ನಿಡ್ಪಳ್ಳಿ ದೇವಸ್ಯ ರಸ್ತೆಯಲ್ಲಿ ನೀರು-ನಿಡ್ಪಳ್ಳಿ ರೆಂಜ ಸಂಪರ್ಕ ಕಡಿತ, ತ್ರಿಶಂಕು ಸ್ಥಿತಿಯಲ್ಲಿ ಜನತೆ

0

ನಿಡ್ಪಳ್ಳಿ; ನಿಡ್ಪಳ್ಳಿಯಿಂದ ರೆಂಜ ಬೆಟ್ಟಂಪಾಡಿ ಸಂಪರ್ಕಿಸಲು ಇದ್ದ ಏಕೈಕ ಬದಲಿ ರಸ್ತೆಯಾದ ದೇವಸ್ಯದಲ್ಲಿ ವಿಪರೀತ ಮಳೆಯಿಂದಾಗಿ  ನೀರು ತುಂಬಿ ವಾಹನ ಸವಾರರಿಗೆ ಅಡಚಣೆ ಉಂಟಾದ ಕಾರಣ ನಿಡ್ಪಳ್ಳಿಯಿಂದ ಬೆಟ್ಟಂಪಾಡಿ ಸಂಪರ್ಕ ಕಡಿತಗೊಂಡಿದೆ.
ಕೂಟೇಲು ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ ನಂತರ ಮುಡ್ಪಿನಡ್ಕ ಬೆಟ್ಟಂಪಾಡಿ ರಸ್ತೆ  ಸಂಪರ್ಕ ಕಡಿತ ಗೊಳಿಸಲಾಗಿತ್ತು.ಈ ಭಾಗದ ಜನರಿಗೆ ಬೆಟ್ಟಂಪಾಡಿ ಸಂಪರ್ಕಕ್ಕೆ ಇದ್ದ ಏಕೈಕ ರಸ್ತೆ ಈ ದೇವಸ್ಯ ರಸ್ತೆಯಲ್ಲಿ ಒಂದು ತೋಡು ಇದ್ದು ಅದರಲ್ಲಿ ಈಗ ನೀರು ಯಥೇಚ್ಛವಾಗಿ ಬರುತ್ತಿದೆ.ಇಲ್ಲಿ ಮಳೆಗಾಲದಲ್ಲಿ ತೋಡು, ಬೇಸಿಗೆ ಕಾಲದಲ್ಲಿ ರೋಡು ಆಗಿದ್ದು ಈಗ ಮಳೆ ಜೋರಾಗಿ ಬರುವುದರಿಂದ ಸಂಚಾರಕ್ಕೆ ಆಗುತ್ತಿಲ್ಲ.ಆದುದರಿಂದ ವಿದ್ಯಾರ್ಥಿಗಳು, ದಿನಂಪ್ರತಿ ಕೆಲಸ ವ್ಯವಹಾರಗಳಿಗೆ ಹೋಗುವ ಜನರು ಇಲ್ಲಿ ಸಂಚರಿಸಲು ತೊಂದರೆಯಾಗಿದೆ.ಅಲ್ಲದೆ ಎಂಪೆಕಲ್ಲು ಬೆಟ್ಟಂಪಾಡಿ ಸಂಪರ್ಕ ರಸ್ತೆಯಲ್ಲಿ ಕೂಡ ಈಗ ಸಂಚಾರ ಸ್ಥಗಿತಗೊಂಡ ಕಾರಣ ಈ ಭಾಗದ ಜನರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

LEAVE A REPLY

Please enter your comment!
Please enter your name here