ಕರ್ನಾಟಕ ರಾಜ್ಯ ಪಾಣರ,ಅಜಿಲ ಯಾನೆ ನಲಿಕೆ ಸಮಾಜ ಸೇವಾ ಸಂಘದ ಮಹಾಸಭೆ

0

  • ಅಧ್ಯಕ್ಷ: ರವಿ ಎಂಡೆಸಾಗು, ಪ್ರ.ಕಾರ್ಯದರ್ಶಿ: ಕೃಷ್ಣ ಬುಳೇರಿಕಟ್ಟೆ

 

ಪುತ್ತೂರು: ಕರ್ನಾಟಕ ರಾಜ್ಯ ಪಾಣರ ,ಅಜಿಲ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಪುತ್ತೂರು ಇದರ ಮಹಾಸಭೆಯು ಜೂ.26 ರಂದು ಪುತ್ತೂರಿನ ಸೇಡಿಯಾಪು ಅಂಬೇಡ್ಕರ್ ಭವನದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರಾದ ನಾರಾಯಣ ಸಾಲ್ಯನ್ ಸೇಡಿಯಾಪು ಹಾಗೂ ಕಾಂತಪ್ಪ ಸವಣೂರು ಗಿಡ ನೆಡುವ ಮೂಲಕ ಉದ್ಘಾಟಿಸಿದರು.

 


ಸಂಘದ ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಅಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರವಿ ಎಂಡೆಸಾಗು, ಉಪಾಧ್ಯಕ್ಷರಾಗಿ ಶ್ರೀಧರ ಪೆರ್ಲಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಬುಳೇರಿಕಟ್ಟೆ ಹಾಗೂ ಇನ್ನಿತರ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ಮತ್ತೊಮ್ಮೆ ಪುತ್ತೂರಿನ ಬಲಿಷ್ಠ ಸಮಿತಿಯನ್ನು ರಚಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸುಬ್ರಾಯ ಕಲ್ಮಂಜ ವಹಿಸಿ ರಾಜ್ಯ ಸಮಿತಿಯ ಪ್ರಮುಖ ಸಲಹೆಗಾರ ವಿಜಯ್ ಪಾಂಡಿ, ಬಂಟ್ವಾಳ ತಾಲೂಕು ಸಂಘದ ಅಧ್ಯಕ್ಷ ರಮೇಶ್ ಕಡಂಬು, ಚಂದ್ರ ಇದ್ಪಾಡಿ, ದೇವಪ್ಪ ಕೋಯಿನಾಡು, ಡೊಂಬಯ್ಯ ಕಾಪೆಜಾಲು, ಮೋನಪ್ಪ ಮಾಡಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ಯ ಸಮಿತಿಯನ್ನು ಇನ್ನೊಂದು ವರ್ಷದ ಅವಧಿಗೆ ಮುಂದುವರೆಸಲಾಯಿತು.


ಸನ್ಮಾನ, ಸಸಿ ವಿತರಣೆ
ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಕಿಟ್ಟ ಅಜಿಲ ಮಾಡವುರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಭೆಗೆ ಬಂದಿರುವ ಅತಿಥಿಗಳಿಗೆ ಹಾಗೂ ಸಮಾಜ ಬಂಧುಗಳಿಗೆ ಚಂದ್ರ ಇದ್ಪಾಡಿಯವರು ನೆನಪಿನ ಕಾಣಿಕೆಯಾಗಿ ಸಸಿಗಳನ್ನು ವಿತರಿಸಿದರು. ದೈವ ನರ್ತಕರ ಕಾರ್ಡುಗಳನ್ನು ಮಾಡಿ ಕೊಡಲಾಯಿತು. ಉಪಾಧ್ಯಕ್ಷ ರಾಮಣ್ಣ ಪಿಲಿಂಜ ಸ್ವಾಗತಿಸಿದರು. ಕೇಶವ ಕಬಕ ಪ್ರಾರ್ಥಿಸಿದರು. ಕಾರ್ಯದರ್ಶಿ ದೇವಿದಾಸ್ ಕುರಿಯ ಕಾರ್ಯಕ್ರಮ ನಿರೂಪಿಸಿದರು. ದೇವದಾಸ್ ಕುರಿಯ ವಂದಿಸಿದರು.ರಾಜ್ಯ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಊಟದ ವ್ಯವಸ್ಥೆಯನ್ನು ರವಿ ಎಂಡೆಸಾಗು, ನಾರಾಯಣ ಸಾಲ್ಯಾನ್ ಸೇಡಿಯಾಪು ವ್ಯವಸ್ಥೆ ಮಾಡಿದ್ದರು.
ಚಿತ್ರ: ರವಿ, ಕೃಷ್ಣ

LEAVE A REPLY

Please enter your comment!
Please enter your name here