹೊಂದಲಾಗಿದ್ದು ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ ಗ್ರಾಮ ಕೇಂದ್ರಿತವಾಗಿ ಈ ಯೋಜನೆಯನ್ನು ತರಲಾಗಿದೆ’ ಎಂದರು.[/box]

LEAVE A REPLY

Please enter your comment!
Please enter your name here